ಸಹೋದರನ ಬಳಿಯ ದುಡ್ಡಿನ ವಿಚಾರದ ಗಲಾಟೆಗೆ ಶೂಟೌಟ್ ನಡೆಯಿತಾ?
ಯಮನಂತೆ ಬಂದು ಇಬ್ಬರ ಮಹಿಳೆಯರ ಮೇಲೆ ಫೈರಿಂಗ್, ಎಸ್ಕೇಪ್..!
ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಪ್ರಾಣಬಿಟ್ಟ ಪಿಂಕಿ, ಜ್ಯೋತಿ..!
ನವದೆಹಲಿ: ಅಪರಿಚಿತ ವ್ಯಕ್ತಿಗಳ ಫೈರಿಂಗ್ನಿಂದ ಇಬ್ಬರು ಸಹೋದರಿಯರು ಸಾವನ್ನಪ್ಪಿರುವ ದುರ್ಘಟನೆ ದೆಹಲಿಯ ಆರ್.ಕೆ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ದೆಹಲಿಯ ಅಂಬೇಡ್ಕರ್ ಬಸ್ತಿಯ ನಿವಾಸಿಗಳಾದ ಪಿಂಕಿ (30), ಜ್ಯೋತಿ (29) ಗನ್ ಫೈರಿಂಗ್ನಿಂದ ಮೃತಪಟ್ಟ ಸಹೋದರಿಯರು. ಇಂದು ಬೆಳಗಿನ ಜಾವ ಬಸ್ತಿಯಲ್ಲಿ ದುಷ್ಕರ್ಮಿಗಳು ಇವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಪಿಂಕಿ, ಜ್ಯೋತಿ ನೆಲಕ್ಕೆ ಬಿದ್ದಿದ್ದರು. ಈ ವೇಳೆ ಗಾಯಾಳುಗಳನ್ನು ಸ್ಥಳೀಯ SJ ಆಸ್ಪತ್ರೆಗೆ ದಾಖಲು ಮಾಡಿತ್ತಾದ್ರೂ ಚಿಕಿತ್ಸೆ ಫಲಿಸದೇ ಇಬ್ಬರು ಸಾವನ್ನಪ್ಪಿದ್ದಾರೆ.
ಬೆಳಗಿನ ಜಾವ 4:40ರ ಸಮಯಕ್ಕೆ ಆರ್.ಕೆ ಪುರಂ ಪೊಲೀಸ್ ಠಾಣೆಗೆ ಸ್ಥಳೀಯರು ಫೋನ್ ಮಾಡಿ ಇಬ್ಬರು ಮಹಿಳೆಯರ ಮೇಲೆ ಫೈರಿಂಗ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ತಕ್ಷಣ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇನ್ನು ಹಣದ ವಿಚಾರಕ್ಕೆ ಸಂಬಂಧ ಪಟ್ಟಂತೆ ದುಷ್ಕರ್ಮಿಗಳು ಮೃತಪಟ್ಟ ಮಹಿಳೆಯರ ಸಹೋದರನಿಗಾಗಿ ಹುಡುಕುತ್ತಿದ್ದರು ಎನ್ನಲಾಗಿದೆ. ಈ ವೇಳೆ ಮನೆಯಲ್ಲಿದ್ದ ಮಹಿಳೆಯರಿಗೆ ಶೂಟ್ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ