newsfirstkannada.com

VIDEO: ಕಾರ್​​, ಬೈಕ್​​ ಮಧ್ಯೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರು ಸಾವು!

Share :

06-11-2023

  ಇದು ಅಕ್ಷರಶಃ ಹೃದಯ ವಿದ್ರಾವಕ ಅಪಘಾತ!

  ಌಕ್ಟಿವಾ ಮತ್ತು ಸ್ವಿಫ್ಟ್ ಡಿಸೈರ್​ ನಡುವೆ ಡಿಕ್ಕಿ..!

  ಸ್ಥಳದಲ್ಲೇ ಇಬ್ಬರು ಸಾವು! ಒಬ್ಬಾಕೆ ಗಂಭೀರ

ಅಹಮದಾಬಾದ್: ಪ್ರಯಾಣ ವಿಚ್ ಈಕ್ವಲ್ಸ್ ಟು ‘ಪ್ರಾಣ’ಯಾನ ಅಂತಾರೆ. ಸಂಚರಿಸಬೇಕಾದ್ರೆ ಒಂದೇ ಒಂದು ಸೆಕೆಂಡ್​ ಕಣ್ಣು ಮಿಟುಕಿಸಿದ್ರೂ ಪ್ರಾಣವೇ ಹೋಗುತ್ತೆ. ಇಂಥದ್ದೇ ಈಗ ಒಂದು ಘಟನೆ ನಡೆದಿದೆ.

ಹೌದು, ಗುಜರಾತ್​ನ ಬೋರಸಾಡ್ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಬೈಕ್​ ಮೇಲೆ ತಂದೆ, ತಾಯಿ ಹಾಗೂ ಪುಟ್ಟ ಮಗಳು ಹೋಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಕಾರು ಅವರ ಌಕ್ಟಿವಾಗೆ ಡಿಕ್ಕಿ ಹೊಡೆದಿದೆ. ಘರ್ಷಣೆ ಎಷ್ಟು ಭೀಕರವಾಗಿತ್ತು ಎಂದರೆ, ಕಾರು ಗುದ್ದಿದ ರಭಸಕ್ಕೆ ಬೈಕ್​ನಲ್ಲಿ ಹಿಂದೆ ಕುಳಿತ್ತಿದ್ದ ತಾಯಿ ಸುಮಾರು 10 ರಿಂದ 15 ಅಡಿಗಳಷ್ಟು ಗಾಳಿಯಲ್ಲಿ ಹಾರಿ ಬಿದಿದ್ದು, ಆಕೆಯ ಪರಿಸ್ಥತಿ ಚಿಂತಾಜನಕವಾಗಿದೆ.

ಬೈಕ್​ ಚಲಾಯಿಸುತ್ತಿದ್ದ ಚಾಲಕ 10 ಅಡಿಯಷ್ಟು ಮೇಲಕ್ಕೆ ಹಾರಿ ಬಿದ್ರು ನೆಲಕ್ಕೆ ನೇರ ತಲೆ ಹೊಡೆದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಹೃದಯ ವಿದ್ರಾವಕ ಅಂದ್ರೆ, ಬೈಕ್​ನಲ್ಲಿ ಮುಂದೆ ಕುಳಿತ್ತಿದ್ದ ಪುಟ್ಟ ಮಗಳು ಕಾರು ಡಿಕ್ಕಿಯಾದ ಫೋರ್ಸ್​ಗೆ ನಜ್ಜುಗುಜ್ಜಾಗಿದ್ದಾಳೆ. ಅಲ್ಲದೇ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಹೀಗೆ ಎಲ್ಲರನ್ನೂ ಗುದ್ದಿ ಮುಂದಕ್ಕೆ ಹೋದ ಕಾರು ರಸ್ತೆ ಬದಿಯ ಹಳ್ಳಕ್ಕೆ ಇಳಿದಿದೆ.. ಅಪಘಾತದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕಾರ್​​, ಬೈಕ್​​ ಮಧ್ಯೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರು ಸಾವು!

https://newsfirstlive.com/wp-content/uploads/2023/11/Accident_News.jpg

Load More