newsfirstkannada.com

ಮೊನ್ನೆ ಅಶ್ವಥಾಮ.. ಇಂದು ಗಂಗಾಶ್ರೀ ಸಾವು.. ಒಂದೇ ವಾರದಲ್ಲಿ ಮೂರು ಆನೆಗಳು ಸಾವು

Share :

Published June 19, 2024 at 10:46am

  ಮೈಸೂರಲ್ಲಿ ಮತ್ತೊಂದು ಆನೆ ಸಾವನ್ನಪ್ಪಿದೆ ಎಂದು ಮಾಹಿತಿ

  25 ರಿಂದ 30 ವರ್ಷದ ಕಾಡಾನೆ ಸಾವನ್ನಪ್ಪಿರುವ ವರದಿ

  ಎಡೆಯೂರು ದೇಗುಲದ ಗಂಗಶ್ರೀ ಆನೆಯೂ ಸಾವು

ಮೈಸೂರು/ಕೋಲಾರ: ಒಂದೇ ವಾರದಲ್ಲಿ ಮೂರು ಆನೆಗಳು ಸಾವನ್ನಪ್ಪಿದ್ದು, ಆಘಾತಕಾರಿ ಪ್ರಕರಣದ ಬಗ್ಗೆ ಅರಣ್ಯ ಇಲಾಖೆ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕಿದೆ. ಜೂನ್ 11 ರಂದು ಮೈಸೂರು ದಸರಾ ಆನೆ ಅಶ್ವಥಾಮ ಸಾವನ್ನಪ್ಪಿದ್ದ. ಇಂದು ಮತ್ತೆರಡು ಆನೆಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಮೈಸೂರಲ್ಲಿ ಮತ್ತೊಂದು ಆನೆ ಸಾವು
ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸಾವನ್ನಪ್ಪಿದೆ. 25 ರಿಂದ 30 ವರ್ಷದ ಕಾಡಾನೆ ಸಾವನ್ನಪ್ಪಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಆನೆಯ ಮರಣೋತ್ತರ ಪರೀಕ್ಷೆ ಬಳಿಕ ಕಾಡಾನೆಯ ಸಾವಿಗೆ ಕಾಣ ತಿಳಿದು ಬರಲಿದೆ.

ಇದನ್ನೂ ಓದಿ:ರೋಹಿತ್ ಬದುಕು ಬದಲಿಸಿದ್ದು ಅದೊಂದು ಜಾಹೀರಾತು.. ಮ್ಯಾಗಿಮ್ಯಾನ್ ​​ಹಿಟ್​ಮ್ಯಾನ್ ಆಗಿದ್ದೇ ರೋಚಕ..!

ಕೋಲಾರದಲ್ಲೂ ಒಂದು ಆನೆ ಸಾವು
ಇತ್ತ ಕೋಲಾರ ತಾಲೂಕಿನ ಕಾಜಿಕಲ್ಲಹಳ್ಳಿ ಬಳಿ ಇರುವ ಆನೆ ಪುನರ್ವಸತಿ ಕೇಂದ್ರದಲ್ಲಿದ್ದ ಆನೆಯೊಂದು ಸಾವನ್ನಪ್ಪಿದೆ. ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿದ್ದ ಗಂಗಶ್ರೀ ಆನೆ ಸಾವನ್ನಪ್ಪಿದೆ. ಈ ಗಂಗಶ್ರೀ ಆನೆಗೆ 70 ವರ್ಷವಾಗಿತ್ತು. ಮಾರ್ಚ್ 13, 2024ರಲ್ಲಿ ಆನೆ ಪುನರ್ವಸತಿ ಕೇಂದ್ರಕ್ಕೆ ಬಂದಿತ್ತು. ಕಳೆದ ಎರಡು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆನೆಯು ನಡೆಯಲಾಗದೇ ಕಷ್ಟ ಅನುಭವಿಸುತ್ತಿತ್ತು.

ಇದನ್ನೂ ಓದಿ:ಶವ ಬೀಸಾಕಿದ್ದಾಗಿಂದ ಒಂದೇ ಬಟ್ಟೆಯಲ್ಲೇ ಮೂರು ದಿನ ಓಟಾಟ.. ಎಣ್ಣೆ ಪಾರ್ಟಿ..!

ಮೊನ್ನೆ ಅಶ್ವಥಾಮ..
ಜಿಲ್ಲೆಯ ಹುಣಸೂರು- ಪಿರಿಯಾಪಟ್ಟಣ ತಾಲ್ಲೂಕಿನ ಗಡಿ ಭಾಗದ ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಆನೆಯು ಆಹಾರ ಅರಸಿ ಕಾಡಿಗೆ ತೆರಳಿದ್ದ ವೇಳೆ ಅಶ್ವಥಾಮ ಸಾವನ್ನಪ್ಪಿದ್ದ. ಸೋಲಾರ್ ಬೇಲಿ ಮೇಲೆ ವಿದ್ಯುತ್ ತಂತಿ ಬಿದ್ದಿದ್ದರಿಂದ ಅಶ್ವತ್ಥಾಮ ಆನೆ ಮೃತಪಟ್ಟಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ರೇಣುಕಾಸ್ವಾಮಿ ಸತ್ತ ಮೇಲೂ ಕಾಡದ ಪಶ್ಚಾತಾಪ.. ಕೊಲೆ ಮಾಡಿದ ಬೆನ್ನಲ್ಲೇ ನಡೆದ ಎಣ್ಣೆ ಪಾರ್ಟಿಗಳು ಎಷ್ಟು ಗೊತ್ತಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊನ್ನೆ ಅಶ್ವಥಾಮ.. ಇಂದು ಗಂಗಾಶ್ರೀ ಸಾವು.. ಒಂದೇ ವಾರದಲ್ಲಿ ಮೂರು ಆನೆಗಳು ಸಾವು

https://newsfirstlive.com/wp-content/uploads/2024/06/Elephant-1.jpg

Load More