ಮಗಳನ್ನು ಶಾಲೆಗೆ ಬಿಡಲು ಹೋಗಿದ್ದಾಗ ಬಂದ ಜವರಾಯ
ಹಬ್ಬ ಮುಗಿಸಿ ಹೋಗುವಾಗ ಎರಡು ಕಾರುಗಳ ಮಧ್ಯೆ ಡಿಕ್ಕಿ
ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ 8 ಸಾವು
ತುಮಕೂರು: ಮಧುಗಿರಿ ತಾಲೂಕಿನ ಕಾಟಗಾನಹಟ್ಟಿ ಹಾಗೂ ಕೆರೆಗಳಪಾಳ್ಯ ನಡುವೆ 2 ಕಾರುಗಳ ಮಧ್ಯೆ ಭಯಾನಕ ಆಕ್ಸಿಡೆಂಟ್ ಸಂಭವಿಸಿ 5 ಜನ ಮೃತಪಟ್ಟಿದ್ದರು. ಈ ಭೀಕರ ಅಪಘಾತದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: Breaking News: ಕಾಳಿಂದಿ ಎಕ್ಸ್ಪ್ರೆಸ್ ಸ್ಫೋಟಕ್ಕೆ ಸಂಚು; ಮಧ್ಯರಾತ್ರಿ ತುಂಬಿದ ಸಿಲಿಂಡರ್ಗೆ ಡಿಕ್ಕಿ ಹೊಡೆದ ಟ್ರೈನು
ಜನಾರ್ಧನ ರೆಡ್ಡಿ (60), ಇವರ ಮಗಳು ಸಿಂಧೂಜಾ (32), ಸಿಂಧೂಜಾ ಪುತ್ರ ವೇದಾಸ್ ರೆಡ್ಡಿ (8), ಕಾರೇನಹಳ್ಳಿ ಗ್ರಾಮದ ನಾಗರಾಜು (30), ಹಾಗೂ ಸಿದ್ದಗಂಗಾ (27) ಸಾವನ್ನಪ್ಪಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕ ಆನಂದ್ (30) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಘಟನೆ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?
ಕಾರುಗಳ ಅಪಘಾತದಲ್ಲಿ 6 ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಮಾತನಾಡಿ, ಕೊರಟಗೆರೆ ಹಾಗೂ ಮಧುಗಿರಿ ಮಧ್ಯದಲ್ಲಿ ಟೋಲ್ ಗೇಟ್ ಹತ್ತಿರ ಈ ಭೀಕರ ಅಪಘಾತ ಸಂಭವಿಸಿದೆ. ಕೊರಟಗೆರೆ ಕಡೆಗೆ ಮಾರುತಿ ಸಿಯಾಜ್ ಕಾರು ಹೋಗುತ್ತಿತ್ತು. ಮಧುಗಿರಿ ಕಡೆಗೆ ಟಾಟಾ ಟಿಯಾಗೋ ತೆರಳುತ್ತಿತ್ತು. ಓವರ್ ಟೇಕ್ ಮಾಡುವಾಗ ಸಿಯಾಜ್ ಕಾರು ಬಲಬದಿ ಲೇನ್ಗೆ ಬಂದು ಅಪಘಾತ ಸಂಭವಿಸಿದೆ.
ಸಿಯಾಜ್ ಕಾರಿನಲ್ಲಿ ಚಾಲಕ ಸಮೇತ ಒಟ್ಟು 7 ಜನರಿದ್ದರು. ಇವರು ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ತೆಳುತ್ತಿದ್ದರು. ಎದುರುಗಡೆಯಿಂದ ಬರುತ್ತಿದ್ದ ಕಾರಿನಲ್ಲಿ ಇಬ್ಬರು ಇದ್ದರು. ಇವರು ಮಧುಗಿರಿ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಕೆಲಸ ಮುಗಿಸಿಕೊಂಡು ಹೋಗುವಾಗ ಆಕ್ಸಿಡೆಂಟ್ ಆಗಿದೆ. ಗಂಭೀರವಾಗಿ ಗಾಯಗೊಂಡವರನ್ನು ತಕ್ಷಣ ಮಧುಗಿರಿ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ನಂತರ ಜಿಲ್ಲಾಸ್ಪತ್ರೆಯಲ್ಲಿರುವ ಟ್ರಾಮಾ ಸೆಂಟರ್ಗೆ ಗಾಯಾಳುಗಳನ್ನ ಕಳಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಮೃತದೇಹಗಳನ್ನು ಶವಾಗಾರಕ್ಕೆ ರವಾನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ವಿರುದ್ಧದ ಚಾರ್ಜ್ಶೀಟ್ಗೆ ಹೊಸ ಟ್ವಿಸ್ಟ್ ಕೊಡಲು ಮುಂದಾದ ದಾಸನ ಪರ ವಕೀಲರು..!
ಇನ್ನೊಂದು ಘಟನೆ
ತಿಪಟೂರು ತಾಲೂಕಿನ ರಾಮಶೆಟ್ಟಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಗಾರ್ಮೆಂಟ್ ಬಸ್ ಡಿಕ್ಕಿ ಹೊಡೆದು ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಮಲಮ್ಮ (35), ವೀಣಾ (16) ಮೃತ ದುರ್ದೈವಿಗಳು. ಮೃತ ವೀಣಾ 10ನೇ ತರಗತಿ ಓದುತ್ತಿದ್ದಳು. ಬೆಳಗ್ಗೆ ಮಗಳನ್ನ ಶಾಲೆಗೆ ಬಿಡಲು ತಾಯಿ ಹೋಗಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಬಸ್ ಏಕಾಏಕಿ ಇಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ಘಟನೆಯಲ್ಲಿ ಮುದ್ದಪ್ಪ (50) ಎನ್ನುವ ಬೈಕ್ ಸವಾರನು ಗಂಭೀರವಾಗಿ ಗಾಯಗೊಂಡು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ