ಆರೋಪಿ ಪ್ರವೀಣ್ ಚೌಗಲೆ ಕೇರ್ ಆಫ್ ಅಡ್ರೆಸ್ ಮಂಗಳೂರು!
ಒಂದೇ ಸಂಸ್ಥೆಯಲ್ಲಿ ಅಯ್ನಾಝ್, ಪ್ರವೀಣ್ ಜೊತೆಯಾಗಿ ಕೆಲಸ
ಕಳೆದ 16 ವರ್ಷದಿಂದ ಇದ್ದೇನೆ. ಬಿಜೈ ಸಮೀಪ ಫ್ಲ್ಯಾಟ್‌ನಲ್ಲಿದ್ದೇನೆ
ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗಲೆ ಕುರಿತ ಮತ್ತಷ್ಟು ಸ್ಫೋಟಕ ಸಂಗತಿಗಳು ಬಯಲಾಗಿದೆ. ಸಿಸಿಟಿವಿ ಕೊಟ್ಟ ಸುಳಿವಿನಿಂದ ಉಡುಪಿ ಪೊಲೀಸರು ಆರೋಪಿಯನ್ನ ಬಂಧಿಸಿ ಕೈಗೆ ಕೋಳ ತೊಡಿಸಿದ್ದಾರೆ. ಇದೀಗ ಖಾಕಿ ಪಡೆಯ ವಿಚಾರಣೆಯಲ್ಲಿ ಈತನ ಕೇರ್ ಆಫ್ ಅಡ್ರೆಸ್ ಮಂಗಳೂರಾಗಿತ್ತು ಅನ್ನೋ ಅಂಶ ಗೊತ್ತಾಗಿದೆ.
ಉಡುಪಿಯ ಅಯ್ನಾಯ್ ಹಾಗೂ ಆರೋಪಿ ಪ್ರವೀಣ್ ಏರ್ ಇಂಡಿಯಾ ವಿಮಾನದಲ್ಲಿ ಸಹೋದ್ಯೋಗಿಗಳಾಗಿದ್ದರು. ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಯ್‌ಗೂ ಕ್ಯಾಬಿನ್ ಕ್ರ್ಯೂ ಆಗಿದ್ದ ಪ್ರವೀಣ್‌ಗೂ ಪರಿಚಯವಿತ್ತು. ಒಂದೇ ಸಂಸ್ಥೆಯಲ್ಲಿ ಅಯ್ನಾಝ್ ಹಾಗೂ ಪ್ರವೀಣ್ ಜೊತೆಯಾಗಿ ಕೆಲಸ ಮಾಡುತ್ತಿದ್ದು ಇದೀಗ ಅದಕ್ಕೆ ಸಂಬಂಧಪಟ್ಟ ವಿಡಿಯೋ ಸಾಕ್ಷಿಗಳು ಪೊಲೀಸರಿಗೆ ಲಭ್ಯವಾಗಿದೆ.
ವಿಮಾನದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಝ್‌ಗೆ ವಿಮಾನದಲ್ಲಿ ಸುರಕ್ಷತಾ ನಿಯಮ ಹೇಳಿಕೊಡ್ತಿದ್ದವನೇ ಕಂಟಕವಾಗಿದ್ದಾನೆ. ಏರ್ ಇಂಡಿಯಾದ ಉದ್ಯೋಗಿಯಾಗಿದ್ದ ಆರೋಪಿ ಪ್ರವೀಣ್, ವಿಮಾನದಲ್ಲಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಹಾಗೂ ಇನ್ನಿತರ ಸುರಕ್ಷತೆ ನಿಯಮ ಹೇಳಿಕೊಡುತ್ತಿದ್ದ. ಕೊನೆಗೆ ಅಯ್ನಾಝ್ ಮೇಲಿದ್ದ ಮೋಹ ದ್ವೇಷಕ್ಕೆ ತಿರುಗಿ ಪ್ರವೀಣ್ ಹತ್ಯೆ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Udupi Murder: ಗಗನಸಖಿ ಮೇಲೆ ವಿವಾಹಿತನ ಮೋಹ.. ಹತ್ಯೆಗೂ ಮೊದಲೇ ಮನೆಗೆ ಬಂದು ಹೋಗಿದ್ದ ಕೊಲೆಗಾರ?
ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರವೀಣ್ ಅರುಣ್ ಚೌಗುಲೆಯನ್ನು ಉಡುಪಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ಹಾಲ್‌ನಲ್ಲಿ ನ್ಯಾಯಾಧೀಶರು ಆರೋಪಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಕನ್ನಡದಲ್ಲೇ ಆರೋಪಿ ಪ್ರವೀಣ್ ಚೌಗುಲೆ ಉತ್ತರಿಸಿದ್ದಾರೆ. ಇದರ ವಿವರ ಇಲ್ಲಿದೆ ನೋಡಿ.
ನ್ಯಾಯಾಧೀಶರು- ನಿಮ್ಮನ್ನು ಯಾವಾಗ ಅರೆಸ್ಟ್ ಮಾಡಿದ್ರು?
ಆರೋಪಿ- ಮಂಗಳವಾರ ಸಂಜೆ 6 ಗಂಟೆಗೆ ಸರ್
ನ್ಯಾಯಾಧೀಶರು- ನಿಮ್ಮ ಊರು ಯಾವುದು
ಆರೋಪಿ- ಮಹಾರಾಷ್ಟ್ರ, ಸಾಂಗ್ಲಿಯಲ್ಲಿ
ನ್ಯಾಯಾಧೀಶರು- ನೀವು ಕೊಟ್ಟ ಅಡ್ರೆಸ್‌ನಲ್ಲಿ ಮಂಗಳೂರು ಇದ್ಯಲ್ಲಾ?
ಆರೋಪಿ- ಮಂಗಳೂರಲ್ಲಿ ಕಳೆದ 16 ವರ್ಷದಿಂದ ಇದ್ದೇನೆ. ಬಿಜೈ ಸಮೀಪ ಫ್ಲ್ಯಾಟ್‌ನಲ್ಲಿದ್ದೇನೆ
ನ್ಯಾಯಾಧೀಶರ ಪ್ರಶ್ನೆಗೆ ಹೀಗೆ ಉತ್ತರಿಸಿರುವ ಆರೋಪಿ ಪ್ರವೀಣ್, ತಾನು ಮಹಾರಾಷ್ಟ್ರದ ಸಾಂಗ್ಲಿಯವನಾದ್ರೂ 16 ವರ್ಷದಿಂದ ಮಂಗಳೂರಲ್ಲೇ ನೆಲೆಸಿರುವುದಾಗಿ ಹೇಳಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ