newsfirstkannada.com

ತನ್ನನ್ನ ಕೇಳದೆ ಅಡುಗೆಗೆ ಟೊಮ್ಯಾಟೋ ಬಳಸಿದ್ದ ಗಂಡ; ಜಗಳ ಮಾಡಿ ಮನೆಯನ್ನೇ ಬಿಟ್ಟ ಹೆಂಡತಿ

Share :

13-07-2023

    ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಟೊಮ್ಯಾಟೋ ಬೆಲೆ

    ಟೊಮ್ಯಾಟೋ ಬಳಸಿದ್ದಕ್ಕೆ ಗಂಡನೊಂದಿಗೆ ಜಗಳ..!

    ಗಂಡನೊಂದಿಗೆ ಜಗಳ ಮಾಡಿ ಮನೆ ಬಿಟ್ಟ ಹೆಂಡತಿ

ಭೋಪಾಲ್​​: ತನ್ನನ್ನು ಕೇಳದೆ ಗಂಡ ಸಾಂಬಾರಿಗೆ ಟೊಮ್ಯಾಟೋ ಹಾಕಿದ ಎಂಬ ಕಾರಣಕ್ಕೆ ಹೆಂಡತಿ ಮುನಿಸಿಕೊಂಡಿದ್ದಾಳೆ. ಕೇವಲ ಮುನಿಸಿಕೊಂಡಿದ್ದಲ್ಲ, ಬದಲಿಗೆ ಗಂಡನನ್ನು ಬಿಟ್ಟು ಮಗುವಿನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ.

ಹೌದು, ಈ ಘಟನೆ ನಡೆದಿದ್ದು ಮತ್ತೆಲ್ಲೂ ಅಲ್ಲ, ಮಧ್ಯಪ್ರದೇಶದ ಶಾಹದೋಲ್‌ ಎಂಬಲ್ಲಿ. ಸದ್ಯ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ದುಡ್ಡು ಕೊಟ್ಟು ಮನೆಗೆ ಟೊಮ್ಯಾಟೋ ತರುವಾಗ ಕಣ್ಣಲ್ಲಿ ನೀರು ಬರುತ್ತದೆ. ಹೀಗಿರುವಾಗ ನನ್ನನ್ನು ಕೇಳದೆ ಸಾಂಬಾರಿಗೆ ಟೊಮ್ಯಾಟೋ ಯಾಕೆ ಹಾಕಿದ್ರಿ ಎಂದು ಗಂಡನ ಜತೆ ಜಗಳ ಮಾಡಿ ಮನೆಯನ್ನೇ ತೊರೆದಿದ್ದಾಳೆ.

ಸಂಜೀವ್‌ ಬರ್ಮನ್‌ ಎಂಬಾತ ಸಣ್ಣ ಹೋಟೆಲ್​ ಮಾಲೀಕ. ಈ ದಂಪತಿ ಸಣ್ಣ ಹೋಟೆಲ್‌ ನಡೆಸುತ್ತಿದೆ. ಟೊಮ್ಯಾಟೋ ಬೆಲೆ ಏರಿಕೆಯಾದ್ದರಿಂದ ಹೇಗೆ ಹೋಟೆಲ್​ ನಡೆಸುತ್ತಿದ್ದರು. ಪರಿಸ್ಥಿತಿಗೆ ತಕ್ಕಂತೆ ಅಡುಗೆ ಮಾಡುತ್ತಿದ್ದರು. ಆದರೆ ಸಂಜೀವ್‌ ಬರ್ಮನ್‌ ಅಡುಗೆ ಮಾಡುವಾಗ ಹೆಂಡತಿಯನ್ನು ಕೇಳದೇ ಎರಡು ಟೊಮ್ಯಾಟೋ ಬಳಸಿದ್ದಾರೆ. ಇದರಿಂದ ಸಿಟ್ಟಾದ ಹೆಂಡತಿ ಗಂಡನ ಜತೆ ಜಗಳ ಮಾಡಿ ಮನೆಬಿಟ್ಟಿದ್ದಾಳೆ.

ಹೆಂಡತಿಯನ್ನು ಹುಡುಕಿ ಕೊಡಿ ಎಂದು ದೂರು

ಸದ್ಯ ಹೆಂಡತಿಯನ್ನು ಹುಡುಕಿ ಕೊಡಿ ಎಂದು ಸಂಜೀವ್​​ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಮಾತಾಡಿದ ಪೊಲೀಸ್​ ಅಧಿಕಾರಿ ಒಬ್ಬರು, ಟೊಮ್ಯಾಟೋ ವಿಚಾರಕ್ಕೆ ಜಗಳ ನಡೆದಿದೆ. ಹೀಗಾಗಿ ಮಗುವಿನೊಂದಿಗೆ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ಸಂಜೀವ್ ದೂರು ನೀಡಿದ್ದಾರೆ ಎಂದು ತಿಳಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತನ್ನನ್ನ ಕೇಳದೆ ಅಡುಗೆಗೆ ಟೊಮ್ಯಾಟೋ ಬಳಸಿದ್ದ ಗಂಡ; ಜಗಳ ಮಾಡಿ ಮನೆಯನ್ನೇ ಬಿಟ್ಟ ಹೆಂಡತಿ

https://newsfirstlive.com/wp-content/uploads/2023/07/Tomatoe.jpg

Load More