newsfirstkannada.com

ಕೆಸರು ಗದ್ದೆಯಲ್ಲಿ ಯುವಕರೇ ನಾಚುವಂತೆ ಡ್ಯಾನ್ಸ್​ ಮಾಡಿದ ಅಜ್ಜಿ; ವ್ಹಾವ್ ಎಂದ ನೆಟ್ಟಿಗರು

Share :

09-08-2023

    ಈ ವಯಸ್ಸಲ್ಲೂ ಅಜ್ಜಿ ಹೇಗೆ ಡ್ಯಾನ್ಸ್​ ಮಾಡ್ತಾರೆ ನೋಡಿ

    ಇಂತಹ ಇಳಿ ವಯಸ್ಸಿನಲ್ಲಿಯೂ ಅಜ್ಜಿ ಸೂಪರ್​​ ಡ್ಯಾನ್ಸ್​​

    ಅಜ್ಜಿ ಭರ್ಜರಿ ಡ್ಯಾನ್ಸ್​​ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ!

ಉಡುಪಿ: ಇತ್ತೀಚಿನ ದಿನಗಳಲ್ಲಿ ಜನರು ಗ್ರಾಮೀಣ ಕ್ರೀಡೆಗಳನ್ನೇ ಮರೆತು ಹೋಗಿದ್ದಾರೆ. ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರತನಕ ಮೊಬೈಲ್ ಗೀಳು ಹೆಚ್ಚಾಗಿದೆ. ಹೀಗಾಗಿ ಎಲ್ಲರನ್ನು ಗ್ರಾಮೀಣ ಕ್ರೀಡೆಗಳತ್ತ ಆಕರ್ಷಿಸಿ ಉತ್ತೇಜಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸಂಘ ಸಂಸ್ಥೆಗಳು ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಅಜ್ಜಿಯೊಬ್ಬರು ಸಖತ್​​ ಡ್ಯಾನ್ಸ್​​ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಮಳೆಗಾಲದ ಸಮಯದಲ್ಲಿ ಕರಾವಳಿಯಲ್ಲಿ ಕೆಸರುಗದ್ದೆ ಕ್ರೀಡೆಗಳು ಸರ್ವೆಸಾಮಾನ್ಯ. ಮಕ್ಕಳು ಮತ್ತು ಯುವಜನಾಂಗಕ್ಕೆ ಕೆಸರುಗದ್ದೆ, ಕೃಷಿ ಮತ್ತು ಮಣ್ಣಿನ ಮಹತ್ವವನ್ನು ತಿಳಿಸುವುದೇ ಇದರ ಹಿಂದಿರುವ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಇಂತಹದ್ದೇ ಕೆಸರುಗದ್ದೆ ಕ್ರೀಡಾಕೂಟ ನಡೆದಾಗ ಅಜ್ಜಿಯೊಬ್ಬರು ಉಲ್ಲಾಸಭರಿತವಾಗಿ ಸಖತ್​ ಡ್ಯಾನ್ಸ್ ಮಾಡಿದ್ದಾರೆ.

ಇನ್ನು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಉಳಿದವರು ಕಂಡಂತೆ ಚಿತ್ರದ ಹುಲಿ ಹಾಡಿಗೆ ಅಜ್ಜಿ ಸಖತ್​​ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಗದ್ದೆಯಲ್ಲಿ ಯುವತಿಯರೇ ನಾಚುವಂತೆ ಅಜ್ಜಿ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಅಜ್ಜಿಯ ನೃತ್ಯಕ್ಕೆ ಅವರ ಉತ್ಸಾಹ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಸರು ಗದ್ದೆಯಲ್ಲಿ ಯುವಕರೇ ನಾಚುವಂತೆ ಡ್ಯಾನ್ಸ್​ ಮಾಡಿದ ಅಜ್ಜಿ; ವ್ಹಾವ್ ಎಂದ ನೆಟ್ಟಿಗರು

https://newsfirstlive.com/wp-content/uploads/2023/08/udupi-dance.jpg

Load More