ರೌಡಿ ಶೀಟರ್ ಸಿದ್ದಾಪುರ ಮಹೇಶ್ ಕೊಚ್ಚಿ ಕೊಂದಿದ್ದ ಕೇಸ್
ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರೌಡಿ ಶೀಟರ್ ಕೊಲೆ
ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್ ಸಿಕ್ಕಿಬಿದ್ರು
ಬೆಂಗಳೂರು: ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಜಾಮೀನಿನ ಮೇಲೆ ರಿಲೀಸ್ ಆಗುತ್ತಿದ್ದಂತೆ ರೌಡಿ ಶೀಟರ್ ಸಿದ್ದಾಪುರ ಮಹೇಶ್ ನಡುರಸ್ತೆಯಲ್ಲೇ ಬೀದಿ ಹೆಣವಾಗಿದ್ದ. ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್ ಮಹೇಶ್ನನ್ನು ಕೊಚ್ಚಿ ಕೊಲೆ ಮಾಡಿದ್ದರು ಎನ್ನಲಾಗಿತ್ತು. ಹೀಗಾಗಿ ಆರೋಪಿಗಳ ಪತ್ತೆಗಾಗಿ ಬೆಂಗಳೂರು ಪೊಲೀಸರು ಬಲೆ ಬೀಸಿದ್ದರು. ಮೊದಲು ಪ್ರಮುಖ ಆರೋಪಿ ಸಿದ್ದಾಪುರ ಸುನೀಲ್ ಸೇರಿ ಐವರು ಪೊಲೀಸರಿಗೆ ಸರೆಂಡರ್ ಆಗಿದ್ದರು. ನಂತರ ಪೊಲೀಸರು ಕೇಸ್ ಸಂಬಂಧ 11 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಜತೆಗೆ ಗ್ಯಾಂಗ್ ಲೀಡರ್ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್ಗಾಗಿ ಶೋಧಕಾರ್ಯ ಮುಂದುವರಿಸಿದ್ದರು. ಈ ಕೊನೆಗೆ ಡಬಲ್ ಮೀಟರ್ ಮೋಹನ್, ವಲ್ಸನ್ ಗಾರ್ಡನ್ ನಾಗ ಪೊಲೀಸರಿಗೆ ಶರಣಾಗಿದ್ದಾರೆ.
ಕೊಲೆ ಮಾಡಿ ಇಬ್ಬರು ತಿರುಪತಿಗೆ ಹೋಗಿ ತಲೆ ಮರೆಸಿಕೊಂಡಿದ್ದರು. ತಿರುಪತಿ ತಿಮ್ಮಪ್ಪನಿಗೆ ಕೈ ಮುಗಿದು ಇಂದು 9ನೇ ಎಸಿಎಂಎಂ ಕೋರ್ಟ್ಗೆ ಶರಣಾಗಲು ಬಂದಿದ್ದ ಡಬಲ್ ಮೀಟರ್ ಮೋಹನ್, ವಲ್ಸನ್ ಗಾರ್ಡನ್ ನಾಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇನ್ನು, ಕೋರ್ಟ್ ಕೂಡ ಆಗಸ್ಟ್ 28ನೇ ತಾರೀಕಿನವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಈ ಹಿಂದೆ ಗ್ರೇಸ್ ವಾಲ್ಟರ್, ಶ್ರೀನಿವಾಸ ಅಲಿಯಾಸ್ ಪಾಪ, ಗೋಕುಲ್, ಸುರೇಶ್, ಕಾರ್ತಿಕ್, ವಾಲೆ ಪ್ರವೀಣ, ಸಿದ್ದಾಪುರ ಸುನೀಲ್, ಕಣ್ಣನ್ ವೇಲ, ಪ್ರದೀಪ್, ಮನು ಸೇರಿ 11 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಏನಿದು ಕೇಸ್..?
ರೌಡಿ ಶೀಟರ್ ಮಹೇಶ್ ಕೊಲೆ, ಕೊಲೆ ಯತ್ನ, ಸುಫಾರಿ ಸೇರಿ ಹಲವು ಕೇಸ್‍ನಲ್ಲಿ ಜೈಲು ಸೇರಿದ್ದ. ಶುಕ್ರವಾರ ರಾತ್ರಿ ಜಾಮೀನು ಮೇಲೆ ಹೊರ ಬಂದಿದ್ದ. ಜೈಲಿನಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್ ಕಾರಿಗೆ ಅಡ್ಡ ಹಾಕಿ ಲಾಂಗ್‍ನಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ