newsfirstkannada.com

ಚಂದ್ರಯಾನ-3 ಮಿಷನ್​ನ ಮೂರು ಮುಖ್ಯ ಉದ್ದೇಶಗಳಲ್ಲಿ ಎರಡು ಯಶಸ್ವಿ.. ISRO ಕೊಟ್ಟಿದೆ ಹೊಸ ಅಪ್​​ಡೇಟ್..!

Share :

27-08-2023

    ಚಂದ್ರನ ಅಂಗಳದಲ್ಲಿ ಮುಂದುವರಿದ ಇಸ್ರೋ ಅಧ್ಯಯನ

    ಮೂರನೇಯದ್ದು ಪ್ರಗತಿಯಲ್ಲಿದೆ ಎಂದು ಇಸ್ರೋ ಟ್ವೀಟ್​

    ಆ.23 ರಂದು ಚಂದ್ರನ ಅಂಗಳದಲ್ಲಿ ಭಾರತ ಹೊಸ ಹೆಜ್ಜೆ

ಚಂದಿರನ ಅಂಗಳದಲ್ಲಿ ಇಸ್ರೋ ಅಧ್ಯಯನ ಮುಂದುವರಿದಿದಿದೆ. ಚಂದ್ರಯಾನ -3ನ ಮೂರು ಪ್ರಮುಖ ಉದ್ದೇಶಗಳಲ್ಲಿ ಎರಡು ಯಶಸ್ವಿಯಾಗಿದೆ. ಮೂರನೇಯದ್ದು ಪ್ರಗತಿಯಲ್ಲಿದೆ ಎಂದು ಇಸ್ರೋ ಟ್ವೀಟ್​ ಮಾಡಿ ತಿಳಿಸಿದೆ.

ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್ ಸಾಧಿಸಿದೆ. ಅಲ್ಲದೇ, ರೋವರ್ ಪ್ರಗ್ಯಾನ್, ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಸಂಚರಿಸಿದೆ. ಇನ್ನು, ಉಳಿದಿರುವ ಕೊನೆಯ ಉದ್ದೇಶವೆಂದರೆ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು, ಅದು ಕೂಡ ಪ್ರಗತಿಯಲ್ಲಿದ್ದು, ಎಲ್ಲಾ ಪೇಲೋಡ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ ಹೇಳಿದೆ.

ಈ ಬಗ್ಗೆ ಕೇರಳದಲ್ಲಿ ಪ್ರತಿಕ್ರಿಯಿಸಿರುವ ಇಸ್ರೋ ಮುಖ್ಯಸ್ಥ ಎಸ್​.ಸೋಮನಾಥ್.. ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡ್​ ಆಗಿ ತನ್ನ ಕಾರ್ಯಾಚರಣೆ ಮುಂದುವರಿಸಿದೆ. ಲ್ಯಾಂಡರ್ ಮತ್ತು ರೋವರ್​ನಲ್ಲಿರುವ ಎಲ್ಲ ಉಪಕರಣಗಳು ಪೂರ್ಣ ಪ್ರಮಾಣದಲ್ಲಿ ವೈಜ್ಞಾನಿಕ ಮಾಹಿತಿಗಳನ್ನ ಸಂಗ್ರಹಿಸಲು ಸಜ್ಜಾಗಿವೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಚಂದ್ರನಿಂದ ಮತ್ತಷ್ಟು ಮಾಹಿತಿಯನ್ನ ಸಂಗ್ರಹಿಸುವಾಗ ನಿಜವಾಗಲೂ ನಾವು ವಿಜ್ಞಾನಿಗಳಾಗಿರುವುದಕ್ಕೆ ಸಾರ್ಥಕ ಎಂದು ಅನ್ನಿಸುತ್ತೆ. ಆ ದಿನಗಳ ಕಾರ್ಯಾಚರಣೆ ನೋಡೋದಕ್ಕೆ ಬಹಳ ಉತ್ಸುಕರಾಗಿದ್ದೇವೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3 ಮಿಷನ್​ನ ಮೂರು ಮುಖ್ಯ ಉದ್ದೇಶಗಳಲ್ಲಿ ಎರಡು ಯಶಸ್ವಿ.. ISRO ಕೊಟ್ಟಿದೆ ಹೊಸ ಅಪ್​​ಡೇಟ್..!

https://newsfirstlive.com/wp-content/uploads/2023/08/CHANDRAYANA-2.jpg

Load More