newsfirstkannada.com

ಪಾರ್ಕಿಂಗ್​​ ಮಾಡೋ ಮುನ್ನ ಹುಷಾರ್​​; ಧಗಧಗನೇ ಹೊತ್ತಿ ಉರಿದ ಕಾರುಗಳು

Share :

04-08-2023

  ವಾಹನ ಚಾಲಕರೇ ಪಾರ್ಕಿಂಗ್​​ ಮಾಡುವಾಗ ಎಚ್ಚರ

  ಟ್ರಾನ್ಸ್​ಫಾರ್ಮರ್​​ ಬಳಿ ಪಾರ್ಕಿಂಗ್ ಮಾಡಿದ್ದ ಕಾರು

  ಈ ಕಾರಣಕ್ಕೆ ಕಾರುಗಳು ಧಗಧಗ ಹೊತ್ತಿ ಉರಿದವು!

ಬೆಂಗಳೂರು: ಬ್ಲಾಸ್ಟ್ ಆದ ಪರಿಣಾಮ ಸ್ಥಳದಲ್ಲೇ ಎರಡು ಕಾರುಗಳು ಧಗಧಗನೆ ಹೊತ್ತಿ ಉರಿದ ಘಟನೆ ಬಾಣಸವಾಡಿ ಬಳಿಯ ಸ್ಪೆನ್ಸರ್ ರೋಡ್​ನಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಬೆನ್ಜ್ ಹಾಗೂ ಮಾರುತಿ ಕಂಪನಿಯ ಕಾರು​ಗಳು ಸುಟ್ಟು ಭಸ್ಮಗೊಂಡಿವೆ.

ಬೆಂಕಿಯ ಕೆನ್ನಾಲಿಗೆ ಸುಟ್ಟು ಭಸ್ಮಗೊಂಡ ಕಾರುಗಳು

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಟ್ರಾನ್ಸ್​​ಫಾರ್ಮರ್ ಬ್ಲಾಸ್ಟ್ ಆಗುವ ಮುನ್ನ ಲೈನ್​​ಮೆನ್ ಕೆಳಗಡೆ ನಿಂತುಕೊಂಡಿದ್ದ. ಇದೇ ವೇಳೆ ಏಕಾಏಕಿ ಟ್ರ್ಯಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿದೆ. ಇನ್ನು ಟ್ರ್ಯಾನ್ಸ್ ಫಾರ್ಮರ್ ಪಕ್ಕದಲ್ಲಿ ಪಾರ್ಕ್ ಮಾಡಿದ್ದ ಎರಡು ಕಾರುಗಳು ಸುಟ್ಟು ಕರಕಲಾಗಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ಸಂಬಂಧ ಬಾಣಸವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾರ್ಕಿಂಗ್​​ ಮಾಡೋ ಮುನ್ನ ಹುಷಾರ್​​; ಧಗಧಗನೇ ಹೊತ್ತಿ ಉರಿದ ಕಾರುಗಳು

https://newsfirstlive.com/wp-content/uploads/2023/08/bng-2.jpg

Load More