newsfirstkannada.com

ಕಾಲೇಜು ಶೌಚಾಲಯದಲ್ಲಿ ಯುವತಿ ವಿಡಿಯೋ ರೆಕಾರ್ಡಿಂಗ್ ಕೇಸ್​ಗೆ ಟ್ವಿಸ್ಟ್​​​; ಏನಿದು ಹೊಸ ಆರೋಪ?

Share :

29-07-2023

    ತಾರಕಕ್ಕೇರಿದ ವಿಡಿಯೋ ರೆಕಾರ್ಡಿಂಗ್ ವಿವಾದ

    ಉಡುಪಿಯ ವಿಡಿಯೋ ಪ್ರಕರಣಕ್ಕೆ ಹೊಸ ಟ್ವಿಸ್ಟ್​!

    ದಿಢೀರ್​ ಕೋರ್ಟ್​ ಮುಂದೆ ವಿದ್ಯಾರ್ಥಿಗಳು ಪ್ರತ್ಯಕ್ಷ

ಉಡುಪಿ: ಖಾಸಗಿ ಕಾಲೇಜಿನ ವಿಡಿಯೋ ರೆಕಾರ್ಡಿಂಗ್ ವಿವಾದ ತಾರಕಕ್ಕೇರಿದ್ದು, ಇದೀಗ ಹೊಸ ಟ್ವಿಸ್ಟ್​ ಸಿಕ್ಕಿದೆ. ಇಷ್ಟು ದಿನ ನಾಪತ್ತೆ ಆಗಿದ್ದ ವಿದ್ಯಾರ್ಥಿನಿಯರು ಎಫ್​ಐಆರ್​ ದಾಖಲಾಗ್ತಿದ್ದಂತೆ ಬಂಧನ ಭೀತಿಯಿಂದ ಕೋರ್ಟ್​ಗೆ ಶರಣಾಗಿದ್ದಾರೆ. ಈಗ ಮೂವರಿಗೂ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಮತ್ತೊಂದೆಡೆ ಉನ್ನತ ತನಿಖೆಗೆ ಆಗ್ರಹಿಸಿ, ಬಿಜೆಪಿ ಬೃಹತ್​ ಪ್ರತಿಭಟನೆ ನಡೆಸಿದೆ.

ಉಡುಪಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಕೇಸ್​ಗೆ ಹೊಸಟ್ವಿಸ್ಟ್​

ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಪ್ರಕರಣ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ ನಾಪತ್ತೆ ಆಗಿದ್ದ ಮೂವರು ಆರೋಪಿತ ವಿದ್ಯಾರ್ಥಿನಿಯರ ಬಂಧನಕ್ಕೆ ಕೂಗು ಹೆಚ್ಚಾಗಿತ್ತು. ಪೊಲೀಸರು ಕೂಡ ವಿದ್ಯಾರ್ಥಿನಿಯರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ರು. ಇದರಿಂದ ಬಂಧನ ಭೀತಿಯಲ್ಲಿದ್ದ ಮೂವರು ವಿದ್ಯಾರ್ಥಿನಿಯರು ಇವತ್ತು ದಿಢೀರ್​ ಪ್ರತ್ಯಕ್ಷವಾಗಿ ಕೋರ್ಟ್​ಗೆ ಶರಣಾಗಿದ್ದಾರೆ.

ಆರೋಪಿತ ವಿದ್ಯಾರ್ಥಿನಿಯರಿಗೆ ಷರತ್ತು ಬದ್ಧ ಜಾಮೀನು

ಪ್ರಕರಣದಲ್ಲಿ ಆಕ್ರೋಶ ಹೆಚ್ಚಾಗ್ತಿದ್ದಂತೆ, ಶೀಘ್ರದಲ್ಲೇ ವಿದ್ಯಾರ್ಥಿನಿಯರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದರು. ಹೀಗಾಗಿ ಬಂಧನ ಭೀತಿ ಹಿನ್ನೆಲೆ ಆರೋಪಿತ ವಿದ್ಯಾರ್ಥಿನಿಯರು, ತಮ್ಮ ವಕೀಲರ ಮೂಲಕ ಖುದ್ದು ಕೋರ್ಟ್​ ಆಗಮಿಸಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ರು. ಇದನ್ನು ಮಾನ್ಯ ಮಾಡಿದ ಉಡುಪಿ ಜಿಲ್ಲಾ ಕೋರ್ಟ್​ನ ನ್ಯಾಯಾಧೀಶರಾದ ಶ್ಯಾಮ್ ಪ್ರಕಾಶ್ ಮೂವರು ವಿದ್ಯಾರ್ಥಿನಿಯರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಷರತ್ತುಬದ್ಧ ಜಾಮೀನು ಮಂಜೂರು

ಆರೋಪಿತ ಮೂವರು ವಿದ್ಯಾರ್ಥಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿದ್ದಾರೆ. ತನಿಖಾಧಿಕಾರಿಗಳ ತನಿಖೆಗೆ ಸಹಕರಿಸಬೇಕು, ವಿಚಾರಣೆ ದಿನ ಕೋರ್ಟ್​ಗೆ ಕಡ್ಡಾಯವಾಗಿ ಹಾಜರಾಗಬೇಕು. ಪ್ರಕರಣದ ಸಾಕ್ಷಿಗಳಿಗೆ ಯಾವುದೇ ಬೆದರಿಕೆಯೊಡ್ಡಬಾರದು. ಹಾಗೂ ತಲಾ 20,000ರೂ. ಮೊತ್ತದ ಬಾಂಡ್ ಸಲ್ಲಿಸುಬೇಕು ಎಂದು ನ್ಯಾಯಾಧೀಶರು ಷರತ್ತು ಬದ್ಧ ಜಾಮೀನಿನಲ್ಲಿ ತಿಳಿಸಿದ್ದಾರೆ.

ಉಡುಪಿಗೆ ಐಜಿಪಿ ಡಾ. ಚಂದ್ರಗುಪ್ತ ಭೇಟಿ, ಪರಿಶೀಲನೆ

ಉಡುಪಿ ವಿಡಿಯೋ ಪ್ರಕರಣ ದಿನದಿಂದ ದಿನಕ್ಕೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗ್ತಿದೆ. ಇನ್ನು ಪೊಲೀಸರು ಸರಿಯಾದ ರೀತಿ ತನಿಖೆ ಮಾಡ್ತಿಲ್ಲ ಎಂದು ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ಆರೋಪ ಮಾಡಿದವು. ಹೀಗಾಗಿ ಪಶ್ಚಿಮ ವಲಯದ ಐಜಿಪಿ ಡಾ.ಚಂದ್ರಗುಪ್ತ, ಉಡುಪಿಗೆ ಭೇಟಿ ನೀಡಿ, ಪ್ರಕರಣದ ಬಗ್ಗೆ ತನಿಖಾಧಿಕಾರಿ ಮಂಜುನಾಥ್​ಗೌಡ ಬಳಿ ಪ್ರಕರಣದಲ್ಲಿ ಎಲ್ಲ ಬೆಳವಣಿಗೆಗಳ ಬಗ್ಗೆ ವರದಿ ಪಡೆದುಕೊಂಡಿದ್ದಾರೆ.

ಒಂದೆಡೆ ಪೊಲೀಸರು ಕೂಡ ತನಿಖೆ ಮಾಡ್ತಿದ್ದು, ಮತ್ತೊಂದೆಡೆ ಮಹಿಳಾ ಆಯೋಗ ಕಾಲೇಜಿಗೆ ಭೇಟಿ ನೀಡಿ ಇಂಚಿಂಚೂ ಮಾಹಿತಿಯನ್ನು ಕಲೆ ಹಾಕಿದೆ. ಆದ್ರೀಗ ಹಿಂದೂ ಜಾಗರಣ ವೇದಿಕೆ ಖುಷ್ಬೂ ನೇತೃತ್ವದ ತನಿಖೆ ಬಗ್ಗೆ ಅಪಸ್ವರ ಎತ್ತಿದೆ. ಖುಸ್ಬೂ ನೇತೃತ್ವದಲ್ಲಿ ಸರಿಯಾದ ತನಿಖೆ ನಡೆಯಲು ಸಾಧ್ಯವಿಲ್ಲ. ಅವರು ಚಿತ್ರ ನಟಿ, ಬರೆದುಕೊಟ್ಟ ಸ್ಕ್ರಿಪ್ಟ್ ಓದುತ್ತಾರೆ ಅಷ್ಟೇ. ಖುಷ್ಬೂ ನೇತೃತ್ವದಲ್ಲಿ ನಡೆಯುವ ತನಿಖೆಯಿಂದ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿವೆ.

ಉನ್ನತಮಟ್ಟದ ತನಿಖೆಗೆ ಆಗ್ರಹ.. ಬಿಜೆಪಿ ತೀವ್ರ ಪ್ರತಿಭಟನೆ

ಉಡುಪಿ ಕಾಲೇಜಿನ ಪ್ರಕರಣವನ್ನೇ ಮುಂದಿಟ್ಟುಕೊಂಡು ಬೀದಿಗಿಳಿದಿರುವ ಬಿಜೆಪಿ ನಾಯಕರು, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ವಿಡಿಯೋ ಪ್ರಕರಣದಲ್ಲಿ ಕಾಣದ ಕೈಗಳ ಕೈವಾಡವಿದೆ. ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ, ಕಡಿಯಾಳದ ಬಿಜೆಪಿ ಕಚೇರಿಯಿಂದ ಎಸ್​ಪಿ ಕಚೇರಿವರೆಗೂ ಪ್ರತಿಭಟನೆ ನಡೆಸಿದ್ರು. ಈ ವೇಳೆ ಶಾಸಕ ಯಶ್​ಪಾಲ್​ ಸುವರ್ಣ, ಗೃಹಸಚಿವರ ಹೇಳಿಕೆ ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ್ರು. ಇವತ್ತು ಶೌಚಾಯಲದಲ್ಲಿ ಕ್ಯಾಮರಾ ಇಟ್ಟವರು, ನಾಳೆ ಬಾಂಬ್​ ಇಡೋಕೂ ಹಿಂಜರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಒಟ್ಟಾರೆ.. ಉಡುಪಿ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ ಸಾಕಷ್ಟು ವಿವಾದವನ್ನು ಎಬ್ಬಿಸಿದೆ. ಇದೀಗ ಸೂಕ್ತ ರೀತಿಯಲ್ಲಿ ತನಿಖೆ ಪ್ರಕರಣದ ಹಿಂದಿರುವ ಅಸಲಿ ರಹಸ್ಯವನ್ನು ಜನರ ಮುಂದಿಡುವ ಜವಾಬ್ದಾರಿ ಪೊಲೀಸರ ಮೇಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಲೇಜು ಶೌಚಾಲಯದಲ್ಲಿ ಯುವತಿ ವಿಡಿಯೋ ರೆಕಾರ್ಡಿಂಗ್ ಕೇಸ್​ಗೆ ಟ್ವಿಸ್ಟ್​​​; ಏನಿದು ಹೊಸ ಆರೋಪ?

https://newsfirstlive.com/wp-content/uploads/2023/07/Udupi-Police.jpg

Load More