newsfirstkannada.com

ಒಬ್ಬ ಕಾರಿನ ಒಳಗೆ ಮತ್ತೊಬ್ಬ ಹೊರಗೆ; ಹಾಸನದಲ್ಲಿ ಬೆಚ್ಚಿ ಬೀಳಿಸಿದ ಡಬಲ್ ಮರ್ಡರ್; ಆಗಿದ್ದೇನು?

Share :

Published June 20, 2024 at 5:01pm

    ಹಾಡಹಗಲೇ ಗುಂಡಿನ ದಾಳಿಗೆ ಬೆಚ್ಚಿ ಬಿದ್ದ ಹಾಸನ ಜಿಲ್ಲೆಯ ಜನತೆ

    ವ್ಯಕ್ತಿಯ ಮೇಲೆ ಗುಂಡು ಹಾರಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ್ರಾ?

    ಹಾಸನದ ಶರಾಫತ್ ಅಲಿ, ಬೆಂಗಳೂರಿನ ಆಸಿಫ್ ಮೃತ ದುರ್ದೈವಿಗಳು

ಹಾಸನ: ಹಾಡಹಗಲೇ ಗುಂಡಿನ ದಾಳಿಗೆ ಹಾಸನದ ಜನತೆ ಬೆಚ್ಚಿ ಬಿದ್ದಿದ್ದಾರೆ. ಈ ದಾಳಿಗೆ ಇಬ್ಬರ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ 12.30 ರಿಂದ 1 ಗಂಟೆ ಸುಮಾರಿಗೆ ಹೊಯ್ಸಳ ನಗರದಲ್ಲಿ ಇಬ್ಬರು ಒಬ್ಬರಿಗೊಬ್ಬರು ಗುಂಡು ಹಾರಿಸಿಕೊಂಡರೋ ಅಂತ ಪೊಲೀಸ್​ ಅಧಿಕಾರಿಗಳು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 1000 ಗಡಿ ತಲುಪಿದ ಸಾವು.. ಹಜ್ ಯಾತ್ರೆ ಇತಿಹಾಸದಲ್ಲೇ 3ನೇ ಅತಿ ದೊಡ್ಡ ದುರಂತ; ಆಘಾತಕಾರಿ ವರದಿ!

ಈ ಗುಂಡಿನ ದಾಳಿಯಲ್ಲಿ ಹಾಸನದ ಶರಾಫತ್ ಅಲಿ ಹಾಗೂ ಬೆಂಗಳೂರು ಮೂಲದ ಆಸಿಫ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಿಂದಿದೆ. ಈ ಘಟನೆ ಬಗ್ಗೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಆ ಕೂಡಲೇ ಘಟನಾ ಸ್ಥಳಕ್ಕೆ ಎಸ್‌ಪಿ ಮಹಮದ್ ಸುಜೇತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೂಲಗಳ ಪ್ರಕಾರ, ಒಬ್ಬ ಮತ್ತೊಬ್ಬನನ್ನು ಶೂಟ್​ ಮಾಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿ ಯಾರು ಯಾರನ್ನು ಶೂಟ್​ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ. ಸದ್ಯ ಪೊಲೀಸ್​ ಅಧಿಕಾರಿಗಳು ಎಲ್ಲಾ ರೀತಿಯಲ್ಲಿ ಕೊಲೆ ನಡೆದ ಜಾಗದಲ್ಲಿ ಏನೆಲ್ಲಾ ಆಯ್ತು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಮೃತ ಶರಾಫತ್ ಅಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಬ್ಬ ಕಾರಿನ ಒಳಗೆ ಮತ್ತೊಬ್ಬ ಹೊರಗೆ; ಹಾಸನದಲ್ಲಿ ಬೆಚ್ಚಿ ಬೀಳಿಸಿದ ಡಬಲ್ ಮರ್ಡರ್; ಆಗಿದ್ದೇನು?

https://newsfirstlive.com/wp-content/uploads/2024/06/hasana.jpg

Load More