newsfirstkannada.com

ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ ನಾಲ್ವರ ಹತ್ಯೆ.. ಈ ಭೀಕರ ಕೊಲೆಗೆ ಕಾರಣವೇನು..?

Share :

13-11-2023

  ಒಂದಲ್ಲಾ.. ಎರಡಲ್ಲಾ.. ನಾಲ್ವರ ಕಗ್ಗೊಲೆ

  ಮಹಿಳೆ.. ಮಕ್ಕಳು.. ಎನ್ನದೇ ಅಟ್ಟಹಾಸ

  ಉಡುಪಿಯ ನೇಜಾರಿನಲ್ಲಿ ನಾಲ್ವರ ಹತ್ಯೆ!

ಉಡುಪಿ: ಕೃಷ್ಣನೂರಿನಲ್ಲಿ ಕಿರಾತಕನೊಬ್ಬ ಅಕ್ಷರಶಃ ಅಟ್ಟಹಾಸ ಮೆರೆದಿದ್ದಾನೆ. ಒಂದೇ ಕುಟುಂಬದ ನಾಲ್ವರು ಮಂದಿಯನ್ನ ಬರ್ಬರವಾಗಿ ಹತ್ಯೆಗೈದಿದ್ದಾನೆ.. ಇದೀಗ ಹಂತಕನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.. ಜೊತೆಗೆ ಕೊಲೆಗೆ ಕಾರಣವೇನು ಅಂತ ಕೃತ್ಯದ ಜಾಡು ಹಿಡಿದು ಹೊರಟಿದ್ದಾರೆ.

ಒಂದಲ್ಲಾ.. ಎರಡಲ್ಲಾ.. ಬರೋಬ್ಬರಿ ನಾಲ್ವರ ಕಗ್ಗೊಲೆ.. ಮಹಿಳೆ.. ಮಕ್ಕಳು.. ಎನ್ನದೇ ಸಿಕ್ಕ ಸಿಕ್ಕವರ ಮೇಲೆ ಅಟ್ಟಹಾಸ.. ಏಕಾಂಗಿಯಾಗಿ ಬಂದ ಪ್ರೊಫೆಷನಲ್‌ ಕಿಲ್ಲರ್‌ ಇಂದ ಇಡೀ ಕುಟುಂಬವೇ ಅಂತ್ಯಕಂಡಿದೆ.. ಕಿರಾತಕನ ಅಟ್ಟಹಾಸಕ್ಕೆ ಸಿಲುಕಿ ಬರ್ಬರವಾಗಿ ಹತ್ಯೆಯಾಗಿ ಹೋಗಿದೆ.. ಇದೀಗ ಹಂತಕನ ಹೆಜ್ಜೆ ಗುರುತು ಹಿಡಿದು ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

ಉಡುಪಿಯ ನೇಜಾರಿನಲ್ಲಿ ನಾಲ್ವರ ಭೀಕರ ಹತ್ಯೆ ಕೇಸ್!

ಉಡುಪಿಯ ನೇಜಾರಿನಲ್ಲಿ ನಾಲ್ವರನ್ನ ಹಂತಕನೊಬ್ಬ ಭೀಕರ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ನೇಜಾರು ನಿವಾಸಿ ಹಸೀನಾ, ಆಕೆಯ ಪುತ್ರಿಯರಾದ ಅಯ್ನಾಝ್‌, ಅಫ್ನಾನ್‌, ಪುತ್ರ ಆಸಿಂ ಎಂಬುವವರನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾನೆ.. ಆಟೋದಲ್ಲಿ ಬಂದ ಹಂತಕ ಕೇವಲ 15 ನಿಮಿಷದೊಳಗೆ ಈ ಕೃತ್ಯವೆಸಗಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದೀಗ ನಾಲ್ವರನ್ನ ಕೊಂದಿರೋ ಹಂತಕ ಪ್ರೊಫೆಷನಲ್ ಕಿಲ್ಲರ್ ಅನ್ನೋ ಅನುಮಾನ ಮೂಡಿದೆ.. ಕೊಲೆ ಮಾಡಲು ಕಿಲ್ಲರ್ ಅನುಸರಿಸಿರೋ ಮಾರ್ಗಗಳು ಕೊಲೆ ಪಾತಕನ ಪ್ಲಾನ್‌ನ ಸುಳಿವು ಕೊಟ್ಟಿವೆ.

ಪ್ರೊಫೆಷನಲ್​ ಕಿಲ್ಲರ್‌ನಿಂದ ಕೊಲೆ?

ನಾಲ್ವರನ್ನ ಕೊಂದಿರೋ ಹಂತಕ ಪದೇ ಪದೇ ವಾಹನ ಹಾಗೂ ಅಂಗಿ ಬದಲಾಯಿಸುತ್ತಿದ್ದ ಅನ್ನೋದು ಪ್ರೊಫೆಷನಲ್ ಕಿಲ್ಲರ್ ಎಂಬ ಅನುಮಾನ ಮೂಡಿಸಿದೆ. ಕೊಲೆ ಮಾಡಿದ ಘಟನಾ ಸ್ಥಳದಿಂದ ದ್ವಿಚಕ್ರ ವಾಹನದಲ್ಲಿ ಹಂತಕ ಡ್ರಾಪ್ ಪಡೆದಿದ್ದ. ಬಳಿಕ ಸಂತೆಕಟ್ಟೆ ರಿಕ್ಷಾ ನಿಲ್ದಾಣದಿಂದ ಆಟೋ ರಿಕ್ಷಾದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡಿದ್ದ. ಬಳಿಕ ಕರಾವಳಿ ಬೈಪಾಸ್​ನಿಂದ ನಡೆದುಕೊಂಡು ಹೋಗಿದ್ದ.. ಅಲ್ಲಿಂದ ಅಂಬಲಪಾಡಿ ಬಳಿ ಮತ್ತೆ ದ್ವಿಚಕ್ರ ವಾಹನದಲ್ಲಿ ಡ್ರಾಪ್ ಪಡೆದಿದ್ದ. ಅಲ್ಲದೇ ರಕ್ತ ಸಿಕ್ತ ಅಂಗಿ ಬದಲಾಯಿಸಿ ಬ್ರೌನ್ ಕಲರ್ ಅಂಗಿಯನ್ನ ಧರಿಸಿದ್ದ. ಹೀಗೆ ಹೆಜ್ಜೆ ಹೆಜ್ಜೆಯಲ್ಲೂ ಚಾಣಕ್ಷತನ, ಜಾಗರೂಕತೆಯಿಂದ ಹಂತಕ ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿರೋದು ತನಿಖೆಯಲ್ಲಿ ಬಯಲಾಗಿದೆ.

ಆರ್ಥಿಕ ವಿಚಾರಕ್ಕೆ ನಾಲ್ವರ ಹತ್ಯೆ ನಡೆದುಹೋಯ್ತಾ?

ಆರ್ಥಿಕ ವಿಚಾರಕ್ಕಾಗಿ ಹಸೀನಾ ಮತ್ತು ಆಕೆಯ ಮೂವರು ಮಕ್ಕಳ ಕೊಲೆ ನಡೆದಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ. ಇದೇ ಅನುಮಾನ ಪೊಲೀಸರಿಗೆ ಕಾಡುತ್ತಿದೆ. ಅಷ್ಟಕ್ಕೂ ಆರ್ಥಿಕ ವಿಚಾರದಿಂದ ಕೊಲೆ ಎಂಬ ಅನುಮಾನ ಮೂಡೋಕೆ ಕಾರಣವೇನು? ವಿವರಿಸ್ತೀವಿ ನೋಡಿ.

ಆರ್ಥಿಕ ವಿಚಾರಕ್ಕೆ ಕೊಲೆ ಶಂಕೆ!

ಹಸೀನಾರ ಕುಟುಂಬ ಸುಶಿಕ್ಷಿತ ಮತ್ತು ಆರ್ಥಿಕವಾಗಿ ಸದೃಢವಾಗಿತ್ತು. ಹಸೀನಾರ ಪತಿ ಮೂರು ದಶಕದಿಂದ ವಿದೇಶದಲ್ಲಿ ಉದ್ಯೋಗ ಮಾಡ್ತಿದ್ರು.. ಈ ದಂಪತಿಯ ಹಿರಿಯ ಪುತ್ರ ಇಂಡಿಗೋದಲ್ಲಿ ಕೆಲಸ ಮಾಡುತ್ತಿದ್ದ. ಪುತ್ರಿ ಅಫ್ನಾನ್ ಲಾಜಿಸ್ಟಿಕ್ಸ್​ನಲ್ಲಿ ಕೆಲಸ ಮಾಡ್ತಾ ವಿದ್ಯಾಭ್ಯಾಸ ನಡೆಸ್ತಿದ್ರು.. ಮತ್ತೊಬ್ಬ ಪುತ್ರಿ ಅಯ್ನಾಜ್ ಏರ್ ಇಂಡಿಯಾದಲ್ಲಿ ಗಗನ ಸಖಿಯಾಗಿದ್ರು. ಹೀಗಾಗಿ ಹಸೀನಾ ಆರ್ಥಿಕ ಹೂಡಿಕೆ ಮಾಡಿದ್ದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹಣದ ವ್ಯವಹಾರದ ವಿಚಾರದಲ್ಲೇ ಕೊಲೆ ನಡೆದಿರುವ ಸಾಧ್ಯತೆ ಇದೆ. ಆರೋಪಿ ಪ್ರಮುಖ ಟಾರ್ಗೆಟ್ ಹಸೀನಾ ಆಗಿರುವ ಸಾಧ್ಯತೆ ಇದ್ದು, ತಡೆಯಲು ಬಂದಾಗ ಮಕ್ಕಳನ್ನೂ ಹತ್ಯೆ ಮಾಡಿರುವ ಅನುಮಾನ ದಟ್ಟವಾಗಿದೆ.

ಉಡುಪಿ ಜಿಲ್ಲಾ ಪೊಲೀಸರಿಂದ ಮುಂದುವರೆದ ತನಿಖೆ

ಸದ್ಯ ನಾಲ್ವರನ್ನ ಕೊಲೆಗೈದು ಎಸ್ಕೇಪ್‌ ಆಗಿರೋ ಹಂತಕ ಸಂತೆಕಟ್ಟೆ-ಕರಾವಳಿ, ಬೈಪಾಸ್-ಅಂಬಲಪಾಡಿ-ಕಿನ್ನಿಮೂಲ್ಕಿ, ಉದ್ಯಾವರ ಮೂಲಕ ಮಂಗಳೂರಿಗೆ ಪ್ರಯಾಣಿಸಿರೋ ಸುಳಿವು ಸಿಕ್ಕಿದೆ. ಉಡುಪಿಯ ಎಲ್ಲಾ ಜಂಕ್ಷನ್ ಸಿಸಿಟಿವಿ ಫೂಟೇಜ್‌ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ಹಂತಕನ ಹೆಡೆಮುರಿ ಕಟ್ಟಲು ಬಲೆ ಬೀಸಿದ್ದಾರೆ.

ಇನ್ನೂ ಸೌದಿ ಅರೇಬಿಯಾದಿಂದ ಹಸೀನಾ ಪತಿ ನೂರ್ ಮೊಹಮ್ಮದ್ ಉಡುಪಿಗೆ ಆಗಮಿಸಿದ್ದಾರೆ. ಉಡುಪಿ ನಗರದ ಎರಡು ಮಸೀದಿಗಳಲ್ಲಿ ನಾಲ್ಕು ಶವಗಳ ಪ್ರತ್ಯೇಕ ವಿಧಿ ವಿಧಾನ ಕಾರ್ಯ ನೆರವೇಸಲಾಗಿದ್ದು, ಹತ್ಯೆಗೀಡಾಗಿದ್ದ ನಾಲ್ವರನ್ನೂ ದಫನ್ ಮಾಡಲಾಗಿದೆ. ಒಟ್ಟಾರೆ, ನಾಲ್ವರನ್ನ ಕೊಂದ ಕೊಲೆಗಾರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹಂತಕ ಸಿಕ್ಕಬಳಿಕ ಕೊಲೆಗೆ ಅಸಲಿ ಕಾರಣವೇನು ಅನ್ನೋದು ಬಯಲಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ ನಾಲ್ವರ ಹತ್ಯೆ.. ಈ ಭೀಕರ ಕೊಲೆಗೆ ಕಾರಣವೇನು..?

https://newsfirstlive.com/wp-content/uploads/2023/11/Udupi-5.jpg

Load More