newsfirstkannada.com

ಉಡುಪಿ ಕೊಲೆ ಕೇಸ್​ಗೆ ಮತ್ತೊಂದು ಟ್ವಿಸ್ಟ್​​.. ಈ ಕೃತ್ಯದ ಹಿಂದಿನ ಅಸಲಿ ಉದ್ದೇಶವೇನು..?

Share :

16-11-2023

    ದ್ವೇಷದಿಂದ ಹತ್ಯಾಕಾಂಡ ನಡೆದಿರೋದು ಬೆಳಕಿಗೆ ಬಂದಿದೆ

    ಪೊಲೀಸ್‌ ಕಸ್ಟಡಿಗೆ ಪಡೆದು ಆರೋಪಿ ಪ್ರವೀಣ್​ ವಿಚಾರಣೆ

    ಕೊಲೆ ಮಾಡಿರುವುದು ನಾನೇ ಅಂತ ಒಪ್ಪಿಕೊಂಡ ಪ್ರವೀಣ್

ಉಡುಪಿಯನ್ನೇ ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಏರ್‌ ಇಂಡಿಯಾದಲ್ಲಿ ಕ್ಯಾಬಿನ್‌ ಕ್ರೂ ಆಗಿದ್ದ ವ್ಯಕ್ತಿ ಸದ್ಯ ಆರೋಪಿಯಾಗಿ ಸೆರೆ ಸಿಕ್ಕಿದ್ದಾನೆ. ಅದೇ ಏರ್‌ ಇಂಡಿಯಾದಲ್ಲಿ ಗಗನಸಖಿಯಾಗಿದ್ದ ಅಯ್ನಾಜ್‌ ಮೇಲಿನ ದ್ವೇಷದಿಂದ ಹತ್ಯಾಕಾಂಡ ನಡೆದಿರೋದು ಸದ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ನವೆಂಬರ್​ 12ರ ಭಾನುವಾರ ನಡೆದ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣ ದಿನೇ ದಿನೇ ಕುತೂಹಲ ಕೆರಳಿಸ್ತಿದೆ. ಜಸ್ಟ್​ 15 ನಿಮಿಷಗಳಲ್ಲಿ ತಾಯಿ ಹಾಗೂ ಮಕ್ಕಳನ್ನು ಕೊಂದ ಪಾಪಿ ಅಷ್ಟೇ ವೇಗವಾಗಿ ಎಸ್ಕೇಪ್ ಆಗಿದ್ದ. ಸದ್ಯ ಪೊಲೀಸರ ನಿರಂತರ ಕಾರ್ಯಾಚರಣೆಯಿಂದ ಆರೋಪಿ ಪ್ರವೀಣ್ ಅರುಣ್ ಚೌಗಲೆ ಬೆಳಗಾವಿಯಲ್ಲಿ ಲಾಕ್​ ಆಗಿದ್ದಾನೆ. ಕುಡಚಿಯಲ್ಲಿ ತನ್ನ ಸಂಬಂಧಿಯ ಮನೆಯಲ್ಲಿ ತಂಗಿದ್ದ ಪ್ರವೀಣ್ ಚೌಗಲೆ ಮೊಬೈಲ್ ಸ್ವಿಚ್ ಆನ್ ಮಾಡುತ್ತಿದ್ದಂತೆ ಪೊಲೀಸರಿಗೆ ಲಾಕ್ ಆಗಿದ್ದ. ಈಗಾಗಲೇ ಹಂತಕನನ್ನು ಉಡುಪಿಗೆ ಕರೆತಂದು ವಿಚಾರಣೆ ನಡೆಸಲಾಗಿದೆ.

ಉಡುಪಿಯ ರಹಸ್ಯ ಸ್ಥಳದಲ್ಲಿಟ್ಟು ಆರೋಪಿ ವಿಚಾರಣೆ

ಇಂದು ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಉಡುಪಿಗೆ ಕರೆತಂದ ಪೊಲೀಸರು ನಗರದ ಹೊರವಲಯದ ರಹಸ್ಯ ಸ್ಥಳದಲ್ಲಿಟ್ಟು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಹಂತಕ ಪ್ರವೀಣ್ ಅರುಣ್ ಚೌಗಲೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಅಂತ ಉಡುಪಿ ಎಸ್ಪಿ ಡಾ. ಅರುಣ್ ಹೇಳಿದ್ದಾರೆ. ಕೊಲೆಗೆ ಮೂರ್ನಾಲ್ಕು ಕಾರಣಗಳು ಇರುವ ಸಾಧ್ಯತೆ ಇದೆ. ಅವನ ಉದ್ದೇಶ ಅಯ್ನಾಜ್ ಕೊಲೆ ಮಾಡುವುದಾಗಿತ್ತು. ಆದ್ರೆ ತಪ್ಪಿಸಿಕೊಳ್ಳಲು ಮತ್ತು ಸಾಕ್ಷಿ ನಾಶ ಮಾಡಲು ಇತರರ ಕೊಲೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಆರೋಪಿ ಪ್ರವೀಣ್ ಚೌಗಲೆಗೆ ಮದುವೆಯಾಗಿತ್ತು. ಅಯ್ನಾಜ್ ಮತ್ತು ಪ್ರವೀಣ್ ಚೌಗಲೆ ನಡುವಿನ ಸಂಬಂಧಗಳ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಅಂತ ಎಸ್​ಪಿ ತಿಳಿಸಿದ್ದಾರೆ.

ಹತ್ಯೆಗೆ ಕಾರಣ ಕಲೆ ಹಾಕುತ್ತಿರುವ ಪೊಲೀಸರು
ಪೊಲೀಸ್‌ ಕಸ್ಟಡಿಗೆ ಪಡೆದು ಪ್ರವೀಣ್​ ವಿಚಾರಣೆ

ಅಷ್ಟಕ್ಕೂ ಹತ್ಯೆಗೆ ಕಾರಣವೇನು ಅನ್ನೋದು ಇನ್ನಷ್ಟೇ ಖಾತರಿಯಾಗಬೇಕಿದೆ. ಇದಕ್ಕಾಗಿ ಆರೋಪಿಯನ್ನ ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ. ಉಡುಪಿಯ ಜಿಲ್ಲಾ ನ್ಯಾಯಾಲಯದ ಮುಂದೆ ಪ್ರವೀಣ್‌ನನ್ನ ಹಾಜರುಪಡಿಸಿರುವ ಪೊಲೀಸರು, ವಿಚಾರಣೆಗಾಗಿ ಕಸ್ಟಡಿಗೆ ತಗೊಂಡಿದ್ದಾರೆ. ವಿಚಾರಣೆ ಬಳಿಕವಷ್ಟೇ ಕೃತ್ಯದ ಹಿಂದಿನ ಉದ್ದೇಶವೇನು ಅನ್ನೋದು ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಡುಪಿ ಕೊಲೆ ಕೇಸ್​ಗೆ ಮತ್ತೊಂದು ಟ್ವಿಸ್ಟ್​​.. ಈ ಕೃತ್ಯದ ಹಿಂದಿನ ಅಸಲಿ ಉದ್ದೇಶವೇನು..?

https://newsfirstlive.com/wp-content/uploads/2023/11/Udupi-Murder-2.jpg

Load More