ಸಿಲ್ಲಿ ವಿಷ್ಯಕ್ಕೆ ಎರಡು ಕುಟುಂಬಸ್ಥರ ನಡುವೆ ನಡೀತು ಮಾರಾಮಾರಿ
ಗರ್ಭಿಣಿ ಮಗಳನ್ನ ನೋಡಲು ಬಂದ ಕುಟುಂಬಸ್ಥರಿಗೆ ಏನಾಯ್ತು?
ಉತ್ತರಪ್ರದೇಶದ ಬಾರಬಂಕಿಯ ಆಸ್ಪತ್ರೆ ಮುಂಭಾಗದಲ್ಲಿ ಫೈಟಿಂಗ್
ಲಕ್ನೋ: ಕೌಟುಂಬಿಕ ಜಗಳಕ್ಕೆ ಕೆಲವೊಮ್ಮೆ ಕಾರಣನೇ ಬೇಕಾಗಿರುವುದಿಲ್ಲ ಅನಿಸುತ್ತೆ. ಕೆಲವು ಸಣ್ಣ ಪುಟ್ಟ ವಿಷಯಗಳು ಕುಟುಂಬದಲ್ಲಿ ದೊಡ್ಡ ದೊಡ್ಡ ಜಗಳಕ್ಕೆ ಕಾರಣವಾಗಿ ಬಿಡುತ್ತೆ. ಹಾಗೆಯೇ ಉತ್ತರಪ್ರದೇಶದಲ್ಲಿ ಎಸಿ ರೂಮ್ ಬುಕ್ ಮಾಡಿಲ್ಲ ಅಂತಾ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿಯೇ ನಡೆದು ಬಿಟ್ಟಿದೆ.
ಅಸಲಿಗೆ ಆಗಿದ್ದೇನು..?
ಉತ್ತರಪ್ರದೇಶದ ಬಾರಬಂಕಿಯಲ್ಲಿ ಎರಡು ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದಿದೆ. ಗರ್ಭಿಣಿಯನ್ನು ಆಕೆಯ ಪತಿಯ ಮನೆಯವರು ಸಿವಿಲ್ ಲೈನ್ಸ್‌ನ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲು ಮಾಡಿದ್ದರು. ಆಸ್ಪತ್ರೆಗೆ ದಾಖಲು ಮಾಡಿದ್ದ ಕೊಠಡಿಯಲ್ಲಿ ಎಸಿ ಇರಲಿಲ್ಲ. ಇದೇ ವೇಳೆ ಗರ್ಭಿಣಿ ಮಗಳನ್ನ ನೋಡಲು ಆಕೆಯ ಕುಟುಂಬಸ್ಥರು ಬಂದಿದ್ದಾರೆ. ಆದರೆ ಇವರೆಲ್ಲಾ ಬಂದಾಗ ಮಗಳು ದಾಖಲಾಗಿದ್ದ ರೂಮ್ನಲ್ಲಿ ಎ.ಸಿ ಇರಲಿಲ್ಲ. ಇದೇ ಕಾರಣಕ್ಕೆ ರೊಚ್ಚಿಗೆದ್ದ ಕುಟುಂಬಸ್ಥರು, ನಮ್ಮ ಮಗಳ ಹೆರಿಗೆಗೆ ಎಸಿ ರೂಮ್ ಯಾಕೆ ಬುಕ್ ಮಾಡಿಲ್ಲ ಅಂತಾ ಮಗಳ ಪತಿ ಹಾಗೂ ಸಹೋದರಿಗೆ ಮನಬಂದಂತೆ ಥಳಿಸಿದ್ದಾರೆ. ಇದೇ ವಿಚಾರಕ್ಕೆ ಎರಡೂ ಕುಟುಂಬದ ನಡುವೆ ಮಾರಾಮಾರಿ ನಡೆದಿದೆ.
ಇನ್ನು, ಕುಟುಂಬಸ್ಥರು ಗಲಾಟೆ ಮಾಡಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗರ್ಭಿಣಿಯಾಗಿದ್ದ ಮಗಳನ್ನು ಎ.ಸಿ ರೂಮ್ ದಾಖಲಿಸದ ಕಾರಣಕ್ಕೆ ಉತ್ತರಪ್ರದೇಶದಲ್ಲಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿಯೇ ನಡೆದು ಬಿಟ್ಟಿದೆ.#newsfirstkannada #kannadanews #newsfirstlive #familyfight pic.twitter.com/jeIjqp7fDI
— NewsFirst Kannada (@NewsFirstKan) July 6, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ