newsfirstkannada.com

ಮಗನ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದ ಮಹಿಳೆ ಮೇಲೆ ಹಲ್ಲೆ ಕೇಸ್​.. ಕೊನೆಗೂ ಕ್ಯಾಬ್ ಡ್ರೈವರ್ ಅರೆಸ್ಟ್

Share :

10-08-2023

    ಮಹಿಳೆಯರೇ ಕ್ಯಾಬ್​​ ಹತ್ತೋ ಮುನ್ನ ಎಚ್ಚರ, ಎಚ್ಚರ

    ಒಂದು ಸಣ್ಣ ತಪ್ಪಿಗೆ ರಕ್ಕಸನಾದ ಕ್ಯಾಬ್ ಡ್ರೈವರ್

    ಎಲ್ಲರೂ ಓದಲೇಬೇಕಾದ ಸ್ಟೋರಿ ಇದು

ಬೆಂಗಳೂರು: ಸಿಟಿಯಲ್ಲಿ ಸಾಕಷ್ಟು ಸಾರಿಗೆ ವ್ಯವಸ್ಥೆಯಿದ್ರೂ ಜನರಿಗೆ ತಮ್ಮ ಬೆರಳತುದಿಯಲ್ಲಿ ಸಿಗೋದೇ ಬೇಕು. ಅದರಲ್ಲೂ ಅರ್ಜೆನ್ಸಿಗೆ ಥಟ್​ ಅಂತ ತಲೆಗೆ ಹೊಳಿಯೋದು ಓಲಾ. ಊಬರ್​ ಕ್ಯಾಬ್​ ಆಟೋಗಳು. ಆದ್ರೆ ಅದೇನೋ ಗೊತ್ತಿಲ್ಲ. ಈ ಆ್ಯಪ್​ ಆಧಾರಿತ ಕ್ಯಾಬ್​ಗಳಲ್ಲಿ ರಗಳೆ ಹೆಚ್ಚಾಗಿದೆ. ಡ್ರೈವರ್​ಗಳು ಪ್ಯಾಸೆಂಜರ್​​ಗಳು ಕೈ ಕೈ ಮಿಲಾಯಿಸುವ ಹಂತ ತಲುಪಿಬಿಟ್ಟಿದ್ದಾರೆ.

ಹೀಗೆ ನಿನ್ನೆ ಬೋಗನಹಳ್ಳಿಯ ಮಹಿಳೆಯೊಬ್ಬರು ಮಗನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಲುವಾಗಿ ಊಬರ್​ ಆ್ಯಪ್​ನಲ್ಲಿ ಕ್ಯಾಬ್​ ಬುಕ್​ ಮಾಡಿದ್ದಾರೆ. ಅದ್ರಂತೆ​ ಕ್ಯಾಬ್​ ಕೂಡಾ ಬಂದಿದೆ. ಮಹಿಳೆ ಹತ್ತಿದ್ದಾರೆ. ಆದ್ರೆ ಓಟಿಪಿ ಚೆಕ್​ ಮಾಡುವಾಗ ತಾನು ಹತ್ತಿರೋದು ಬೇರೆ ಕ್ಯಾಬ್​ ಅನ್ನೋದು ಗೊತ್ತಾಗಿ ಕಾರಿಂದ ಇಳಿಯುತ್ತಾರೆ. ಆಮೇಲೆ ನೋಡಿ ಕ್ಯಾಬ್​ ಚಾಲಕ ಮಹಿಳೆ ಮೇಲೆ ಕೈ ಎತ್ತೋದು.

ಅಪಾರ್ಟ್​ಮೆಂಟ್​ ಮುಂದೆಯೇ ಘಟನೆ ನಡೆದಿದ್ದು, ಸ್ಥಳೀಯರು ಬಂದು ಮಹಿಳೆಯನ್ನ ರಕ್ಷಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ನಿವಾಸಿಗಳು ಬೆಳ್ಳಂದೂರು ಪೊಲೀಸರಿಗೆ ದೂರು ಕೊಟ್ಟಿದ್ದು ಆರೋಪಿ ಡ್ರೈವರ್​ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ವಿಚಾರಣೆ ಮಾಡಿದ್ದಾರೆ. ಆಗ ಡ್ರೈವರ್​ ಹೇಳಿದ್ದೇ ಬೇರೆ.

ನಿಜಕ್ಕೂ ಅಲ್ಲಿ ಆಗಿದ್ದೇನು?

ಒಂದೇ ಅಪಾರ್ಟ್​​ಮೆಂಟ್​ನಲ್ಲಿ ಎರಡು ಕ್ಯಾಬ್ ಬುಕ್ ಆಗಿದೆ. ಆ ಮಹಿಳೆ ಬುಕ್​ ಮಾಡಿದ್ದ ಕಾರು. ಬೇರೆ. ನಾನು ಬೇರೊಬ್ಬರ ಪಿಕಪ್​ಗೆ ಬಂದಿದ್ದೆ. ಅವರು ನನ್ನ ಕಾರು ಹತ್ತಿದ್ರು. 100 ಮೀಟರ್​ ಮೂವ್​ ಆಗಿದ್ದೆ. ಆಮೇಲೆ ಅವ್ರು ಏಕವಚನದಲ್ಲಿ ಗಾಡಿ ನಿಲ್ಲಿಸು ಅಂದ್ರು. ನಿಲ್ಲಿಸಿದೆ, ರೆಸ್ಪೆಕ್ಟ್​ ಕೊಟ್ಟು ಮಾತಾಡಿ ಅಂದೆ. ಆಮೇಲೆ ಇಬ್ಬರಿಗೂ ಮಾತಿಗೆ ಮಾತು ಬೆಳೆಯಿತು. ಅವರು ಕಾರಿಂದ ಇಳಿದು ಜೋರಾಗಿ ಡೋರ್​ ಹಾಕಿದ್ರು. ನಾನು ಕಾರನ್ನ ನನ್ನ ತಾಯಿ ಥರ ನೋಡ್ಕೋತಿದ್ದೀನಿ. ಆ ಲೇಡಿ ಅಷ್ಟು ಜೋರಾಗಿ ಡೋರ್​ ಹಾಕಿದ್ದಕ್ಕೆ ನನಗೆ ಸಿಟ್ಟು ಬಂದು ಅವರನ್ನ ತಳ್ಳಿದೆ ಎಂದಿದ್ದಾರೆ ಕಾರು ಚಾಲಕ ಬಸವರಾಜ್.

ಸದ್ಯ ದೂರು ದಾಖಲಿಸಿಕೊಂಡಿರೋ ಪೊಲೀಸರು ಆರೋಪಿ ಹೇಳಿಕೆಯನ್ನ ದಾಖಲಿಸಿದ್ದಾರೆ. ಅದೇನೇ ಇರ್ಲಿ ಸಾರ್ವಜನಿಕರ ನಡುವೆ ಕೆಲಸ ಮಾಡುವಾಗ ಸ್ವಲ್ಪ ಸಮಾಧಾನ ಚಾಲಕರಿಗೆ ಮುಖ್ಯವಾಗುತ್ತೆ. ಹಾಗೆ ಎಲ್ಲರಿಗೂ ರೆಸ್ಪೆಕ್ಟ್​​ ಕೊಡೋದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತೆ ಅನ್ನೋದನ್ನ ಮರೆತಿದ್ದೇ ಈ ಘಟನೆಗೆ ಕಾರಣ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗ್ತಿದೆ ಅಲ್ವಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗನ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದ ಮಹಿಳೆ ಮೇಲೆ ಹಲ್ಲೆ ಕೇಸ್​.. ಕೊನೆಗೂ ಕ್ಯಾಬ್ ಡ್ರೈವರ್ ಅರೆಸ್ಟ್

https://newsfirstlive.com/wp-content/uploads/2023/08/Crime90.jpg

Load More