newsfirstkannada.com

Udupi Murder: ಪ್ರೀತಿಗಾಗಿ ಬಿತ್ತಾ 4 ಪ್ರಾಣ? ಹಂತಕ ಸಿಕ್ಕಿಬಿದ್ದದ್ದು ಹೇಗೆ? ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು

Share :

15-11-2023

    ಬೆಳಗಾವಿಯ ಕುಡಚಿಯಲ್ಲಿ ಅಡಗಿ ಕುಳಿತ್ತಿದ್ದ ಹಂತಕ

    ಉಡುಪಿ ನ್ಯಾಯಾಲಯದ ಬಳಿ ಹೆಚ್ಚಿನ ಪೊಲೀಸ್ ಭದ್ರತೆ

    ಅಯ್ನಾಸ್​ ಮತ್ತು ಆರೋಪಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು

ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಸಂಬಂಧಿಸಿ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಕುಡಚಿಯ ಸಂಬಂಧಿಕರ ಮನೆಯಲ್ಲಿ ಪ್ರವೀಣ್ ಅರುಣ್ ಚೌಗಲೆಯನ್ನು ತಲೆಮರೆಸಿಕೊಂಡಿದ್ದನು. ಆತನ ಮೊಬೈಲ್​ ಸ್ವಿಚ್​ ಆನ್​ ಆದಂತೆ ಎಚ್ಚೆತ್ತುಕೊಂಡ ಪೊಲೀಸರು ಕೂಡಲೇ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನ ಪೊಲೀಸರು ಮಧ್ಯಾಹ್ನದ ವೇಳೆಗೆ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಹಾಜರು ಹಿನ್ನೆಲೆ ನ್ಯಾಯಾಲಯದ ಬಳಿ ಹೆಚ್ಚಿನ ಪೊಲೀಸ್ ಭದ್ರತೆಗೆ ಸಿದ್ಧತೆ ಮಾಡಲಾಗಿದೆ. ಉಡುಪಿ ಡಿವೈಎಸ್ ಪಿ ದಿನಕರ ನೇತೃತ್ವದ ತಂಡ ನ್ಯಾಯಾಲಯದ ಮುಂದೆ ಹೆಚ್ಚಿನ ಭದ್ರತೆ ಗೆ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿದೆ. 25 ಎಎಸೈ, 5 ಪಿಎಸೈ, 3 ಇನ್ಸ್ಪೆಕ್ಟರ್, 150 ಕಾನ್ಸಸ್ಟೇಬಲ್ , 6 ಡಿಎಆರ್ ತುಕಡಿ, 3 ಕೆಎಸ್ ಆರ್ ಪಿ ನೇಮಿಸುವುದರ ಜೊತೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದೆ.

ಆರೋಪಿ ಪ್ರವೀಣ್ ಅರುಣ್ ಚೌಗಲೆ
ಆರೋಪಿ ಪ್ರವೀಣ್ ಅರುಣ್ ಚೌಗಲೆ

ಇದು ಪ್ರೀತಿಯ ಸೇಡು?

ಅಯ್ನಾಸ್​ ಮತ್ತು ಪ್ರವೀಣ್ ಚೌಗಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಅಯ್ನಾಜ್ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿದ್ದಳು. ಪ್ರವೀಣ್ ಚೌಗಲೆ ಏರ್ ಇಂಡಿಯಾದಲ್ಲಿ ಕ್ಯಾಬಿನ್ ಕ್ರೂ ಆಗಿದ್ದನು. ಪರಸ್ಪರ ದ್ವೇಷ ಅಥವಾ ಏಕಮುಖ ಪ್ರೀತಿಯಿಂದ ಆರೋಪಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಂಬಂಧಿಯ ಮನೆಯಲ್ಲಿದ್ದ ಆರೋಪಿ

ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಉಡುಪಿ, ಬೆಳಗಾವಿ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿ ಮೊಬೈಲ್ ಫೋನ್ ಸ್ವಿಚ್ ಆನ್ ಮಾಡುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿ ಹಿಡಿದಿದ್ದಾರೆ. ಆರೋಪಿ ಬೆಳಗಾವಿಯ ತನ್ನ ಸಂಬಂಧಿಯ ಮನೆಯಲ್ಲಿ ತಂಗಿದ್ದನು ಎಂದು ಬಂಧನದ ಬಳಿಕ ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Udupi Murder: ಪ್ರೀತಿಗಾಗಿ ಬಿತ್ತಾ 4 ಪ್ರಾಣ? ಹಂತಕ ಸಿಕ್ಕಿಬಿದ್ದದ್ದು ಹೇಗೆ? ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು

https://newsfirstlive.com/wp-content/uploads/2023/11/Udupi-Murder-case-1.jpg

Load More