newsfirstkannada.com

ಹಾವೇರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎರಡು ದಿನದ ತರಬೇತಿ; ರೈತರು ಮತ್ತು ಪೀಡೆನಾಶಕ ವಿತರಕರು ಭಾಗಿ

Share :

13-09-2023

    ಎರಡು ದಿನಗಳ ಸಮಗ್ರ ಪೀಡೆ ನಿರ್ವಹಣಾ ತರಬೇತಿ ಕಾರ್ಯಕ್ರಮ

    ಸಸ್ಯಸಂರಕ್ಷಣೆ, ಸಂಘರೋಧ ಮತ್ತು ಸಂಗ್ರಹಣಾ ನಿರ್ದೇಶನಾಲಯ

    ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರ ಆಯೋಜನೆ

ಹಾವೇರಿ: ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿಯಲ್ಲಿ ಎರಡು ದಿನಗಳ ಸಮಗ್ರ ಪೀಡೆ ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಸ್ಯಸಂರಕ್ಷಣೆ, ಸಂಘರೋಧ ಮತ್ತು ಸಂಗ್ರಹಣಾ ನಿರ್ದೇಶನಾಲಯದಡಿಯಲ್ಲಿ, ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರ ಬೆಂಗಳೂರು ಇವರ ಎರಡು ದಿನದ ತರಬೇತಿಯಲ್ಲಿ ಅನೇಕ ರೈತರು ಮತ್ತು ಪೀಡೆನಾಶಕ ವಿತರಕರು ಪಾಲ್ಗೊಂಡಿದ್ದರು.

ಡಾ.ಎ. ಸಿದ್ದಿಕ್ಕಿ, ಜಂಟಿ ನಿರ್ದೇಶಕರು (ಕೀಟಶಾಸ್ತ್ರ), ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರ, ಬೆಂಗಳೂರು, ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಗ್ರ ಪೀಡೆ ನಿರ್ವಹಣೆಯ ಪ್ರಾಮುಖ್ಯತೆ ಮತ್ತು ಅನಿವಾರ್ಯತೆಯನ್ನು ತಿಳಿಸಿದರು. ಶ್ರೀ. ರೇವಣ ಸಿದ್ದಗೌಡ, ಎಚ್. ಕೆ. ಉಪ ಕೃಷಿ ನಿರ್ದೇಶಕರು, ರಾಣೇಬೆನ್ನೂರು, ಮತ್ತು ವಿಜಯಕುಮಾರ್ ಎಂ. ಕೆ., ಸಹಾಯಕ ಕೃಷಿ ನಿರ್ದೇಶಕರು, ದೇವಿಹೊಸೂರು, ಇವರು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿದ್ದರು.

ಡಾ. ಜೆ.ಎಸ್. ಹಿಲ್ಲಿ, ಡೀನ್, ಕೃಷಿ ವಿಶ್ವವಿದ್ಯಾಲಯ, ಹನುಮನಮಟ್ಟಿ, ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಸಮತೋಲನ ಮನುಕುಲದ ಉಳಿವಿಗೆ ಕಾರಣವೆಂದು ತಿಳಿಸಿದರು. ರೈತ ಬಾಂಧವರಿಗೆ ತಾಲೂಕಿನ ಪ್ರಮುಖ ಬೆಳೆಗಳಾದ ಮುಸುಕಿನ ಜೋಳ, ಹತ್ತಿ ಇತರೆ ಬೆಳೆಗಳಲ್ಲಿ ಸಮಗ್ರ ಪೀಡೆ ನಿರ್ವಹಣಾ ಕ್ರಮಗಳನ್ನು ಪಾಲಿಸಲು ಉತ್ತೇಜಿಸಿದರು.
ಡಾ. ವಿವೇಕ್ ಉಪ್ಪಾರ್, ಸಸ್ಯ ಸಂರಕ್ಷಣಾ ಅಧಿಕಾರಿ, ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರ, ಬೆಂಗಳೂರು, ಇವರು ಮಿತ್ರ-ಶತ್ರು ಕೀಟಗಳ ಪರಿಚಯ ಮತ್ತು ಪೀಡೆನಾಶಕಗಳ ಸುರಕ್ಷಿತ ಬಳಕೆಯ ಬಗ್ಗೆ ಉಪನ್ಯಾಸ ನೀಡಿದರು.

ಡಾ. ವಿನಯ್, ಜೆ. ಯು., ಸಹಾಯಕ ಸಸ್ಯ ಸಂರಕ್ಷಣಾ ಅಧಿಕಾರಿ, ಬೆಂಗಳೂರು, ಇವರು ಸಮಗ್ರ ರೋಗ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಡಾ. ಶಾಂತವೀರಯ್ಯ, ವಿಜ್ಞಾನಿ (ಕೃಷಿ ಹವಾಮಾನ), ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ, ಇವರು ಬೆಳೆಗಳಲ್ಲಿ ಕೀಟ ಹಾಗು ರೋಗಗಳ ನಿರ್ವಹಣೆಯಲ್ಲಿ ಹವಾಮಾನ ಮುನ್ಸೂಚನೆಯ ಪಾತ್ರದ ಕುರಿತು ಉಪನ್ಯಾಸ ನೀಡಿದರು. ಡಾ, ಗುರುಪ್ರಸಾದ್, ಜಿ. ಎಸ್., ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ, ಇವರು ಜೋಳ ಮತ್ತು ಹತ್ತಿ ಬೆಳೆಗಳಲ್ಲಿ, ಸಮಗ್ರ ಪೀಡೆ ನಿರ್ವಹಣೆಯ ಕುರಿತು ಉಪನ್ಯಾಸ ನೀಡಿದರು. ಡಾ. ರವಿಕುಮಾರ್, ಎಂ., ಹಿರಿಯ ವಿಜ್ಞಾನಿ (ಸಸ್ಯರೋಗ ಶಾಸ್ತ್ರ) ಇವರು ವಿವಿಧ ತೋಟಗಾರಿಕಾ ಬೆಳೆಗಳಲ್ಲಿ ಸಮಗ್ರ ರೋಗ ನಿರ್ವಣೆಯ ಕುರಿತು ಉಪನ್ಯಾಸ ನೀಡಿದರು. ಡಾ. ವಿವೇಕ್ ಉಪ್ಪಾರ್, ಡಾ. ಎಂ. ರಂಜಿತ್ ಮತ್ತು ಡಾ. ವಿನಯ್, ಜೆ. ಯು., ಸಸ್ಯ ಸಂರಕ್ಷಣಾ ಅಧಿಕಾರಿಗಳು ರೈತರಿಗೆ ಸಮಗ್ರ ಪೀಡೆ ನಿರ್ವಹಣೆ ಕುರಿತ ವಸ್ತು ಪ್ರದರ್ಶನವನ್ನು ನಡೆಸಿಕೊಟ್ಟು, ಅವುಗಳ ಬಗ್ಗೆ ವಿವರಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಹಾವೇರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎರಡು ದಿನದ ತರಬೇತಿ; ರೈತರು ಮತ್ತು ಪೀಡೆನಾಶಕ ವಿತರಕರು ಭಾಗಿ

https://newsfirstlive.com/wp-content/uploads/2023/09/Agriculture-VV-1.jpg

Load More