newsfirstkannada.com

ಉಡುಪಿ ವಿಡಿಯೋ ಚಿತ್ರೀಕರಣ ವಿರುದ್ಧ ಪ್ರತಿಭಟಿಸಿದ್ದ ಪ್ರತಿಭಟನಾಕಾರರ ವಿರುದ್ಧ FIR ದಾಖಲು

Share :

04-08-2023

    ಬಿಜೆಪಿಯ ವೀಣಾ ಶೆಟ್ಟಿ ವಿರುದ್ಧ ಕೇಸ್

    ಜುಲೈ 28 ರಂದು ನಡೆದಿದ್ದ ಪ್ರತಿಭಟನೆ

    ವೀಣಾ ಶೆಟ್ಟಿ ನೀಡಿದ್ದ ಆಕ್ರೋಶದ ಹೇಳಿಕೆ ಏನು..?

ಉಡುಪಿ: ಜಿಲ್ಲೆಯ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ವಿಡಿಯೋ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸಿದವರ ಮೇಲೆ ಎಫ್​ಐಆರ್​ ದಾಖಲಾಗಿದೆ. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜುಲೈ 28 ರಂದು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಕೇಸ್ ದಾಖಲಾಗಿದೆ. ಬಿಜೆಪಿ ಕಚೇರಿಯಿಂದ ಎಸ್‌ಪಿ ಕಚೇರಿವರೆಗೆ ಜಾಥಾ ನಡೆಸಿ ಬಿಜೆಪಿ ವಿಡಿಯೋ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹಿಸಿತ್ತು.

ಮುಸ್ಲಿಂ ಹುಡುಗಿಯರನ್ನು ಶಾಲಾ ಕಾಲೇಜಿಗೆ ಸೇರಿಸಬೇಡಿ, ಮದರಸಗಳಿಗೆ ಸೇರಿಸಿ ಎಂದು ವೀಣಾಶೆಟ್ಟಿ ಹೇಳಿದ್ದರು. ಕೋಮು ದ್ವೇಷ, ಧರ್ಮ ತಾರತಮ್ಯ ಮಾಡುವ ಹೇಳಿಕೆ ಎಂಬ ಕಾರಣಕ್ಕೆ ಕೇಸ್ ದಾಖಲಾಗಿದೆ. ವೀಣಾ ಶೆಟ್ಟಿ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರೋದನ್ನು ಗಮನಿಸಿದ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಏನಿದು ವಿಡಿಯೋ ಚಿತ್ರೀಕರಣ..?

ಉಡುಪಿ ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ನಡೆದ ಘಟನೆ ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ಒಂದು ಕೋಮಿನ ವಿದ್ಯಾರ್ಥಿನಿಯರು ಮತ್ತೊಂದು ಧರ್ಮಕ್ಕೆ ಸೇರಿದ ಯುವತಿ ವಿಡಿಯೋ ಚಿತ್ರೀಕರಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಸುದ್ದಿಗೋಷ್ಠಿ ನಡೆಸಿ, ತಮಾಷೆಗಾಗಿ ವಿಡಿಯೋ ಮಾಡಿರುವುದಾಗಿ ಯುವತಿರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಸದ್ಯ ಈ ಕೇಸ್​ ಸಂಬಂಧ ಪೊಲೀಸರು ಮೂವರು ವಿದ್ಯಾರ್ಥಿನಿಯರ ಮೇಲೆ ಎಫ್​ಐಆರ್​ ಮಾಡಿದ್ದಾರೆ. ಜತೆಗೆ ಸೋಷಿಯಲ್​ ಮೀಡಿಯಾದಲ್ಲಿ ಇದರ ಬಗ್ಗೆ ಪೋಸ್ಟ್​ ಹಾಕಿದ್ದ ಯುವತಿ ವಿರುದ್ಧವೂ ಸುಳ್ಳು ಸುದ್ದಿ ಹರಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದರು ಎಂದು ಕೇಸ್​ ಹಾಕಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಡುಪಿ ವಿಡಿಯೋ ಚಿತ್ರೀಕರಣ ವಿರುದ್ಧ ಪ್ರತಿಭಟಿಸಿದ್ದ ಪ್ರತಿಭಟನಾಕಾರರ ವಿರುದ್ಧ FIR ದಾಖಲು

https://newsfirstlive.com/wp-content/uploads/2023/08/UDP_CASE.jpg

Load More