newsfirstkannada.com

ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು ಇಬ್ಬರು ಯುವಕರು ಸಾವು

Share :

30-07-2023

    ಹಳ್ಳದ ದಂಡೆಯಲ್ಲಿ ಕುಳಿತಿದ್ದ ವರುಣ್ ಹಾಗೂ ವೀಕ್ಷಿತ್ ಸಾವು

    ಹೊರವಲಯದ ಪಡೀಲ್ ಅಳಪೆ ಎಂಬಲ್ಲಿ ನಡೆದ ಘಟನೆ

    ಯುವಕರ ಮೃತದೇಹ ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿ

ಮಂಗಳೂರು: ಆಯತಪ್ಪಿ ಹಳ್ಳಕ್ಕೆ ಬಿದ್ದು ಯುವಕರಿಬ್ಬರು ದಾರುಣವಾಗಿ ಸಾವನ್ನಪ್ಪಿರೋ ಘಟನೆ ಹೊರವಲಯದ ಪಡೀಲ್ ಅಳಪೆ ಎಂಬಲ್ಲಿ ನಡೆದಿದೆ. ಅಳಪೆ ನಿವಾಸಿ ವರುಣ್ (27), ಎಕ್ಕೂರು ನಿವಾಸಿ ವೀಕ್ಷಿತ್ (28) ಮೃತ ಯುವಕರು.

ಮೃತ ಇಬ್ಬರು ಕ್ರಿಕೆಟ್ ಆಡಲು ತೆರಳಿದ್ದರು. ವರುಣ್ ಹಾಗೂ ವೀಕ್ಷಿತ್ ಹಳ್ಳದ ದಂಡೆಯಲ್ಲಿ ಕುಳಿತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಹರಿಯುವ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು ಇಬ್ಬರು ಯುವಕರು ಸಾವು

https://newsfirstlive.com/wp-content/uploads/2023/07/death-12.jpg

Load More