newsfirstkannada.com

BREAKING: ಎರಡು ರೈಲುಗಳ ಮಧ್ಯೆ ಭೀಕರ ಡಿಕ್ಕಿ.. ಹಳಿ ತಪ್ಪಿ ನೆಲಕ್ಕುರುಳಿದ 12 ಬೋಗಿಗಳು

Share :

25-06-2023

    ದೇಶದಲ್ಲಿ ಮತ್ತೊಂದು ರೈಲು ಅಪಘಾತ,

    ಪ.ಬಂಗಾಳದ ಓಂಡಾ ನಿಲ್ದಾಣದ ಬಳಿ ದುರ್ಘಟನೆ

    ದುರ್ಘಟನೆಯಿಂದ ಏನೆಲ್ಲ ಅನಾಹುತ ಆಗಿದೆ..?

ಕೋಲ್ಕತ್ತಾ: ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಎರಡು ಗೂಡ್ಸ್​ ರೈಲುಗಳು ಡಿಕ್ಕಿಯಾಗಿ 12 ಬೋಗಿಗಳು ಹಳಿತಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಓಂಡಾ ನಿಲ್ದಾಣದ ಬಳಿಯ ಬಂಕುರಾ ಪ್ರದೇಶದಲ್ಲಿ ನಡೆದಿದೆ.

ಬಂಕುರಾ ಬಳಿ ಗೂಡ್ಸ್​ ರೈಲಿಗೆ ಹಿಂದೆಯಿಂದ ಬಂದು ಇನ್ನೊಂದು ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ 12 ಬೋಗಿಗಳು ಹಳಿ ತಪ್ಪಿ ಹೋಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ. ​ರೈಲು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ರೈಲ್ವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಡಿಕ್ಕಿಯಾಗಿರುವ ಎರಡು ರೈಲುಗಳು ಯಾವುದೇ ಸರಕುಗಳಿಲ್ಲದೇ ಖಾಲಿಯಾಗಿದ್ದವು. ಆದ್ರೆ ಈ ಘಟನೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಈ ರೈಲು ಡಿಕ್ಕಿಯಿಂದ ಬೇರೆ ರೈಲು ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ರೈಲ್ವೇ ಸಿಬ್ಬಂದಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಒಡಿಶಾದ ಬಾಲಸೋರ್​ ಬಳಿ 3 ರೈಲುಗಳು ಅಪಘಾತಕ್ಕೆ ಈಡಾಗಿ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದು ಇಡೀ ದೇಶದ ಗಮನವನ್ನೇ ಸೆಳೆದಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಎರಡು ರೈಲುಗಳ ಮಧ್ಯೆ ಭೀಕರ ಡಿಕ್ಕಿ.. ಹಳಿ ತಪ್ಪಿ ನೆಲಕ್ಕುರುಳಿದ 12 ಬೋಗಿಗಳು

https://newsfirstlive.com/wp-content/uploads/2023/06/BANGALA_TRAIN.jpg

Load More