newsfirstkannada.com

ಡ್ರ್ಯಾಗನ್​ ರಾಷ್ಟ್ರದಲ್ಲಿ ವರುಣನ ಆರ್ಭಟ.. ನದಿಗಳ ಉಗ್ರರೂಪದಿಂದ ಪ್ರವಾಹದಲ್ಲಿ ಕೊಚ್ಚಿ ಹೋದ ಜನ

Share :

12-09-2023

  ನದಿಗಳ ಉಗ್ರರೂಪದಿಂದ ನೀರಿನಿಂದ ತುಂಬಿದ ರಸ್ತೆ, ಮೆಟ್ರೋ ನಿಲ್ದಾಣಗಳು

  ಭೋರ್ಗರೆ ನೀರಲ್ಲಿ ಅಪಾರ್ಟ್‌ಮೆಂಟ್ ಅಂಡರ್‌ಪಾಸ್‌, ಮೆಟ್ರೋ ಜಲಾವೃತ

  ಪದೇ ಪದೇ ಪ್ರವಾಹ, ಪ್ರಕೃತಿ ಮಾತೆಯ ಮುನಿಸಿಗೆ ಚೀನಾದ ಜನರಲ್ಲಿ ಆತಂಕ

ಡ್ಯ್ರಾಗನ್​ ರಾಷ್ಟ್ರ ಚೀನಾದಲ್ಲಿ ವರುಣ ಅಬ್ಬರಿಸಿ ಬೊಬ್ಬರಿಯುತ್ತಿದ್ದಾನೆ. ಮಳೆರಾಯನ ಅಬ್ಬರಕ್ಕೆ ಚೀನಾದ ಪ್ರಮುಖ ನಗರಗಳು ನದಿಗಳಾಗಿ ಬದಲಾಗಿವೆ. ಟೈಫೂನ್ ಚಂಡ ಮಾರುತದ ಅಬ್ಬರಕ್ಕೆ ಮನೆಗಳು ಮುಳುಗಡೆಯಾಗಿವೆ. ರಸ್ತೆಗಳಲ್ಲಿ ನದಿಯಂತೆ ನೀರು ರಭಸವಾಗಿ ಹರಿಯುತ್ತಿದೆ. ಮನೆ ಮಠ ಕಳೆದುಕೊಂಡು ಕನ್ಯೂನಿಸ್ಟ್ ರಾಷ್ಟ್ರದ ಹಲವು ಪ್ರದೇಶದ ಜನರು ಬೀದಿಗೆ ಬಿದ್ದಿದ್ದಾರೆ. ಸಾವು-ನೋವುಗಳು ಸಂಭವಿಸಿವೆ.

ಚೀನಾದಲ್ಲಿ ಮಳೆರಾಯ ಸೃಷ್ಟಿಸಿರೋ ಅನಾಹುತ. ಕಳೆದ 1 ವಾರದಿಂದ ಸುರಿಯುತ್ತಾ ಸೃಷ್ಟಿಸಿರೋ ಜಲಪ್ರಳಯ. ಜನರಿಗೆ ವರುಣದೇವ ನೀಡಿರೋ ಮಹಾ ಪೆಟ್ಟು. ಏಟಿನ ಮೇಲೆ ಏಟು.

ಹೈಕುಯಿ ಚಂಡಮಾರುತದ ಆರ್ಭಟ.. ಚೀನಾ ನರಳಾಟ

ಕಳೆದ 70 ವರ್ಷಗಳಲ್ಲಿ ಕಂಡು ಕೇಳರಿಯದ ಮಳೆಯ ಆರ್ಭಟಕ್ಕೆ ಚೀನಾ ದೇಶ ತತ್ತರಿಸಿ ಹೋಗಿದೆ.. ಹೈಕುಯಿ ಚಂಡಮಾರುತದ ಹೊಡೆತಕ್ಕೆ ದಕ್ಷಿಣ ಚೀನಾದ ಕೆಲವು ಭಾಗಗಳು ಸಂಪೂರ್ಣ ಮುಳುಗಡೆ ಆಗಿವೆ.. ಕಳೆದ 7 ದಿನಗಳಿಂದ ಚೀನಾದ ಬಹುತೇಕ ನಗರಗಳು ತೀವ್ರ ಪ್ರವಾಹವನ್ನು ಎದುರಿಸುತ್ತಿವೆ. ಶಾಂಘೈನ ಗುವಾಂಗ್‌ಡಾಂಗ್, ಗುವಾಂಗ್‌ಕ್ಸಿ ಮತ್ತು ಫುಜಿಯಾನ್‌ನ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಸಾವಿರಾರು ನಿವಾಸಿಗಳು ಮನೆಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

ಗುವಾಂಗ್ಕ್ಸಿ ಪ್ರದೇಶದ ಉಪನಗರದಲ್ಲಿ, ಪ್ರವಾಹದ ನೀರು 7 ಅಡಿಗಿಂತ ಹೆಚ್ಚಿನ ಮಟ್ಟದಲ್ಲಿ ಹರಿಯುತ್ತಿದೆ.. ಇತ್ತ ಚೀನಾದ ಮತ್ತೊಂದು ಮಹಾ ನಗರ ಶಾಂಘೈನಲ್ಲಿ ರಭಸವಾಗಿ ಹರಿಯೋ ನೀರಲ್ಲಿ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದಾನೆ. ಈ ವೇಳೆ ಆತನನ್ನು ರಕ್ಷಿಸಲು ಹೋದ ಮಹಿಳೆ ಕೂಡಾ ನೀರಲ್ಲಿ ಕೊಚ್ಚಿ ಹೋಗಿದ್ದಾರೆ.

7 ದಿನಗಳಿಂದ ಮಳೆಯ ಆರ್ಭಟಕ್ಕೆ ಕಂಗೆಟ್ಟ ಜನ 

ಶಾಂಘೈ ಪುಡಾಂಗ್ ಪ್ರದೇಶದಲ್ಲಿ ಸುಮಾರು 45 ನಿಮಿಷಗಳಲ್ಲಿ 105 ಮಿಮೀ ಮಳೆಯಾಗಿದೆ. ಇನ್ನೂ ಒಳನಾಡಿನ ವಾಯುವ್ಯ ಪ್ರದೇಶದ ಕ್ಸಿಯಾನ್‌ನಲ್ಲಿ 1 ಗಂಟೆಯಲ್ಲಿ 64 ಮಿಲಿ ಮೀಟರ್‌ನಷ್ಟು ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ.. ಕಳೆದ 7 ದಿನಗಳಿಂದ ಮಳೆಯ ಆರ್ಭಟಕ್ಕೆ ಜನರು ಕಂಗೆಟ್ಟು ಹೋಗಿದ್ದಾರೆ. ಮನೆಗಳು ಮುಳುಗಡೆಯಾಗಿವೆ.. ರಸ್ತೆಗಳಲ್ಲಿ ನೀರು ನದಿಯಂತೆ ಹರಿಯುತ್ತಿದೆ.. ನದಿಗಳು ರಭಸವಾಗಿ ಹರಿಯುತ್ತಾ ಊರುಗಳನ್ನೇ ಮುಳುಗಿಸಿ ಮುನ್ನುಗ್ಗುತ್ತಿವೆ.

ಚಂಡಮಾರುತದ ಭೀತಿಗೂ ಮುನ್ನ ಸುಮಾರು 30 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಇದ್ರಿಂದ ಯಾವುದೇ ಸಾವುನೋವುಗಳಾಗಿಲ್ಲ. ಇನ್ನೂ ಕೆಲವೆಡೆ ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯರು ರಕ್ಷಮಾ ಸಿಬ್ಬಂದಿ ಹರಸಾಹಸವನ್ನೇ ಪಡ್ತಿದ್ದಾರೆ.. ನದಿಯಂತಾಗಿರೋ ರಸ್ತೆಗಳಲ್ಲಿ ಬೋಟ್‌ ಮೂಲಕ ಜನರನ್ನ ರಕ್ಷಣೆ ಮಾಡ್ತಿದ್ದಾರೆ.

ಹೈಕುಯಿ ಚಂಡಮಾರುತದ ಅಬ್ಬರ, ಚೀನಾ ತತ್ತರ

ಸೆಪ್ಟೆಂಬರ್ 5 ರಂದು ಫುಜಿಯಾನ್ ಪ್ರಾಂತ್ಯಕ್ಕೆ ಹೈಕುಯಿ ಚಂಡಮಾರುತ ಅಪ್ಪಳಿಸಿತ್ತು. ಅಂದಿನಿಂದ ನಿನ್ನೆವರೆಗೂ ದಕ್ಷಿಣ ಚೀನಾದಲ್ಲಿ ಭಾರೀ ಅವಾಂತರಗಳೇ ಸೃಷ್ಟಿಯಾಗಿವೆ. ಹೆಚ್ಚು ಜನನಿಬಿಡ ನಗರವಾದ ಶೆನ್‌ಜೆನ್, ಹೈಕುಯಿ ಚಂಡಮಾರುತದ ಅಬ್ಬರಕ್ಕೆ 1952ರಲ್ಲಿ ಕಂಡಿದ್ದ ಮಳೆಯನ್ನ ಕಳೆದ ಆರೇಳು ದಿನಗಳಲ್ಲಿ ಕಂಡಿದೆ. ಇಡೀ ನಗರವೇ ಪ್ರವಾಹದ ನೀರಲ್ಲಿ ಸಂಪೂರ್ಣ ಮುಳುಗಿ ಮುದ್ದೆಯಾಗಿದೆ.

140 ವರ್ಷಗಳ ಬಳಿಕ ಹಾಂಗ್‌ಕಾಂಗ್‌ ನಗರ ಭಾರೀ ಮಳೆಯನ್ನ ಕಂಡಿದೆ. ಭೀಕರ ಮಳೆಗೆ ಹಾಂಗ್ ಕಾಂಗ್‌ನಿಂದ ಕೌಲೂನ್‌ಗೆ ಸಂಪರ್ಕಿಸುವ ಓಕೈಕ ಬಂದರಿನ ಸುರಂಗ ಮಾರ್ಗವೂ ಕೂಡಾ ಮುಳುಗಡೆಯಾಗಿದೆ.. ಪ್ರವಾಹದಿಂದಾಗಿ ನಗರದ ಹಲವೆಡೆ ಸಾರಿಗೆ ಸೇವೆಗಳು ಮತ್ತು ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿವೆ. ಹಾಂ​ಕಾಂಗ್‌ನ ಅಗತ್ಯ ನೌಕರರನ್ನು ಮಾತ್ರ ಕಚೇರಿಗಳಿಗೆ ಕರೆಸಿಕೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿದೆ. ಉಳಿದವರು ವರ್ಕ್‌ ಫ್ರಂ ಹೋಂ ಮಾಡುವಂತೆ ಆದೇಶ ಹೊರಡಿಸಿದೆ.

ಚೀನಾದಲ್ಲಿ ಹೈಕುಯಿ ಚಂಡಮಾರುತ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಜಲಾಸುರನ ಆರ್ಭಟಕ್ಕೆ ನೆರೆಯ ರಾಷ್ಟ್ರ ನೆರೆ ಹಾವಳಿಯನ್ನ ಎದುರಿಸ್ತಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಚೀನಾ ಪದೇ ಪದೇ ಪ್ರವಾಹಕ್ಕೆ ತುತ್ತಾಗ್ತಿದೆ. ಪ್ರಕೃತಿ ಮಾತೆಯ ಮುನಿಸಿನ ನೇರ ಟಾರ್ಗೆಟ್‌ ಆದಂತೆ ಕಾಣ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ರ್ಯಾಗನ್​ ರಾಷ್ಟ್ರದಲ್ಲಿ ವರುಣನ ಆರ್ಭಟ.. ನದಿಗಳ ಉಗ್ರರೂಪದಿಂದ ಪ್ರವಾಹದಲ್ಲಿ ಕೊಚ್ಚಿ ಹೋದ ಜನ

https://newsfirstlive.com/wp-content/uploads/2023/09/CHINA-1.jpg

Load More