ಬಾಯ್ ಫ್ರೆಂಡ್ ಜೊತೆ ಗಂಡನ ಕೊಲೆಗೆ 5 ತಿಂಗಳ ಹಿಂದೆ ಮಾಸ್ಟರ್ ಪ್ಲಾನ್!
ಬಾಲಕೃಷ್ಣ ಊಟದಲ್ಲಿ ಪ್ರತಿ ನಿತ್ಯ ಸ್ವಲ್ಪ, ಸ್ವಲ್ಪ ಪೌಡರ್ ಬೆರಸುತ್ತಿದ್ದ ಹೆಂಡತಿ
ಶಾಲಾ-ಕಾಲೇಜುಗಳ ಲ್ಯಾಬ್‌ನಲ್ಲಿ ಪ್ರಯೋಗ ಮಾಡುವ ಕೆಮಿಕಲ್ ಖರೀದಿ
ಉಡುಪಿ: ಪ್ರಿಯಕರನ ಜೊತೆ ಸೇರಿದ ಹೆಂಡತಿ, ಗಂಡನನ್ನು ಕೊ*ಲೆ ಮಾಡಿದ ಕೇಸ್‌ನ ಸ್ಫೋಟಕ ಸತ್ಯಗಳು ಬಯಲಾಗಿದೆ. ಈ ಪ್ರಕರಣ ಎಷ್ಟು ಅಮಾನವೀಯವಾಗಿದೆ ಅಂದ್ರೆ ಬಗೆದಷ್ಟು ರೋಚಕ ರಹಸ್ಯಗಳು ಗೊತ್ತಾಗುತ್ತಿವೆ. ಹೆಂಡತಿಯನ್ನೇ ನಂಬಿ ಪ್ರಾಣ ಕಳೆದುಕೊಂಡ ಬಾಲಕೃಷ್ಣ ಅವರ ಮೇಲೆ ಕನಿಕರ ಹೆಚ್ಚಾದ್ರೆ, ಪಾಯ್ಸನ್ ಪ್ರತಿಮಾ ಮೇಲೆ ಆಕ್ರೋಶವೂ ಹೆಚ್ಚಾಗುತ್ತಿದೆ.
ಬಾಲಕೃಷ್ಣ ಪೂಜಾರಿ ಅವರನ್ನ ಸಾಯಿಸಲು ಹೆಂಡತಿ ಪ್ರತಿಮಾ ಹಾಗೂ ಆಕೆಯ ಬಾಯ್ ಫ್ರೆಂಡ್ ದಿಲೀಪ್ ಹೆಗ್ಡೆ ಕಳೆದ 5 ತಿಂಗಳ ಹಿಂದೆಯೇ ಮಾಸ್ಟರ್ ಪ್ಲಾನ್ ಮಾಡಿದ್ದರು. ಆರೋಪಿ ದಿಲೀಪ್ ಹೆಗ್ಡೆ ಸ್ಲೋ ಪಾಯ್ಸನ್ ಮೂಲಕ ಸಾಯಿಸಲು ಪ್ಲಾನ್ ಮಾಡಿ ಇದರ ಬಗ್ಗೆ ಗೂಗಲ್ ಸರ್ಚ್‌ನಲ್ಲಿ ಹುಡುಕಾಡಿದ್ದ. ಆಗ ಅವನಿಗೆ ಆರ್ಸೆನಿಕ್ ಟ್ರೈಯಾಕ್ಸೈಡ್ ಅನ್ನೋ ವಿಷದ ಬಗ್ಗೆ ಮಾಹಿತಿ ಸಿಕ್ಕಿದೆ.
ಆರ್ಸೆನಿಕ್ ಟ್ರೈಯಾಕ್ರೈಡ್ ಸೇವಿಸಿದ ಮೇಲೆ ಎಷ್ಟು ದಿನದ ಬಳಿಕ ಮನುಷ್ಯ ಸಾಯುತ್ತಾನೆ ಅನ್ನೋ ವಿಚಾರದ ಬಗ್ಗೆ ದಿಲೀಪ್ ಸಾಕಷ್ಟು ರಿಸರ್ಚ್ ನಡೆಸಿದ್ದ. ಕಳೆದ ಜೂನ್ ತಿಂಗಳಲ್ಲಿ ರಮನ್ಸ್ ಲ್ಯಾಬ್‌ನಲ್ಲಿ ಆರ್ಸೆನಿಕ್ ಬಗ್ಗೆ ವಿಚಾರಿಸಿದ್ದಾನೆ.
ಇದನ್ನೂ ಓದಿ: ಪತಿಯನ್ನ ಪತ್ನಿ ಮುಗಿಸಿದ ಕೇಸ್; ಉಡುಪಿಯ ಈ ಲ್ಯಾಬ್ನಿಂದ ವಿಷ ತಂದು ಕೊಟ್ಟಿದ್ದ ಪ್ರಿಯಕರ.. ಬಾಟಲಿ ಎಲ್ಲಿ?
ಏನಿದು ಆರ್ಸೆನಿಕ್? ಎಲ್ಲಿ ಸಿಗುತ್ತೆ?
ಆರ್ಸೆನಿಕ್ ಟ್ರೈಯಾಕ್ರೈಡ್ ಅನ್ನು ಶಾಲಾ-ಕಾಲೇಜುಗಳ ಲ್ಯಾಬ್‌ನಲ್ಲಿ ಪ್ರಯೋಗ ನಡೆಸಲು ಬಳಸುತ್ತಾರೆ. ಈ ಆರ್ಸೆನಿಕ್ ಟ್ರೈಯಾಕ್ಸೈಡ್ ಒಂದು ವಾರದ ಮೊದಲು ಬುಕ್ ಮಾಡಿದರಷ್ಟೇ ಸಿಗುತ್ತದೆ. ಹೀಗಾಗಿ ದಿಲೀಪ್ ಹೆಗ್ಡ್ ಲ್ಯಾಬ್‌ನಲ್ಲಿ ಸಿಗುವ ಆರ್ಸೆನಿಕ್ ಸ್ಲೋ ಪಾಯಿಸನ್ ಪೌಡರ್ ಅನ್ನು ಹದಿನೈದು ದಿನದ ಮೊದಲೇ ಬೇಕು ಎಂದಿದ್ದ. ಆರ್ಸೆನಿಕ್ ಟ್ರೈಯಾಕ್ಸೈಡ್ ಬಾಟಲಿಯ ಫೋಟೋ ತೋರಿಸಿ, ತಾನು ವೈದ್ಯಕೀಯ ವಿದ್ಯಾರ್ಥಿ ಲ್ಯಾಬ್ ಬಳಕೆಗಾಗಿ ಬೇಕು ಎಂದಿದ್ದಾನೆ.
ಉಡುಪಿಯ ರಮನ್ಸ್ ಲ್ಯಾಬ್‌ಗೆ ಕರೆ ಮಾಡಿ ಪೌಡರ್ ಮಾದರಿಯ ಆರ್ಸೆನಿಕ್ ಟ್ರೈಯಾಕ್ಸೈಡ್ 500 ಎಂಜಿ ಪೌಡರ್ ಖರೀದಿ ಮಾಡಿದ್ದ. ಆರ್ಡರ್ ಮಾಡಿ ನೇರ ರಮನ್ಸ್ ಲ್ಯಾಬ್‌ಗೆ ಬಂದು ಹಣ ಪಾವತಿ ಮಾಡಿದ್ದ. ಒಂದು ವಾರದ ಬಳಿಕ ಆರ್ಸೆನಿಕ್ ರಮನ್ಸ್ ಲ್ಯಾಬ್‌ಗೆ ಬರುತ್ತಲೇ ಲ್ಯಾಬ್ ಸಿಬ್ಬಂದಿ ದಿಲೀಪ್‌ಗೆ ಕರೆ ಮಾಡಿದ್ದಾರೆ.
ಆ ಬಳಿಕ ಲ್ಯಾಬ್ ಸಿಬ್ಬಂದಿ ದಿಲೀಪ್ ವಿಳಾಸಕ್ಕೆ ಪಾರ್ಸೆಲ್ ಕಳುಹಿಸಿದ್ದಾರೆ. ಆರೋಪಿ ದಿಲೀಪ್ 500 MG ಪೌಡರ್ ಖರೀದಿ ಮಾಡಿದ್ದ ಆರ್ಸೆನಿಕ್ ಟ್ರೈಯಾಕ್ಸೈಡ್ ಎರಡು ಪ್ರತ್ಯೇಕ ಬಾಟಲಿಗಳಲ್ಲಿ ತುಂಬಿಸಿದ್ದಾನೆ. ಬಾಟಲಿ ಮೇಲಿರುವ ಆರ್ಸೆನಿಕ್ ಲೇಬಲ್ ಕಾಣದಂತೆ ಬೇರೊಂದು ಬಾಟಲಿಗೆ ವರ್ಗಾಯಿಸಿದ್ದ.
ಹೀಗೆ ಬೇರೆ ಬಾಟಲಿಗೆ ತುಂಬಿಸಿದ್ದ ಆರ್ಸೆನಿಕ್ ಪೌಡರ್ ಅನ್ನು ಪಾರ್ಲರ್‌ನಲ್ಲಿದ್ದ ಪ್ರತಿಮಾಳಿಗೆ ನೀಡಿದ್ದಾನೆ. ಆ ಬಳಿಕ ಆಗಸ್ಟ್‌ವರೆಗೆ ಕಾದು ಬಾಲಕೃಷ್ಣ ಅವರಿಗೆ ಸ್ಲೋ ಪಾಯಿಸನ್ ನೀಡಲು ಹೇಳಿದ್ದಾನೆ. ಸ್ಲೋ ಪಾಯಿಸನ್ ಪೌಡರ್ ತೆಗೆದುಕೊಂಡಿದ್ದ ಪ್ರತಿಮಾ, ಗಣೇಶೋತ್ಸವದ ಸಮಯದಲ್ಲಿ ಊಟಕ್ಕೆ ಬೆರೆಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಉಡುಪಿಯಲ್ಲಿ ಪತಿಗೆ ಪಾಯ್ಸನ್ ಇಟ್ಟ ಪತ್ನಿ ಕೇಸ್‌ಗೆ ಹೊಸ ಟ್ವಿಸ್ಟ್.. ಪೊಲೀಸರು ಆ ಒಂದು ‘ವಿಷ‘ಯದ ಹಿಂದೆ ಬಿದ್ದಿದ್ದು ಏಕೆ?
ಬಾಲಕೃಷ್ಣ ಊಟದಲ್ಲಿ ಪ್ರತಿಮಾ ಪ್ರತಿ ನಿತ್ಯ ಸ್ವಲ್ಪ, ಸ್ವಲ್ಪ ಪೌಡರ್ ಬೆರೆಸುತ್ತಾ ಬಂದಿದ್ದಾರೆ. ದಿನ ಕಳೆದಂತೆ ಬಾಲಕೃಷ್ಣ ಅವರು ಮಾನಸಿಕ ಹಾಗೂ ದೈಹಿಕ ಕ್ಷಮತೆ ಕಳೆದುಕೊಳ್ಳುತ್ತಿದ್ದರು. ಆಗಸ್ಟ್ ತಿಂಗಳಲ್ಲಿ ಇವರಿಬ್ಬರ ಅಕ್ರಮ ಸಂಬಂಧದ ವಿಚಾರ ಪೊಲೀಸ್ ಠಾಣೆಗೂ ಹೋಗಿತ್ತು. ಆ ಬಳಿಕ ಅದೇ ಸಿಟ್ಟಲ್ಲಿ ಪ್ರತಿಮಾ ಊಟದಲ್ಲಿ ಆರ್ಸೆನಿಕ್ ಪ್ರಮಾಣ ಹೆಚ್ಚಿಸಿದ್ದಾರೆ. ಹೀಗೆ ದಿನೇ ದಿನೇ ಆರೋಗ್ಯ ಹದಗೆಡುತ್ತಲೇ ಬಾಲಕೃಷ್ಣ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲೂ ಸಾವಿನಿಂದ ಪಾರಾಗಿದ್ದು ಕೊನೆಗೆ ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆ ಇಬ್ಬರು ಸೇರಿ ಬಾಲಕೃಷ್ಣ ಅವರನ್ನು ಉಸಿರುಗಟ್ಟಿಸಿ ಸಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ