newsfirstkannada.com

×

2ನೇ ಟೆಸ್ಟ್​​ ಪಂದ್ಯ: ಟೀಮ್​ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಇಬ್ಬರು ಸ್ಟಾರ್ಸ್​ ಮಧ್ಯೆ ಭಾರೀ ಪೈಪೋಟಿ

Share :

Published September 24, 2024 at 10:26pm

Update September 24, 2024 at 10:29pm

    ಬಾಂಗ್ಲಾ, ಟೀಮ್​ ಇಂಡಿಯಾ ಮಧ್ಯೆ 2ನೇ ಟೆಸ್ಟ್​​​ ಪಂದ್ಯ

    ಟೀಮ್​ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ

    ಒಂದು ಸ್ಥಾನಕ್ಕಾಗಿ ಇಬ್ಬರು ಸ್ಟಾರ್ಸ್​​​ ಮಧ್ಯೆ ಭಾರೀ ಪೈಪೋಟಿ

ಇತ್ತೀಚೆಗೆ ಚೆನ್ನೈನ ಇಂಟರ್​​ ನ್ಯಾಷನಲ್​​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಮೊದಲ ಟೆಸ್ಟ್​​​ ಪಂದ್ಯದಲ್ಲಿ ಟೀಮ್​​​ ಇಂಡಿಯಾ ಬರೋಬ್ಬರಿ 280 ರನ್​ಗಳಿಂದ ಗೆದ್ದು ಬೀಗಿದೆ. ಇದರ ಮಧ್ಯೆ 2ನೇ ಟೆಸ್ಟ್​ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

ಟೀಮ್​ ಇಂಡಿಯಾ, ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್​ ಪಂದ್ಯ ಕಾನ್ಪುರದಲ್ಲಿ ನಡೆಯಲಿದೆ. ಈ ಮಹತ್ವದ ಪಂದ್ಯ ಸೆಪ್ಟೆಂಬರ್ 27ನೇ ತಾರೀಕಿನಿಂದ ಅಕ್ಟೋಬರ್ 1 ರವರೆಗೆ ನಡೆಯಲಿದ್ದು, ಹೇಗಾದ್ರೂ ಗೆಲ್ಲಲೇಬೇಕು ಎಂದು ಉಭಯ ತಂಡಗಳು ಪ್ಲಾನ್​ ಮಾಡಿಕೊಂಡಿದೆ. ಅದರಲ್ಲೂ ಟೀಮ್​ ಇಂಡಿಯಾ 2ನೇ ಪಂದ್ಯ ಕೂಡ ಗೆದ್ದು ಸರಣಿ ಕ್ಲೀನ್​ ಸ್ವೀಪ್​​ ಮಾಡುವ ನಿರೀಕ್ಷೆಯಲ್ಲಿದೆ.

ಅಷ್ಟೇ ಅಲ್ಲ ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಟೀಮ್ ಇಂಡಿಯಾ ದಾಖಲೆಯ ಪುಟಕ್ಕೆ ಎಂಟ್ರಿ ನೀಡಲು ಕನಸು ಕಾಣುತ್ತಿದೆ. ಹಾಗಿದ್ದರೆ, ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಎಲ್ಲೆಡೆ ಎದ್ದಿದೆ. ಹಾಗಾಗಿ ಇದಕ್ಕೆ ಉತ್ತರ ಈ ಸ್ಟೋರಿಯಲ್ಲಿದೆ.

ತಂಡದ ಪ್ಲಾನ್​ ಏನು?

2ನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಮಾಸ್ಟರ್​ ಪ್ಲಾನ್​ ಹೇಗಿದೆ? ಅನ್ನೋ ಚರ್ಚೆ ಶುರುವಾಗಿದೆ. ಕಪ್ಪು ಮಣ್ಣಿನ ಪಿಚ್ ಆಗಿರೋ ಕಾರಣ ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮೊದಲ ಟೆಸ್ಟ್‌ನಲ್ಲಿ ಮೋಡಿ ಮಾಡಿದ್ದ ಜಸ್ಪ್ರಿತ್‌ ಬುಮ್ರಾಗೆ 2ನೇ ಟೆಸ್ಟ್‌ನಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಇವರ ಬದಲಿಗೆ ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್‌ ತಂಡದ ಬೌಲಿಂಗ್ ಮಾಡಬಹುದು.

ಅಕ್ಷರ್, ಕುಲ್ದೀಪ್​​ ಮಧ್ಯೆ ಪೈಪೋಟಿ

ಸ್ಪಿನ್​​​ ಸ್ನೇಹಿ ಪಿಚ್​ ಆದ ಕಾರಣ ಭಾರತ ಮೂವರು ಸ್ಪಿನ್ ಬೌಲರ್‌ಗಳೊಂದಿಗೆ ಕಣಕ್ಕೆ ಇಳಿಯಬಹುದು. ಅನುಭವಿ ಅಶ್ವಿನ್‌, ಜಡೇಜಾ ಜೊತೆಗೆ ಇನ್ನೊಬ್ಬ ಸ್ಪಿನ್ ಬೌಲರ್‌ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕುಲ್ದೀಪ್​​ ತಯಾರಿ ನಡೆಸಿದ್ರೆ, ಅಕ್ಷರ್‌ ಪಟೇಲ್‌ ಕೂಡ ತಂಡದಲ್ಲಿ ಸ್ಥಾನ ಪಡೆಯೋ ಕನಸಲ್ಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

2ನೇ ಟೆಸ್ಟ್​​ ಪಂದ್ಯ: ಟೀಮ್​ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಇಬ್ಬರು ಸ್ಟಾರ್ಸ್​ ಮಧ್ಯೆ ಭಾರೀ ಪೈಪೋಟಿ

https://newsfirstlive.com/wp-content/uploads/2024/09/TEAM-INDIA-1.jpg

Load More