newsfirstkannada.com

Udupi: ಬಾಡಿಗೆ ರಿಕ್ಷಾ ಮಾಡಿಕೊಂಡು ಬಂದ, ನಾಲ್ವರನ್ನು ಕೊಂದ; ಆಟೋ ಚಾಲಕ ಬಿಚ್ಚಿಟ್ಟ ಆರೋಪಿಯ ಮುಖಚರ್ಯೆ

Share :

12-11-2023

    ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ

    ಬಾಡಿಗೆ ರಿಕ್ಷಾದಲ್ಲಿ ಬಂದ ಖತರ್ನಾಕ್​ ಕೊಲೆಗಾರ

    ಪಕ್ಕಾ ಅಡ್ರೆಸ್​​ ಹೇಳಿದ್ದ, ಬ್ರೌನ್ ಕಲರ್ ಅಂಗಿ ಧರಿಸಿದ್ದ ಆರೋಪಿ

ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ತೆ ಪ್ರಕರಣ ಕಂಡು ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಕೊಲೆ ಆರೋಪಿ ಬಾಡಿಗೆ ರಿಕ್ಷಾದಲ್ಲಿ ಬಂದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ರಿಕ್ಷಾ ಚಾಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಆರೋಪಿ ಸಂತೆಕಟ್ಟೆಯಿಂದ ತೃಪ್ತಿ ನಗರಕ್ಕೆ ಬಾಡಿಗೆ ಮಾಡಿಕೊಂಡು ಬಂದಿದ್ದಾನೆ ಎಂದು ರಿಕ್ಷಾ ಚಾಲಕ ಶ್ಯಾಮ್ ಹೇಳಿದ್ದಾರೆ. ಆರೋಪಿ ಮನೆಯ ವಿಳಾಸವನ್ನು ಸರಿಯಾಗಿಯೇ ತಿಳಿಸಿದ್ದಾನೆ. ದಾರಿ ತಪ್ಪಿದಾಗ ಆರೋಪಿಯೇ ಮನೆಯ ಗುರುತು ಹೇಳಿದ್ದಾನೆ ಎಂದು ಹೇಳಿದ್ದಾರೆ.

ದೃಢಕಾಯದ 45ರ ಆಸುಪಾಸು ವಯಸ್ಸಿನ ವ್ಯಕ್ತಿಯಾಗಿದ್ದು, ಬ್ರೌನ್ ಕಲರ್ ಅಂಗಿ ಧರಿಸಿದ್ದನು. ಬಿಳಿ ಬಣ್ಣದ ಮಾಸ್ಕ್ ಹಾಕಿಕೊಂಡಿದ್ದನು. ಮನೆಯ ಬಿಟ್ಟು ಹೋಗಿ 15 ನಿಮಿಷಕ್ಕೆ ಮತ್ತೆ ಸಂತೆಕಟ್ಟೆ ಸ್ಟ್ಯಾಂಡ್ ಗೆ ಬಂದಿದ್ದಾನೆ. ಗಡಿಬಿಡಿಯಲ್ಲಿ ತನ್ನನ್ನು ಕರೆದುಕೊಂಡು ಹೋಗುವಂತೆ ರಿಕ್ಷಾ ಚಾಲಕರಿಗೆ ಕೇಳಿಕೊಂಡಿದ್ದಾನೆ.

ಇನ್ನು ಆರೋಪಿ ಘಟನಾ ಸ್ಥಳದಿಂದ ದ್ವಿಚಕ್ರ ವಾಹನದಲ್ಲಿ ರಿಕ್ಷಾ ಸ್ಟಾಂಡ್ ತಲುಪಿದ್ದಾನೆ. ಬೆಂಗಳೂರು ಕನ್ನಡ ಮಾತನಾಡುತ್ತಿದ್ದನು. ಮನೆಯವರ ಪರಿಚಯದವನಿಂದಲೇ ಕೃತ್ಯ ನಡೆದಿರುವ ಸಾಧ್ಯತೆ ಎಂದು ರಿಕ್ಷಾ ಚಾಲಕರಿಗೆ ಶ್ಯಾಮ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Udupi: ಬಾಡಿಗೆ ರಿಕ್ಷಾ ಮಾಡಿಕೊಂಡು ಬಂದ, ನಾಲ್ವರನ್ನು ಕೊಂದ; ಆಟೋ ಚಾಲಕ ಬಿಚ್ಚಿಟ್ಟ ಆರೋಪಿಯ ಮುಖಚರ್ಯೆ

https://newsfirstlive.com/wp-content/uploads/2023/11/Sham.jpg

Load More