ಸನಾತನ ಧರ್ಮವನ್ನು ಡೆಂಗ್ಯೂಗೆ ಹೋಲಿಸಿದ್ದ ಉದಯನಿಧಿ
ಮತ್ತೆ ಬಿಜೆಪಿ, ಹಿಂದೂ ಮುಖಂಡರ ಕಾಲೆಳೆದ ಸ್ಟಾಲಿನ್ ಪುತ್ರ
ಈ ಬಾರಿ ಅಂಥದ್ದೇನಾಯ್ತು..? ಉದಯ ಆ ಟ್ವೀಟ್ನಲ್ಲೇನಿದೆ..?
ಚೆನ್ನೈ: ಇತ್ತೀಚೆಗೆ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಮತ್ತೊಂದು ಟ್ವೀಟ್ (X) ಮಾಡಿದ್ದಾರೆ. ಈ ಟ್ವೀಟ್ ಮೂಲಕ ಸನಾತನ ಧರ್ಮದ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ ಉದಯನಿಧಿ. ಅದರಲ್ಲೂ ಕಟ್ಟರ್ ಹಿಂದೂ ವಿರೋಧಿ ಎಂದು ಖ್ಯಾತಿಯಾಗಿರೋ ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಮಾತಾಡಿರೋ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
#கலைஞர்100 pic.twitter.com/d9pO9Blyxb
— Udhay (@Udhaystalin) September 9, 2023
ವಿಡಿಯೋದಲ್ಲೇನಿದೆ..?
ಹಿಂದುಳಿದ ಜಾತಿಗಳಿಗೆ ಮೇಲ್ವರ್ಗದವರು ವಿದ್ಯೆಯನ್ನು ನಿರಾಕರಿಸಿದ್ದರು. ವಿದ್ಯೆ ಕಲಿತರೆ ನಿಮಗೆ ಶಾಪ ತಟ್ಟಲಿದೆ ಎಂದು ಬೆದರಿಕೆ ಹಾಕಿದ್ದರು. ನಾವ್ಯಾರು ಹೆದರಲಿಲ್ಲ. ವಿದ್ಯೆ ಕಲಿಯಬೇಕು ಎಂದಿರೋ ಕೆಳಜಾತಿ ಮಂದಿ ನರಕಕ್ಕೆ ಹೋಗಲಿದ್ದಾರೆ ಎಂದು ಹೆದರಿಸಿದ್ರು. ಒಂದು ವೇಳೆ ಯಾರಾದ್ರೂ ಅವರಿಗೆ ಗೊತ್ತಿಲ್ಲದೆ ವಿದ್ಯೆ ಕಲಿತರೇ ಅಂಥವರನ್ನು ನಾಲಿಗೆ ಕತ್ತರಿಸುತ್ತಿದ್ದರು. ಕತ್ತರಿಸಿ ನಾಲಿಗೆಯನ್ನು ಸುಟ್ಟು ಹಾಕುತ್ತಿದ್ದರು. ಇದು ಅಂದು ಮಾತ್ರವಲ್ಲ, ಈಗಲೂ ಮನುಧರ್ಮ ಶಾಸ್ತ್ರ ಅದೇ ಹೇಳುತ್ತದೆ. ಹೀಗಾಗಿ ಪೆರಿಯಾರ್ ಮನುಧರ್ಮ ಶಾಸ್ತ್ರವನ್ನು ಸುಟ್ಟರು, ಅಂಬೇಡ್ಕರ್ ಅದರ ವಿರುದ್ಧ ಹೋರಾಟ ನಡೆಸಿದ್ರು ಎಂದು ಕರುಣಾನಿಧಿ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳು ಇವಾಗಿವೆ.
ಇನ್ನು, ಉದಯನಿಧಿ ಈ ವಿಡಿಯೋ ಪೋಸ್ಟ್ ಮಾಡುವ ಮೂಲಕ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ನನ್ನ ತಾತನ ದಾರಿಯಲ್ಲೇ ನಡೆಯುತ್ತೇನೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಇದು ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರನ್ನು ಮತ್ತಷ್ಟು ಕೆರಳಿಸಿದೆ.
ಏನಿದು ಉದಯನಿಧಿ ವಿವಾದ?
ಈ ಹಿಂದೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮವೂ ಡೆಂಗ್ಯೂ, ಮಲೇರಿಯಾ ಇದ್ದಂತೆ. ಇವುಗಳನ್ನು ಎದುರಿಸಲು ಸಾಧ್ಯವಿಲ್ಲ, ಹೀಗಾಗಿ ಸಮಾಜದಿಂದಲೇ ನಿರ್ಮೂಲನೆ ಮಾಡಬೇಕು ಎಂದಿದ್ದರು. ಈ ಹೇಳಿಕೆಗೆ ಇಡೀ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮತ್ತೆ ಇದನ್ನು ಸರ್ಮರ್ಥಿಸಿಕೊಂಡಿದ್ದ ಉದಯನಿಧಿ, ಯಾರ ಕ್ಷಮೆ ಕೇಳುವುದಿಲ್ಲ. ಯಾವುದೇ ರೀತಿಯ ಕಾನೂನು ಹೋರಾಟಕ್ಕೆ ಸಿದ್ಧ ಎಂದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ