newsfirstkannada.com

ಲಾಂಗ್ ಹಿಡಿದು ಇನ್​​ಸ್ಟಾದಲ್ಲಿ ವಿಡಿಯೋ​ ಶೇರ್​.. ಜನರನ್ನ ಹೆದರಿಸ್ತಿದ್ದ ಇಬ್ಬರು ಕಿರಾತಕರು ಅರೆಸ್ಟ್​

Share :

Published June 23, 2024 at 1:42pm

    ಹೆದರಿಕೆ ಹುಟ್ಟಿಸೋ ರೀತಿ ಲಾಂಗ್ ಹಿಡಿದು ಯುವಕರ ಸುತ್ತಾಟ

    ಕೈಯಲ್ಲಿ ತಲ್ವಾರ್​ಗಳನ್ನ ಹಿಡಿದು ಜನರನ್ನ ಭಯ ಬೀಳಿಸಿದ್ದರು

    ತಲ್ವಾರ್ ಝಳಪಿಸಿ ಇನ್​ಸ್ಟಾದಲ್ಲಿ ಶೇರ್ ಮಾಡ್ತಿದ್ದ ಕಿರಾತಕರು

ಚಿಕ್ಕಮಗಳೂರು: ನಮ್ಮನ್ನು ನೋಡಿ ಜನ ಹೆದರಬೇಕೆಂದು ಇನ್​ಸ್ಟಾದಲ್ಲಿ ಲಾಂಗ್ ಹಿಡಿದಿರೋ ವಿಡಿಯೋ ಪೋಸ್ಟ್ ಹಾಕ್ತಿದ್ದ ಇಬ್ಬರು ಕಿಡಿಗೇಡಿಗಳನ್ನ ಸಿನಿಮೀಯಾ ರೀತಿಯಲ್ಲಿ ಕಾರು ಅಡ್ಡಗಟ್ಟಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎನ್​ಆರ್ ಪುರ ತಾಲೂಕಿನ ಸೌತಿಕೆರೆ ಗ್ರಾಮದ ಬಳಿ ಈ ಘಟನೆ ನಡೆದಿದೆ.

ಇದನ್ನೂ ಓದಿ: 50 ವಯಸ್ಸಿನ ವ್ಯಕ್ತಿ ಜೊತೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಕೇಸ್​.. ಇಬ್ಬರ ಮೃತದೇಹಗಳು ಪತ್ತೆ

ಎನ್.ಆರ್ ಪುರ ಪಟ್ಟಣದ ಮೆಕ್ಯಾನಿಕ್ ಸೈಯದ್ ಸಲ್ಮಾನ್ (22), ಮೊಹಮ್ಮದ್ ಸಾಧಿಕ್ (25) ಬಂಧಿತ ಯುವಕರು. ನಮ್ಮನ್ನು ನೋಡಿ ಜನರು ಹೆದರಬೇಕೆಂದು ಈ ಇಬ್ಬರು ಲಾಂಗ್ ಅನ್ನು ತೋರಿಸುತ್ತಿದ್ದರು. ಜನರಿಗೆ ಹೆದರಿಕೆ ಬರೋ ರೀತಿ ತಲ್ವಾರ್ ಹಿಡಿದು ಸುತ್ತಾಡುತ್ತಿದ್ದರು. ಎಲ್ಲಿಗಾದರು ಕಾರಿನಲ್ಲಿ ಹೋಗುವಾಗ ಲಾಂಗ್​ಗಳ ಸಮೇತ ಹೋಗುತ್ತಿದ್ದರು.

ಇದನ್ನೂ ಓದಿ: ಗಿಲ್​​​ಕ್ರಿಸ್ಟ್​​ರಂತೆ ​ಮೋಸ್ಟ್ ಡೇಂಜರಸ್ ಪಂತ್​.. ರಿಷಬ್ ಡೈನಾಮಿಕ್ ಬ್ಯಾಟಿಂಗ್, ಕೀಪಿಂಗ್ ಹೇಗಿರುತ್ತೆ?

ಈ ಸಂಬಂಧ ಸಾರ್ವಜನಿಕರ ಮಾಹಿತಿ ಮೇರೆಗೆ ಎನ್​.ಆರ್ ಪುರ ಠಾಣೆಯ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಕಾರಿನಲ್ಲಿ ಲಾಂಗ್​​ಗಳನ್ನ ಇಟ್ಟುಕೊಂಡು ಓಡಾಟ ನಡೆಸುವಾಗ ಪೊಲೀಸರು ಸಿನಿಮೀಯ ರೀತಿ ಕಾರನ್ನು ಅಡ್ಡ ಗಟ್ಟಿದ್ದಾರೆ. ಬಳಿಕ ಇಬ್ಬರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಾಂಗ್ ಹಿಡಿದು ಇನ್​​ಸ್ಟಾದಲ್ಲಿ ವಿಡಿಯೋ​ ಶೇರ್​.. ಜನರನ್ನ ಹೆದರಿಸ್ತಿದ್ದ ಇಬ್ಬರು ಕಿರಾತಕರು ಅರೆಸ್ಟ್​

https://newsfirstlive.com/wp-content/uploads/2024/06/CKM_ARRESTED.jpg

Load More