newsfirstkannada.com

ಉಡುಪಿಯಲ್ಲಿ ಲಂಗರು ಹಾಕಿದ್ದ ಬೋಟ್​ನಲ್ಲಿ ಕಾಣಿಸಿಕೊಂಡ ಬೆಂಕಿ, 11 ಬೋಟ್​ಗಳು ಸುಟ್ಟು ಕರಕಲು

Share :

13-11-2023

    ದೀಪಾವಳಿ ಪ್ರಯುಕ್ತ ಪೂಜೆ ನಡೆಯುತ್ತಿದ್ದ ವೇಳೆ ನಡೆದ ಅವಘಡ

    ಬೆಂಕಿಯ ಕೆನ್ನಾಲಿಗೆಗೆ ಮೀನುಗಾರಿಕಾ ಬೋಟುಗಳು ಸುಟ್ಟು ಕರಕಲು

    ಅಗ್ನಿಶಾಮಕ ದಳದವರ ಆಗಮನ, ಮುಂದುವರಿದ ರಕ್ಷಣಾ ಕಾರ್ಯಚರಣೆ

ಉಡುಪಿ: ಲಂಗರು ಹಾಕಿದ್ದ ಬೋಟ್​​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಕ್ಕ ಪಕ್ಕದ ಏಳು ಮೀನುಗಾರಿಕಾ ಬೋಟುಗಳು ಸುಟ್ಟು ಕರಕಲಾದ ಘಟನೆ ಗಂಗೊಳ್ಳಿ ಮೀನುಗಾರಿಕಾ ಬಂದರು ಪರಿಸರದಲ್ಲಿ ನಡೆದಿದೆ. ಶಾರ್ಟ್​ ಸರ್ಕ್ಯೂಟ್​​ನಿಂದ ಬೆಂಕಿ ದುರಂತ ಸಂಭವಿಸಿದೆ.

ಪ್ರಾರಂಭದಲ್ಲಿ ಪೂಜೆ ಸಮಯದಲ್ಲಿ ಪಟಾಕಿ ಸಿಡಿಸಿದ ಕಾರಣ ಬೋಟ್​​ನಲ್ಲಿ ಬೆಂಕಿ ಹಬ್ಬಿರಬಹುದೇ ಎಂಬ ಸಂಶಯ ವ್ಯಕ್ತವಾಗಿತ್ತು. ಆದರೆ ಪೊಲೀಸರೇ, ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಅಗ್ನಿಶಾಮಕ ದಳದವರು ಆಗಮಿಸಿದ್ದು, ರಕ್ಷಣಾ ಕಾರ್ಯಚರಣೆ ಮಾಡುತ್ತಿದ್ದಾರೆ. ಜೊತೆಗೆ ಹೆಚ್ಚುವರಿ ಅಗ್ನಿಶಾಮಕ ವಾಹನ ಕರೆಸಿಕೊಳ್ಳಲು ಮುಂದಾಗಿದ್ದಾರೆ.

ಇನ್ನು ಈ ದುರಂತದಲ್ಲಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದ್ದು, 11 ಬೋಟ್​ಗಳು ಬೆಂಕಿಗೆ ಸುಟ್ಟು ಕರಕಲಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಡುಪಿಯಲ್ಲಿ ಲಂಗರು ಹಾಕಿದ್ದ ಬೋಟ್​ನಲ್ಲಿ ಕಾಣಿಸಿಕೊಂಡ ಬೆಂಕಿ, 11 ಬೋಟ್​ಗಳು ಸುಟ್ಟು ಕರಕಲು

https://newsfirstlive.com/wp-content/uploads/2023/11/Udupi-Fire.jpg

Load More