ಕನ್ನಡಿಗರ ಮನಗೆದ್ದ ಸಪ್ತ ಸಾಗರದಾಚೆ ಎಲ್ಲೋ ಮೂವಿ
ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಗೆ ಜನ ಫುಲ್ ಫಿದಾ
ಸಿನಿಮಾವನ್ನು ಹಾಡಿಹೊಗಳಿದ ಉದಯನಿಧಿ ಸ್ಟಾಲಿನ್..!
ಬೆಂಗಳೂರು: ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಡೈರೆಕ್ಟರ್ ಹೇಮಂತ್ ರಾವ್ ನಿರ್ದೇಶನದ ನಟ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ರಿಲೀಸ್ ಆಗಿ ಡೀಸೆಂಟ್ ಹಿಟ್ ಆಗಿದೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಜನ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಲು ಥಿಯೇಟರ್ಗೆ ಬರೋ ಜನರ ಸಂಖ್ಯೆ ಹೆಚ್ಚಾಗಿದೆ. ಈಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಮಿನಿಸ್ಟರ್ ಉದಯನಿಧಿ ಸ್ಟಾಲಿನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ (X) ಮಾಡಿರೋ ಉದಯನಿಧಿ ಸ್ಟಾಲಿನ್, ರಕ್ಷಿತ್ ಶೆಟ್ಟಿ ಬ್ರದರ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ತುಂಬಾ ಚೆನ್ನಾಗಿದೆ. ಇಂತಹ ಅತ್ಯುತ್ತಮ ಸಿನಿಮಾ ನಿರ್ಮಾಣ ಮಾಡಿದಕ್ಕಾಗಿ ಎಲ್ಲರಿಗೂ ಅಭಿನಂದನೆಗಳು. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.
@rakshitshetty brother ! loved ur latest film #SaptasagaradaacheEllo ! Excellent film making ! Congrats to the whole team ! Waiting for Side B
— Udhay (@Udhaystalin) September 3, 2023
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ಅಂತೂ ಮನು ಮತ್ತು ಪ್ರಿಯಾ ಪಾತ್ರಗಳನ್ನು ಜೀವಿಸಿದ್ದಾರೆ. ಇಬ್ಬರು ಕೊನೆಗೆ ಸೇರ್ತಾರಾ ಇಲ್ವೋ ಅನ್ನೋ ಅನುಮಾನಭರಿತ ಕುತೂಹಲ ಮೂಡಿಸಿದೆ. ಹೇಮಂತ್ ರಾವ್ ಜಾಣ್ಮೆ ಕಾರಣಕ್ಕೆ ಸಿನಿಮಾದ ಕ್ಲೈಮ್ಯಾಕ್ಸ್ ಏನಿರಬಹುದು? ಎಂದು ಚರ್ಚೆ ನಡೆಸುತ್ತಿದ್ದಾರೆ. ಹೀಗಾಗಿ ಪ್ರೇಕ್ಷಕರು ಸೈಡ್-ಬಿ ಗಾಗಿಯೇ ಕಾಯುತ್ತಿದ್ದಾರೆ.
ಸನಾತನ ಧರ್ಮವೂ ಡೆಂಗ್ಯೂ, ಮಲೇರಿಯಾ ಇದ್ದಂಗೆ ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಉದಯನಿಧಿ ಸ್ಟಾಲಿನ್ ಇತ್ತೀಚೆಗೆ ಸುದ್ದಿಯಾಗಿದ್ದರು. ಈಗ ರಕ್ಷಿತ್ ಶೆಟ್ಟಿ ಸಿನಿಮಾ ಮೆಚ್ಚಿ ಮತ್ತೆ ಸುದ್ದಿಯಲ್ಲಿ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ