newsfirstkannada.com

VIDEO: ಜಡೆ ಹಿಡಿದ ಜಗಳಕ್ಕೆ ರೊಚ್ಚಿಗೆದ್ದ ಮೂವರು ಮಹಿಳೆಯರು; ಅಕ್ಕಪಕ್ಕ ಮನೆಯವರ ಮಧ್ಯೆ ಡಿಶುಂ, ಡಿಶುಂ!

Share :

03-08-2023

    ನಡು ರೋಡಲ್ಲಿ ಜುಟ್ಟು ಹಿಡಿದು ಎಳೆದಾಡಿದ ಪುರುಷ, ಮಹಿಳೆಯರು

    ಜಮೀನು ವಿಚಾರಕ್ಕೆ ಶುರುವಾದ ಜಗಳದಿಂದ ಕೈ ಕೈ ಮಿಲಾಯಿಸಿದರು

    2 ಕುಟುಂಬಸ್ಥರ ವಿರುದ್ಧವೂ ಕೇಸ್ ದಾಖಲಿಸಿಕೊಂಡ ಪೊಲೀಸರು

ರಾಮನಗರ: ಸರ್ಕಾರಿ ಗೋಮಾಳ ಜಮೀನಿನ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿರೋ ಘಟನೆ ಮಾಗಡಿ ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ನಡೆದಿದೆ. ನಡುರಸ್ತೆಯಲ್ಲೇ ಓರ್ವ ವ್ಯಕ್ತಿ ಮಹಿಳೆಯ ಜಡೆ ಹಿಡಿದು ಎಳೆದಾಡಿ ನೆಲಕ್ಕೆ ಬಡಿದಿದ್ದಾನೆ. ಇದರಿಂದ ರೊಚ್ಚಿಗೆದ್ದ ಮೂವರು ಮಹಿಳೆಯರು ಆತನ ವಿರುದ್ಧ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ.

ಎರಡು ಕುಟುಂಬಸ್ಥರು ಸರ್ಕಾರಿ ಗೋಮಾಳ ಜಮೀನಿನ ವಿಚಾರವನ್ನೇ ಪ್ರಶ್ನಿಸಿ‌ ಗಲಾಟೆ ಮಾಡಿಕೊಂಡಿದ್ದಾರೆ. ಓರ್ವ ಪುರುಷ ಹಾಗೂ‌ ಮೂರು ಮಹಿಳೆಯರ ಮಧ್ಯೆ ಜಗಳ ಜೋರಾಗಿದೆ. ಈ ಗಲಾಟೆಯಲ್ಲಿ ಮಹಿಳೆಯರು ಒಬ್ಬರಿಗೊಬ್ಬರು ಜಡೆ ಎಳೆದುಕೊಂಡು ಬಡಿದಾಡಿಕೊಂಡಿದ್ದಾರೆ. ಬಳಿಕ ದಲಿತ‌ ಸಮುದಾಯದವರ ಮೇಲೆ ಹಲ್ಲೆ ಮಾಡಿರೋದಾಗಿ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನಾಕಾರಣ ಮಹಿಳೆ ಮೇಲೆ ಹಲ್ಲೆ ಮಾಡಿರುವುದಾಗಿ ದಲಿತ ಕುಟುಂಬದ ವಿರುದ್ಧವೂ ಕೇಸ್ ದಾಖಲಾಗಿದೆ. ಕುದೂರು ಪೊಲೀಸರು ಎರಡು ಕುಟುಂಬಸ್ಥರನ್ನು ಕರೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಜಡೆ ಹಿಡಿದ ಜಗಳಕ್ಕೆ ರೊಚ್ಚಿಗೆದ್ದ ಮೂವರು ಮಹಿಳೆಯರು; ಅಕ್ಕಪಕ್ಕ ಮನೆಯವರ ಮಧ್ಯೆ ಡಿಶುಂ, ಡಿಶುಂ!

https://newsfirstlive.com/wp-content/uploads/2023/08/fam-fight.jpg

Load More