ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ
ಮನೆಗೆ ನುಗ್ಗಿ ಕುಟುಂಬದವರ ಜೊತೆ ಆರೋಪಿ ಮಾತಿನ ಚಕಮಕಿ
ಮೊದಲು ತಾಯಿ ಹಸೀನಾ, ಮಕ್ಕಳು ಅಫ್ನಾನ್, ಆಯ್ನಾಜ್ಗೆ ಇರಿತ
ನಿನ್ನೆ ಭಾನುವಾರ.. ವಾರದ ರಜೆ ಜೊತೆಗೆ ದೀಪಾವಳಿ ಹಬ್ಬದ ಸಂಭ್ರಮ. ಉಡುಪಿಯ ಜನರು ಆಗಷ್ಟೆ ನಿದ್ದೆಯಿಂದ ಎದ್ದಿದ್ರು. ಇನ್ನೂ ನಿದ್ದೆಗಣ್ಣಲ್ಲಿ ಇರಬೇಕಾದ್ರೆ ಅದೊಂದು ಸುದ್ದಿ ಬರಸಿಡಿಲಿನಂತೆ ಬಂದಪ್ಪಳಿಸಿತ್ತು. ಸುತ್ತಮುತ್ತಲಿನ ಮಂದಿಯನ್ನ ತಲ್ಲಣಗೊಳಿಸಿತ್ತು.
ಮಕ್ಕಳು ಅಂತಾನೂ ನೋಡದೇ ಚೂರಿಯಿಂದ ಚುಚ್ಚಿ ಕೊಲೆ
ಒಬ್ಬರಲ್ಲ ಇಬ್ಬರಲ್ಲ.. ಬರೋಬ್ಬರಿ ನಾಲ್ಕು ಜನರನ್ನು ಪಾಪಿಯೊಬ್ಬ ಬರ್ಬರವಾಗಿ ಹತ್ಯೆಗೈದಿದ್ದಾನೆ. ದುರಂತ ಅಂದ್ರೆ ಮಕ್ಕಳು ಅಂತಾನೂ ನೋಡದೇ ನಿರ್ದಯವಾಗಿ ಚುಚ್ಚಿ ಚುಚ್ಚಿ ಕೊಲೆಗೈದಿದ್ದಾನೆ. ಮಲ್ಪೆ ಠಾಣಾ ವ್ಯಾಪ್ತಿಯ ನೇಜಾರು ಸಮೀಪದ ತೃಪ್ತಿ ನಗರದಲ್ಲಿ ತಾಯಿ ಹಸೀನಾ ಮತ್ತು ಮಕ್ಕಳಾದ ಅಫ್ನಾನ್, ಐನಾಜ್, ಆಸೀಂರನ್ನ ಕಗ್ಗೊಲೆ ಮಾಡಿ ಹಂತಕ ಎಸ್ಕೇಪ್ ಆಗಿದ್ದಾನೆ. ಹಂತಕ ಪರಾರಿಯಾಗ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮನೆಯವರ ಚೀರಾಟ ಕೇಳಿ ಹೊರ ಬಂದ ಪಕ್ಕದ ಮನೆ ಯುವತಿ
ದುಷ್ಕರ್ಮಿಯೊಬ್ಬ ಏಕಾಏಕಿ ಮನೆಗೆ ನುಗ್ಗಿದ್ದು ಮೊದಲು ಕುಟುಂಬದವರ ಜೊತೆ ಮಾತಿನ ಚಕಮಕಿ ನಡೆಸಿದ್ದಾನೆ. ನಂತರ ಮಾತುಕತೆ ತಾರಕಕ್ಕೇರಿ ಮೊದಲು ತಾಯಿ ಹಸೀನಾಗೆ ಚೂರಿಯಿಂದ ಇರಿದು ನಂತರ ಮಕ್ಕಳಾದ ಅಫ್ನಾನ್, ಐನಾಜ್ಗೆ ಇರಿದಿದ್ದಾನೆ. ಮನೆಯವರ ಚೀರಾಟದ ಸದ್ದು ಕೇಳಿ ಆಟವಾಡುತ್ತಿದ್ದ ಆಸಿಂ ಒಳ ಬರುತ್ತಿದ್ದಂತೆ ಅವನಿಗೂ ಇರಿದು ಹತ್ಯೆ ಮಾಡಿದ್ದಾನೆ. ಈ ವೇಳೆ ಪಕ್ಕದ ಮನೆಯ ಯುವತಿಯೊಬ್ಬಳು ಚೀರಾಟದ ಸದ್ದು ಕೇಳಿ ಹೊರ ಬಂದಿದ್ದಾಳೆ. ಆಗ ಆಕೆಯನ್ನೂ ಬೆದರಿಸಿ ಸ್ಥಳದಿಂದ ಹಂತಕ ಎಸ್ಕೇಪ್ ಆಗಿದ್ದಾನೆ. ಕೊಲೆಯಾದ ಹಸೀನಾ ಪತಿ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇನ್ನು ಮನೆಯೊಳಗಿದ್ದ ಹಸೀನಾಳ ಅತ್ತೆಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಿಚಯಸ್ಥರಿಂದಲೇ ನಾಲ್ವರ ಹತ್ಯೆ ಶಂಕೆ!
ಆರೋಪಿಯು ಆಟೋ ಏರಿ ಸ್ಥಳಕ್ಕೆ ಬಂದಿರೋದು ತನಿಖೆ ವೇಳೆ ಗೊತ್ತಾಗಿದೆ. ಶ್ಯಾಮ್ ಎಂಬುವವರ ಆಟೋ ಹಿಡಿದು ಆತ ಸ್ಥಳಕ್ಕೆ ಬಂದಿದ್ದ, ನಡುವೆ ದಾರಿ ತಪ್ಪಿದಾಗ ಆರೋಪಿಯೇ ಮನೆಯ ಗುರುತು ಹೇಳಿದ್ದನಂತೆ. ಹೀಗಾಗಿ ಹಂತಕ ವ್ಯಕ್ತಿ ಯಾರೋ ಪರಿಚಯಸ್ಥನೇ ಇರಬೇಕು ಅನ್ನೋದು ಆಟೋ ಚಾಲಕ ಶ್ಯಾಮ್ ಊಹೆ.
‘ಫಾಸ್ಟ್ ಹೋಗಿ ಅಂದ್ರು’
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಭೇಟಿ ನೀಡಿ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಮೆಟಲ್ ಡಿಟೆಕ್ಟರ್ ಮೂಲಕ ಮನೆ ಸುತ್ತಲೂ ಹತ್ಯೆಗೆ ಬಳಸಿದ ವಸ್ತುಗಾಗಿ ಹುಡುಕಾಡಿದ್ದಾರೆ. ಇನ್ನು ಸ್ಥಳಕ್ಕೆ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಆರೋಪಿಯನ್ನ ಶೀಘ್ರವಾಗಿ ಬಂಧಿಸಲು ಸೂಚನೆ ಕೊಟ್ಟಿದ್ದಾರೆ.
ಒಟ್ಟಾರೆ ಆರೋಪಿಯು ಇಷ್ಟು ಬರ್ಬರವಾಗಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಲು ಕಾರಣವೇನು ಅನ್ನೋದನ್ನ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಹೀಗೆ ಮಕ್ಕಳು ಅಂತಾನೂ ನೋಡದೇ ಬರ್ಬರವಾಗಿ ಹತ್ಯೆ ಮಾಡುವುದರ ಹಿಂದೆ ವೈಯಕ್ತಿಕ ದ್ವೇಷ ಇರಬೇಕೆಂದು ಪ್ರಾಥಮಿಕ ಹಂತದಲ್ಲಿ ಗೊತ್ತಾಗಿದೆ. ಸದ್ಯ ಪೊಲೀಸರು ಆರೋಪಿನ್ನು ಹೆಡೆಮುರಿಕಟ್ಟಿ ಕೊಲೆಗೆ ನೈಜ ಕಾರಣವನ್ನು ಪತ್ತೆಹಚ್ಚಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ