ಉಡುಪಿ ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ
ರಷ್ಯಾದವರಿಗೆ ವಾತಾವರಣ ಫೇವರಾಗಿ ಇರಲಿಲ್ಲ
ವಾಯುತತ್ವದಲ್ಲಿ ಹೊರಟದ್ದು ವಾಯುತತ್ವದಲ್ಲೇ ತಲುಪಬೇಕು
Chandrayaan3: ಭಾರತದ ಕನಸಿನ ನೌಕೆ ಚಂದ್ರಯಾನ-3 ಯಶಸ್ವಿಯಾಗಲು ಒಂದೇ ದಿನ ಬಾಕಿ ಇದೆ. ನಾಳೆ ಸಂಜೆ ವಿಕ್ರಂ ನೌಕೆ ಚಂದ್ರನ ಮೇಲೆ ಲ್ಯಾಂಡ್ ಆಗುವ ನಿರೀಕ್ಷೆ ಇದೆ. ಹೀಗಿರುವಾಗ ಚಂದ್ರಯಾನ-3 ಯಶಸ್ವಿಯಾಗಲೆಂದು ಹಲವರು ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ದೇವರ ಮೊರೆ ಹೋಗಿ ಪೂಜೆ ಸಲ್ಲಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಉಡುಪಿ ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಚಂದ್ರಯಾನ-3 ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಭಾರತ ಹಾಗೂ ರಷ್ಯಾ ಎರಡೂ ದೇಶಗಳು ವಾಯುತತ್ವ ರಾಶಿ ಪ್ರಕಾರ ಉಪಗ್ರಹ ಉಡಾಯಿಸಿದೆ. ರಷ್ಯಾ ಮಿಥುನ ಹಾಗೂ ಭಾರತ ತುಲಾ ಲಗ್ನದ ಪ್ರಕಾರ ಉಪಗ್ರಹ ಉಡಾವಣೆಯಾಗಿದೆ. ಮಿಥುನ ಲಗ್ನಕ್ಕೆ ಸಪ್ತಮಾಧಿಪತಿ (ಅಂಬರ) ಗುರು. ಕುಜದ ಪರಿಣಾಮ ಅಂದರೆ ಯಾಂತ್ರೀಕೃತ ದೋಷದಿಂದ ಅಥವಾ ಹವಾಮಾನ ವೈಪರೀತ್ಯದಿಂದ ಬಂದಿದೆ. ಚಂದ್ರನ ಕಕ್ಷೆಯಲ್ಲಿ ಒಮ್ಮೆ ಗುರುತ್ವಾಕರ್ಷಣೆ ಜಾಸ್ತಿಯಾಗುವುದು, ಕಡಿಮೆಯಾಗುವುದಿದೆ. ಇದು ವೇದ ಮಂತ್ರಗಳಲ್ಲಿ ಇದೆ. ತುಲಾ ಲಗ್ನಕ್ಕೆ ಗುರು ದೃಷ್ಟಿ ಇದೆ ಅಂದರೆ ವಾತವರಣ ಫೇವರಾಗಿ ಇದೆ. ರಷ್ಯಾದವರಿಗೆ ವಾತಾವರಣ ಫೇವರಾಗಿ ಇರಲಿಲ್ಲ. ಅವರು ಅವಸರದಲ್ಲಿ ಹೋದ ಸಾಧ್ಯತೆ ಇದೆ. 3 ದಿವಸದಲ್ಲಿ ಹೋಗಿದ್ದಾರೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭಾರತೀಯರ ಸಂಪ್ರದಾಯ ಹೇಗೆ ಎಂದರೆ ಯಾವುದೇ ಒಂದು ಸತ್ಕರ್ಮವನ್ನು ಮಾಡಲು ಹೋದಾಗ ದೇವತಾ ಅನುಗ್ರಹವನ್ನು ಪಡೆದುಕೊಂಡು ಹೋಗುವಂತದ್ದು. ಭಾರತೀಯ ದೇವಸಾನಿಧ್ಯ ಭಾರೀ ಪರಿಣಾಮಕಾರಿಯಾಗುತ್ತದೆ ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.
23ನೇ ತಾರೀಖು 6.30ರಿಂದ ಕುಂಭ ಲಗ್ನ ಬರುತ್ತದೆ. ಜೋತಿಷ್ಯ ಲೆಕ್ಕಾಚಾರ ಹೇಗೆ ಅಂದ್ರೆ ವಾಯುತತ್ವದಲ್ಲಿ ಹೊರಟದ್ದು ವಾಯುತತ್ವದಲ್ಲೇ ತಲುಪಬೇಕು. ಅಥವಾ ಮಿಥುನಕ್ಕೆ ಬಂದ್ರು ಹೇಳಲಿಕ್ಕೆ ಆಗುವುದಿಲ್ಲ. ಅದು ಸ್ವಲ್ಪ ತಡವಾಗುತ್ತದೆ. ಬೆಳಗ್ಗಿನ ಜಾವ 3 ಗಂಟೆಗೆ ಬರಲಿಕ್ಕೂ ಸಾಕು. ಅದು ಹೇಳಲಿಕ್ಕೆ ಆಗುವುದಿಲ್ಲ. ವಾಯುತತ್ವ ಬಿಟ್ಟು ಪೃಥ್ವಿ ತತ್ವದಲ್ಲಿ ಆಗಲಿ, ಜಲತತ್ವದಲ್ಲಿ ಆಗಲಿ ಯಾವ ತತ್ವದಲ್ಲಿ ಕೂಡ ಲ್ಯಾಂಡ್ ಆಗುವುದಿಲ್ಲ. ನನ್ನ ಲೆಕ್ಕಾಚಾರ ಪ್ರಕಾರ ಕುಂಭ ಲಗ್ನದಲ್ಲಿ 6.30ಯಿಂದ 7 ಗಂಟೆಯವರೆಗೆ ಅಲ್ಲಿ ಹೋಗಿ ಲ್ಯಾಂಡ್ ಆಗಬಹುದು ಎಂಬ ಲೆಕ್ಕಾಚಾರ ಮಾಡಿದ್ದೇನೆ. ನನ್ನ ಲೆಕ್ಕಾಚಾರದಲ್ಲಿ ಕೂಡ ಸರಿ ಉಂಟು ಅಂತ ಹೇಳಲು ಧೈರ್ಯ ಬರುವುದಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ