ನೇಜಾರಿನಲ್ಲಿ ನಡೆದ ಭೀಕರ ಹತ್ಯೆ ಪ್ರಕರಣ
ಒಂದೇ ಕುಟುಂಬದ ನಾಲ್ವರ ಕೊಂದು ಕಾಲ್ಕಿತ್ತ ಆರೋಪಿ
ಪ್ರೊಫೆಷನಲ್ ಕಿಲ್ಲರ್ ನಡೆಸಿರುವ ಕೊಲೆ ಎಂಬ ಶಂಕೆ
ಉಡುಪಿ: ನೇಜಾರಿನಲ್ಲಿ ನಡೆದ ಭೀಕರ ಹತ್ಯೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ನಾಲ್ವರನ್ನು ಸ್ಥಳದಲ್ಲೇ ಕೊಂದಿದ್ದ ದುಷ್ಕರ್ಮಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದಕ್ಕಾಗಿ 4 ತಂಡಗಳನ್ನು ರಚಿಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಪ್ರೊಫೆಷನಲ್ ಕಿಲ್ಲರ್?
ಈ ಕೊಲೆಯನ್ನ ಪ್ರೊಫೆಷನಲ್ ಕಿಲ್ಲರ್ ನಡೆಸಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಆರೋಪಿ ಎಲ್ಲರ ಕಣ್ಣಿಗೆ ಮಣ್ಣೆರಚಲು ಪದೇ ಪದೇ ವಾಹನ ಹಾಗೂ ಅಂಗಿ ಬದಲಾಯಿಸಿರುವುದು ಸಹ ಕಂಡಿದೆ.
ಅಂಗಿ ಬದಲಾಯಿಸುತ್ತಿದ್ದ ಕಿರಾತಕ
ಕೊಲೆ ಮಾಡಿದ ಬಳಿಕ ಆರೋಪಿ ರಕ್ತ ಸಿಕ್ತ ಅಂಗಿಯನ್ನು ಬದಲಾಯಿಸಿ ಬ್ರೌನ್ ಕಲರ್ ಅಂಗಿ ಧರಿಸಿದ್ದಾನೆ. ದ್ವಿಚಕ್ರ ವಾಹನದಲ್ಲೂ ಸಹ ಡ್ರಾಪ್ ಪಡೆದಿದ್ದಾನೆ. ಸಂತೆಕಟ್ಟೆ ರಿಕ್ಷಾ ನಿಲ್ದಾಣದಿಂದ ರಿಕ್ಷಾ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ್ದಾನೆ. ಕರಾವಳಿ ಬೈಪಾಸ್ ನಿಂದ ಮತ್ತೆ ನಡೆದು ಹೋಗಿದ್ದಾನೆ. ಆರೋಪಿ ಅಂಬಲಪಾಡಿ ಬಳಿ ಮತ್ತೆ ದ್ವಿಚಕ್ರ ವಾಹನದಲ್ಲಿ ಡ್ರಾಪ್ ಪಡೆದಿರೋದು ಬೆಳಕಿಗೆ ಬಂದಿದೆ. ಸದ್ಯ ಚಾಣಾಕ್ಷ ಕೊಲೆಗಡುಕನ ಬೆನ್ನು ಹತ್ತಿದ್ದಾರೆ ಪೊಲೀಸರು.
ಈ ಭೀಕರ ಕೊಲೆಗೆ ಕಾರಣವೇನು?
ನೂರ್ ಮಹಮದ್ ಮತ್ತು ಹಸೀನಾ ದಂಪತಿ ಕುಟುಂಬ ಸುಶಿಕ್ಷಿತ ಮತ್ತು ಆರ್ಥಿಕವಾಗಿ ಸದೃಢರಾಗಿದ್ದರು. ಹಸೀನಾ ಪತಿ ಮೂರು ದಶಕದಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಹಿರಿಯ ಪುತ್ರ ಇಂಡಿಗೋದಲ್ಲಿ ಉದ್ಯೋಗ ಮಾಡುತ್ತಿದ್ದನು. ಹಿರಿಯ ಪುತ್ರಿ ಅಫ್ನಾನ್ ಲಾಜಿಸ್ಟಿಕ್ಸ್ ನಲ್ಲಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮಾಡುತ್ತಿದ್ದಳು. ಇನ್ನು ಎರಡನೇ ಪುತ್ರಿ ಅಯ್ನಾಜ್ ಕನಸಿನ ಬೆನ್ನು ಹತ್ತಿ ತನ್ನ ಇಚ್ಛೆಯಂತೆ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿದ್ದಳು.
ಆರ್ಥಿಕ ವ್ಯವಹಾರವೇ ಕಾರಣ?
ಈ ಕೊಲೆಗೆ ಆರ್ಥಿಕ ವ್ಯವಹಾರ ಕೊಲೆಗೆ ಕಾರಣವಾಯಿತೇ ಎಂಬ ಅನುಮಾನ ಎಲ್ಲರನ್ನು ಕಾಡಿದೆ. ಮಾತ್ರವಲ್ಲದೆ, ಮೃತ ಹಸೀನಾ ಆರ್ಥಿಕ ಹೂಡಿಕೆ ಮಾಡಿದ್ದರ ಬಗ್ಗೆ ಗುಮಾನಿಯಿದೆ. ಹಣ ವ್ಯವಹಾರ ವಿಚಾರದಲ್ಲಿ ಕೊಲೆ ನಡೆದಿರುವ ಸಾಧ್ಯತೆ ಎಂಬ ಶಂಕೆ ವ್ಯಕ್ತವಾಗಿದೆ.
ಹಸೀನಾಳನ್ನೇ ಟಾರ್ಗೆಟ್ ಮಾಡಿದ್ದ ಆರೋಪಿ?
ಆರೋಪಿಯ ಪ್ರಮುಖ ಟಾರ್ಗೆಟ್ ಹಸೀನಾ ಆಗಿದ್ದೀರ ಬೇಕೆಂಬ ಸಂಶಯ ಕೂಡ ಮೂಡಿದ್ದು, ತಡೆಯಲು ಬಂದ ಮಕ್ಕಳು ಬಲಿಪಶು ಆಗಿರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಮೃತರಲ್ಲಿ ಹಿರಿಯ ಮಗಳು ಅಫ್ನಾನ್ ಗೆ ಗಂಭೀರ ಗಾಯವಾಗಿದ್ದು, ಅಫ್ನಾನ್ನನನ್ನು ಆರೋಪಿ ಭೀಕರವಾಗಿ ಇರಿದಿದ್ದಾನೆ. ಮತ್ತೊಂದೆಡೆ ಅಫ್ನಾನ್ ವಿಚಾರವಾಗಿ ಪೂರ್ವ ದ್ವೇಷದಿಂದ ಕೃತ್ಯ ನಡೆದಿದೆಯೇ ಎಂಬ ಬಗ್ಗೆಯೂ ಪೊಲಿಸರು ತನಿಖೆ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ