newsfirstkannada.com

ಮಕ್ಕಳ ನೋಡಲು ಹಾಸ್ಟೆಲ್​​ಗೆ ಬಂದಾಗ ದುರಂತ; ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕೃಷಿ ಹೊಂಡದಲ್ಲಿ ಸಿಲುಕಿದ್ದ ನಾಲ್ವರೂ ಸಾವು

Share :

14-08-2023

    ಇಬ್ಬರು ಮಕ್ಕಳು.. ಇಬ್ಬರು ಪೋಷಕರು ಕೃಷಿ ಹೊಂಡಕ್ಕೆ ಬಲಿ

    ಇಂದು ಬೆಳಗ್ಗೆ ಇಬ್ಬರ ಮೃತದೇಹ ಹೊರಕ್ಕೆ ತೆಗೆದಿರುವ ಅಧಿಕಾರಿಗಳು

    ಸಿದ್ದಗಂಗಾ ಮಠದ ಹಾಸ್ಟೆಲ್ ಬಳಿಯಿರುವ ಕೃಷಿಹೊಂಡ

ಅವರು ಹಾಸ್ಟೆಲ್​​ನಲ್ಲಿದ್ದ ಹೆತ್ತ ಮಕ್ಕಳನ್ನ ಮಾತನಾಡಿಸಿ ಅವರ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಲು ಬಂದಿದ್ದವರು. ಆದರೆ ಅಲ್ಲಿ ವಿಧಿಯಾಟವೇ ಬೇರೆಯಾಗಿತ್ತು.. ಮಕ್ಕಳನ್ನ ಕಂಡ ಸಂತಸದಲ್ಲಿದ್ದ ಪೋಷಕರಿಗೆ ಸಾವು ಕೈಬಿಸಿ ಕರೆದಿತ್ತು. ಸಾವಿನ ದವಡೆಗೆ ಸಿಲುಕಿದ್ದ ಸ್ನೇಹಿತನ ರಕ್ಷಿಸಲು ಮುಂದಾದ ವಿದ್ಯಾರ್ಥಿಗಳ ಪ್ರಾಣಪಕ್ಷಿಯೂ ಹಾರಿಹೋಗಿತ್ತು.

ಹೌದು, ತುಮಕೂರಿನ ಕ್ಯಾತಸಂದ್ರ ಬಳಿಯಿರುವ ಸಿದ್ದಗಂಗಾ ಮಠದ ಹಿಂಭಾಗದಲ್ಲಿ ದುರಂತವೊಂದು ನಡೆದು ಹೋಗಿದೆ. ಮಕ್ಕಳ ವಿದ್ಯಾಭ್ಯಾಸದ ಉನ್ನತಿಯನ್ನ ಕಣ್ತುಂಬಿಕೊಳ್ಳಬೇಕು, ಹೆತ್ತ ಮಕ್ಕಳಿಗೆ ಹಾರೈಸಬೇಕು ಅಂತ ಯಾದಗಿರಿಯಿಂದ ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು ಯಾವ ಮಕ್ಕಳನ್ನ ನೋಡಲು ಪೋಷಕರು ಆಗಮಿಸಿದ್ರೋ ಅದೇ ಮಕ್ಕಳೊಂದಿಗೆ ಅವರ ಬದುಕು ಸಹ ಅಂತ್ಯವಾಗಿದೆ.

ಮೃತದೇಹ ಹೊರ ತೆಗೆಯಲು ಶೋಧಕಾರ್ಯ
ಮೃತದೇಹ ಹೊರ ತೆಗೆಯಲು ಶೋಧಕಾರ್ಯ

ಸೆಲ್ಫಿ ತೆಗೆಯುವಾಗ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದ ನಾಲ್ವರು

ತುಮಕೂರಿನ ಸಿದ್ದಗಂಗಾ ಮಠಕ್ಕೆ ಯಾದಗಿರಿ ಮೂಲದ ಮಹಾದೇವಪ್ಪ ಹಾಗೂ ಲಕ್ಷ್ಮಿ ಎಂಬುವವರು ಮಕ್ಕಳ ಯೋಗಕ್ಷೇಮ ವಿಚಾರಿಸಲು ಆಗಮಿಸಿದ್ದರು. ಸಿದ್ದಗಂಗಾ ಮಠದ ಹಿಂಭಾಗದಲ್ಲಿದ್ದ ಕೃಷಿ ಹೊಂಡದ ಬಳಿ ಪೋಷಕರಾದ ಮಹಾದೇವಪ್ಪ ಹಾಗೂ ಲಕ್ಷ್ಮಿ, 6ನೇ ತರಗತಿ ವಿದ್ಯಾರ್ಥಿಗಳಾದ ಪುನೀತ್, ರಂಜಿತ್, ಹರ್ಷಿತ್ ಮತ್ತು ಶಂಕರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ರಂಜಿತ್ ಎಂಬ ವಿದ್ಯಾರ್ಥಿ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದಿದ್ದಾನೆ. ಮಗ ರಂಜಿತ್ ಹೊಂಡಕ್ಕೆ ಬೀಳ್ತಿದ್ದಂತೆ ಆತನನ್ನ ರಕ್ಷಿಸಲು ತಾಯಿ ಲಕ್ಷ್ಮಿ ಹೊಂಡಕ್ಕೆ ಹಾರಿದ್ರು. ಈ ವೇಳೆ ಇಬ್ಬರು ಕೆಸರಲ್ಲಿ ಸಿಲುಕಿದ್ದನ್ನ ಕಂಡು ಹರ್ಷಿತ್ ಹಾಗೂ ಶಂಕರ್ ಹೊಂಡಕ್ಕೆ ಇಳಿದು ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ರಂಜಿತ್ ಬಚಾವಾಗಿ ದಡ ಸೇರಿದ್ದಾನೆ. ಆದ್ರೆ ಲಕ್ಷ್ಮಿ, ಹರ್ಷಿತ್, ಶಂಕರ್ ಮತ್ತೆ ಕೆಸರಲ್ಲಿ ಸಿಲುಕುತ್ತಾರೆ. ಈ ವೇಳೆ ಆ ಮೂವರನ್ನ ರಕ್ಷಿಸಲು ಪುನೀತ್ ಎಂಬ ವಿದ್ಯಾರ್ಥಿಯ ತಂದೆ ಮಹಾದೇವಪ್ಪ ಹೊಂಡಕ್ಕೆ ಇಳಿದಿದ್ದಾರೆ.. ಕೊನೆಗೆ ಈ ನಾಲ್ವರು ಕೆಸರಲ್ಲಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ವಿದ್ಯಾರ್ಥಿ ಹರ್ಷಿತ್ ಮತ್ತು ಪೋಷಕಿ ಲಕ್ಷ್ಮಿಯ ಮೃತದೇಹವನ್ನ ಕೃಷಿ ಹೊಂಡದಿಂದ ಹೊರತೆಗೆದಿದ್ದಾರೆ. ಶಂಕರ್ ಹಾಗೂ ಮಹಾದೇವಪ್ಪ ಮೃತದೇಹವನ್ನು ಇಂದು ಬೆಳಗ್ಗೆ ಹೊರಕ್ಕೆ ತೆಗೆಯಲಾಗಿದೆ. ಸ್ಥಳಕ್ಕೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಹಾಗೂ ಡಿಸಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಟ್ನಲ್ಲಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿ ಹೆತ್ತ ಮಕ್ಕಳನ್ನ ಕಣ್ತುಂಬಿಕೊಳ್ಳಲು ಬಂದ ಪೋಷಕರಿಬ್ಬರೂ ನಿರೀಕ್ಷೆಯೇ ಮಾಡದಂತೆ ಸಾವಿನ ಮನೆ ಸೇರಿದ್ದಾರೆ. ಸ್ನೇಹಿತ ಹಾಗೂ ಆತನ ತಾಯಿಯನ್ನ ರಕ್ಷಿಸುವ ತವಕದಲ್ಲಿ ಬಾಳಿ ಬದುಕಬೇಕಿದ್ದ ಇಬ್ಬರೂ ವಿದ್ಯಾರ್ಥಿಗಳು ಸಹ ಯಮನ ಪಾಶಕ್ಕೆ ಸಿಲುಕಿದ್ದು ಘೋರ ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳ ನೋಡಲು ಹಾಸ್ಟೆಲ್​​ಗೆ ಬಂದಾಗ ದುರಂತ; ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕೃಷಿ ಹೊಂಡದಲ್ಲಿ ಸಿಲುಕಿದ್ದ ನಾಲ್ವರೂ ಸಾವು

https://newsfirstlive.com/wp-content/uploads/2023/08/SIDDAGANGA.jpg

Load More