ಯುವಕರ ಅಜಾಗರೂಕ ಬೈಕ್ ಚಾಲನೆಗೆ ಎರಡು ಬಲಿ
ಮಧ್ಯರಾತ್ರಿ ಬೆಂಗಳೂರಲ್ಲಿ ನಡೀತು ಭೀಕರ ದುರ್ಘಟನೆ
ಓರ್ವ ಯುವಕ ಗಂಭೀರ, ಆಸ್ಪತ್ರೆಯಲ್ಲಿ ಚಿಕಿತ್ಸೆ
ಯುವಕ-ಯುವತಿಯ ಅಜಾಗರೂಕ ರೇಡ್ಗೆ ಬೈಕ್ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾರುತಿನಗರ ಮುಖ್ಯರಸ್ತೆಯಲ್ಲಿ ನಡೆದಿದೆ.
ಸರ್ಕಾರಿ ಪ್ರಾಧ್ಯಾಪಕ ನರಸಪ್ಪ (51) ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಂದೆಡೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಯುವತಿ ರಕ್ಷಾ (21) ಮೃತಪಟ್ಟಿದ್ದಾರೆ. ನಿನ್ನೆ ತಡರಾತ್ರಿ 11.45ರ ಸುಮಾರಿಗೆ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಚಂದನ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಕ್ಷಾ ಹಾಗೂ ಚಂದನ್ ಇಬ್ಬರು ಸ್ನೇಹಿತರು. ರಕ್ಷಾ ಕಿಡ್ ಕೇರ್ನಲ್ಲಿ ಕೆಲಸ ಮಾಡುತ್ತಿದ್ದರೆ, ಚಂದನ್ ಕಾಲೇಜು ವಿದ್ಯಾರ್ಥಿಯಾಗಿದ್ದ. ತಡರಾತ್ರಿ ಇಬ್ಬರು ಪಲ್ಸರ್ ಬೈಕ್ನಲ್ಲಿ ಮಾರುತಿನಗರ ಕಡೆಯಿಂದ ಕೆಎಲ್ಇ ಕಾಲೇಜು ಕಡೆಗೆ ಹೊರಟಿದ್ದರು. ಬೈಕ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ನರಸಪ್ಪಗೆ ಡಿಕ್ಕಿ ಹೊಡೆದಿದ್ದಾರೆ.
ನರಸಪ್ಪ ಹೆಲ್ಮೆಟ್ ಮತ್ತು ಇಬ್ಬರು ಯುವಕರು ಸಹ ಹಾಕಿರಲಿಲ್ಲ. ಪರಿಣಾಮ ಮೂವರು ಗಂಭೀರ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದ್ದರು. ನರಸಪ್ಪ ರಸ್ತೆಯಲ್ಲಿ ಸಾವನ್ನಪ್ಪಿದ್ರೆ, ರಕ್ಷಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ