ಶಿರ್ವ ಮೂಲದ 20 ವರ್ಷದ ರಿಯಾನ್ನಾ ಜೀನ್ ಡಿಸೋಜಾ
ಬಿಕಾಂ ಮುಗಿಸಿ MCom ವಿದ್ಯಾಭ್ಯಾಸಕ್ಕೆ ಸಜ್ಜಾಗಿದ್ದ ರಿಯಾನ್ನಾ
ಚಿಕ್ಕ ವಯಸ್ಸಿಗೆ ಯುವತಿ ಬಲಿ ಪಡೆದ ಭಯಾನಕ ಕಾಯಿಲೆ
ಉಡುಪಿ: ಶಿರ್ವ ಮೂಲದ 20 ವರ್ಷದ ರಿಯಾನ್ನಾ ಜೀನ್ ಡಿಸೋಜಾ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಬಿಕಾಂ ಮುಗಿಸಿ ಮಣಿಪಾಲದಲ್ಲಿ ಎಂಕಾಂ ವಿದ್ಯಾಭ್ಯಾಸಕ್ಕೆ ರಿಯಾನ್ನಾ ಸೇರ್ಪಡೆಯಾಗುವುದರಲ್ಲಿದ್ದರು. ಆದರೆ, ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ರಿಯಾನ್ನಾ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ರಿಯಾನ್ನಾ ಜೀನ್ ಡಿಸೋಜಾ ಬೆಂಗಳೂರಲ್ಲಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ತಂದೆ-ತಾಯಿ ಬುದ್ಧಿ ಮಾತು ಹೇಳಿದ್ದಕ್ಕೆ ಮನೆ ಬಿಟ್ಟು ಹೋದ 8ನೇ ತರಗತಿ ವಿದ್ಯಾರ್ಥಿ; ಏನಾಯ್ತು?
ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ರಿಯಾನ್ನಾ ಅವರಿಗೆ ಕಳೆದ ವರ್ಷ ಕ್ಯಾನ್ಸರ್ ರೋಗ ಕಾಣಿಸಿಕೊಂಡಿತ್ತು. ಮಣಿಪಾಲ ಮತ್ತು ಬೆಂಗಳೂರಿನ ಆಸ್ಪತ್ರೆಗಳಲ್ಲಿ ರಿಯಾನ್ನಾ ಅವರು ಚಿಕಿತ್ಸೆ ಪಡೆಯುತ್ತಿದ್ದರು. ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಮಂಚೂಣಿಯಲ್ಲಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿ ರಿಯಾನ್ನಾ ಅವರಾಗಿದ್ದರು. ಅತ್ಯುತ್ತಮ ನೃತ್ಯಪಟುವಾಗಿದ್ದ ರಿಯಾನ್ನಾ ಅವರು ಚಿಕ್ಕ ವಯಸ್ಸಿಗೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿರೋದು ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ