ಬೆಳಗಾವಿಯ ಚಿಕ್ಕೋಡಿಯಲ್ಲಿ ಜೈನಮುನಿ ಹತ್ಯೆ
ಮೈಸೂರಿನಲ್ಲಿ ಹಿಂದೂ ಕಾರ್ಯಕರ್ತ ವೇಣು ಕೊಲೆ
ಎರಡು ತಂಡದಲ್ಲಿ ಯಾರೆಲ್ಲ ಇದ್ದಾರೆ ಗೊತ್ತಾ..?
ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಜೈನಮುನಿ ಹತ್ಯೆ ಹಾಗೂ ಮೈಸೂರು ಜಿಲ್ಲೆಯಲ್ಲಿ ನಡೆದಿರುವ ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಸತ್ಯಾಸತ್ಯೆಗಳ ಪರಿಶೀಲನೆಗಾಗಿ ಬಿಜೆಪಿ ಎರಡು ತಂಡಗಳನ್ನು ನೇಮಕ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನೇತೃತ್ವದಲ್ಲಿ ಎರಡು ತಂಡ ರಚನೆಯಾಗಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಎರಡು ಹತ್ಯೆ ಸಂಬಂಧ ಸತ್ಯಾಸತ್ಯೆಗಳ ಬಗ್ಗೆ ಈ ತಂಡ ಪರಿಶೀಲನೆ ನಡೆಸಲಿದೆ.
ತಂಡದಲ್ಲಿ ಯಾರೆಲ್ಲ ಇದ್ದಾರೆ..?
ಜೈನಮುನಿ ಹತ್ಯೆ ಪ್ರಕರಣದ ಸತ್ಯ ತಿಳಿದುಕೊಳ್ಳಲು ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಅದರಲ್ಲಿ ಅಶ್ವಥ್ ನಾರಾಯಣ್, ಮಹೇಶ್ ಟೆಂಗಿನಕಾಯಿ, ಅಭಯ ಪಾಟೀಲ್, ಈರಣ್ಣ ಕಡಾಡಿ, ಮಂಗಳಾ ಅಂಗಡಿ, ಮಹಾಂತೇಶ್ ಕವಟಗಿಮಠ, ಅನಿಲ್ ಬೆನಕೆ, ಡಾ.ರಾಜೇಶ್ ನೇರ್ಲಿ, ಸಂಜಯ್ ಪಾಟೀಲ್, ಎಂಬಿ ಜಿರೆಲಿ ಇದ್ದಾರೆ.
ಇದನ್ನೂ ಓದಿ: ಹನುಮ ಜಯಂತಿ ವೇಳೆ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ; 6 ಜನರ ಮೇಲೆ ಪ್ರಕರಣ ದಾಖಲು
ಹಿಂದೂ ಕಾರ್ಯಕರ್ತ ವೇಣು ಹತ್ಯೆಗೆ ಸಂಬಂಧಿಸಿ, ಸಿಟಿ ರವಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಡಾ.ಅಶ್ವಥ್ ನಾರಾಯಣ, ಪ್ರತಾಪ್ ಸಿಂಹ, ಶ್ರೀವತ್ಸ, ಎನ್.ಮಹೇಶ್, ಪ್ರೀತಂಗೌಡ, ಅಪ್ಪಣ್ಣ, ಪ್ರೊ.ಮಲ್ಲಿಕಾರ್ಜುನ್, ವೈವಿ ರವಿಶಂಕರ್, ಮಂಗಳಾ ಸೋಮಶೇಖರ್ ತಂಡದಲ್ಲಿದ್ದಾರೆ. ಈ ಎರಡೂ ತಂಡಗಳು ಘಟನಾ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ