newsfirstkannada.com

ವಿಡಿಯೋ ಚಿತ್ರೀಕರಣ ವಿವಾದ ರಾಜಕೀಯ ತಿರುವು.. ಬಿಜೆಪಿ-ಕಾಂಗ್ರೆಸ್​​ ಜಟಾಪಟಿ ಮಧ್ಯೆ ನಟಿ ಖುಷ್ಬು ಎಂಟ್ರಿ.. ಮಂಗಳೂರಿಗೆ ಬಂದು ಹೇಳಿದ್ದೇನು..?

Share :

Published July 27, 2023 at 8:33am

Update July 27, 2023 at 8:34am

    ಕರಾವಳಿಯಲ್ಲಿ ವಿವಾದ ಅಲೆ ಎಬ್ಬಿಸಿದ ವಿಡಿಯೋ ಚಿತ್ರೀಕರಣ

    ಬಿಜೆಪಿಗೆ ಸಿಕ್ತು ಬ್ರಹ್ಮಾಸ್ತ್ರ.. ಕಾಂಗ್ರೆಸ್​​ ಸರ್ಕಾರದ ವಿರುದ್ಧ ಪ್ರಹಾರ

    ತೀರ್ಥಹಳ್ಳಿ ಪ್ರಕರಣ​​ ಪ್ರಸ್ತಾಪಿಸಿ ದಿನೇಶ್ ಗುಂಡೂರಾವ್​​​ ಕ್ಲಾಸ್​​

ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ವಿವಾದ ರಾಜಕೀಯ ತಿರುವು ಪಡೆದಿದೆ. ಪ್ರಕರಣ ಮತ್ತಷ್ಟು ಜಟಿಲಗೊಳ್ಳುತ್ತಾ ಹೋಗುತ್ತಿದೆ. ಪ್ರಕರಣ ತನಿಖೆಗೆ ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದೆ. ಉಡುಪಿಗೆ ಸ್ವತಃ ದಕ್ಷಿಣ ಭಾರತದ ಮಹಿಳಾ ಸದಸ್ಯ ಖುಷ್ಬು ಸುಂದರ್ ಆಗಮಿಸಿ ಮಾಹಿತಿ ಪಡೆದಿದ್ದಾರೆ.

ಉಜ್ವಲ ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ವಿದ್ಯಾ ದೇಗುಲದಲ್ಲಿ ಕಾಮದ ಕಿಂಡಿಯೊಂದು ಕರಾವಳಿಯಲ್ಲಿ ಸುನಾಮಿ ಎಬ್ಬಿಸಿದೆ. ಶೌಚಾಲಯದಲ್ಲಿ ಮೊಬೈಲ್​​​ ಕಣ್ಣಿನಲ್ಲಾದ ಚಿತ್ರೀಕರಣ ರಾಜ್ಯದಲ್ಲಿ ಮತ್ತೊಂದು ರಾಜಕೀಯ ಧರ್ಮಯುದ್ಧಕ್ಕೆ ನಾಂದಿ ಹಾಡಿದೆ. ರಾಜ್ಯ ಸರ್ಕಾರದ ಮೇಲೆ ಕೇಸರಿ ಸೇನೆ ಮುಗಿಬಿದ್ದಿದೆ. ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಕಂಪ್ಲೀಟ್​​​ ರಾಜಕೀಯ ಕೆಸರು ಮೆತ್ತಿಕೊಂಡಿದೆ. ಘಟನೆ ಬಗ್ಗೆ ದನಿ ಎತ್ತಿದ ಯುವತಿ ಮನೆಗೆ ನಡುರಾತ್ರಿ ಪೊಲೀಸ್ರು ಬಾರಿಸಿದ ಡೋರ್​​, ಬಿಜೆಪಿ ಕೈಗೆ ರಾಜಕೀಯ ಢಮರುಗ ಸಿಕ್ಕಂತಾಗಿದೆ.

ಎಲ್ಲವನ್ನೂ ರಾಜಕೀಯ ಕಾಮಾಲೆ ಕಣ್ಣಿಂದ ನೋಡುವ ಇಂದಿನ ವ್ಯವಸ್ಥೆಗೆ ಶೌಚದ ಕಿಂಡಿ ಕೂಡ ರಾಜಕೀಯಕ್ಕೆ ಅನಿವಾರ್ಯ ಆಗಿಸಿದೆ. ಕೃಷ್ಣನೂರು ಉಡುಪಿಯ ಈ ಘಟನೆ, ರಾಷ್ಟ್ರವ್ಯಾಪಿ ಚರ್ಚೆಗೆ ನಾಂದಿ ಹಾಡಿದೆ. ಈವರೆಗೆ ಸಬೂಬು ಹೇಳ್ತಿದ್ದ ಪೊಲೀಸ್ರು, ಈಗ FIR ದಾಖಲಿಸಿ ತನಿಖೆಗೆ ಚಾಲನೆ ಕೊಟ್ಟಿದ್ದಾರೆ.

ವಿಚಾರಣೆ ನಡೆಸಲು ಉಡುಪಿಗೆ ಬಂದ ಖುಷ್ಬು

ಈ ನಡುವೆ ಪ್ರಕರಣಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದೆ. ದಕ್ಷಿಣ ಭಾರತದ ಸದಸ್ಯ ಖುಷ್ಬು ಸುಂದರ್ ಉಡುಪಿಗೆ ಆಗಮಿಸಿ, ಸಮಗ್ರ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಉಡುಪಿ ಎಸ್‌ಪಿ ಅಕ್ಷಯ್ ಮಚ್ಚೀಂದ್ರ ಹಾಕೆ, ಡಿಸಿ ಡಾ.ವಿದ್ಯಾಕುಮಾರಿ, ಎಡಿಸಿ ವೀಣಾರನ್ನು ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಸಂತ್ರಸ್ತೆ ವಿದ್ಯಾರ್ಥಿನಿಯರು, ಕಾಲೇಜಿನ ಆಡಳಿತ ಮಂಡಳಿ ಬಳಿಯೂ ಖುಷ್ಬು ಮಾಹಿತಿ ಸಂಗ್ರಹ ಮಾಡಲಿದ್ದಾರೆ.

‘ಈ ಪ್ರಕರಣ ಇಷ್ಟೊಂದು ವೈರಲ್ ಆಗಲು ಕಾರಣವೇನು? ಇದು ದೊಡ್ಡ ವಿಷಯವಾಗಿ ಬದಲಾಗಿದ್ದೇಕೆ ಅನ್ನೋದರ ಬಗ್ಗೆ ಗಮನ ಹರಿಸಬೇಕು. ಅನೇಕ ಸಂಗತಿಗಳ ತನಿಖೆ ಆಗಬೇಕಾಗಿದೆ. ಪೂರಕ ಸಾಕ್ಷಿಗಳ ಸಂಗ್ರಹ ಮಾಡಬೇಕಾಗಿದೆ. ಯಾರು ಕೂಡ ಇಲ್ಲಿವರೆಗೆ ಸಾಕ್ಷಿಯನ್ನ ನೋಡಿಲ್ಲ. ಬಹಳಷ್ಟು ವಿಷಯಗಳು ನೋಡಬೇಕಿದೆ. ನಾಳೆ ನಾನು ಕಾಲೇಜಿಗೆ ಭೇಟಿಯಾಗಿ ಆಡಳಿತ ಮಂಡಳಿಯ ಜೊತೆ ಮಾತನಾಡಬೇಕಿದೆ. ಆ ಬಳಿಕ ಘಟನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ.
– ಖುಷ್ಬೂ ಸುಂದರ್​, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲ ಕುಂದರ್​ ಕೂಡ ಖುಷ್ಬುರನ್ನ ಭೇಟಿಯಾಗಿ ಕೆಲ ದಾಖಲೆಗಳನ್ನ ನೀಡಿದ್ದಾರೆ. ಮುಂದಿನ ಎರಡು ದಿನ ಉಡುಪಿಯಲ್ಲಿದ್ದು ಸಮಗ್ರ ಮಾಹಿತಿ ಮತ್ತು ದಾಖಲೆಗಳ ಸಂಗ್ರಹ ಮಾಡಲಿದ್ದಾರೆ.

ಉಡುಪಿ ಪ್ರಕರಣದಲ್ಲಿ ಬಿಜೆಪಿ ನಾಯಕರ ರಾಜಕಾರಣ

ಈ ಘಟನೆ ಬಗ್ಗೆ ಸಚಿವ ಗುಂಡೂರಾವ್​ ಟ್ವೀಟ್​ ಮಾಡಿ, ಬಿಜೆಪಿಗೆ ಕ್ಲಾಸ್​ ತಗೊಂಡಿದ್ದಾರೆ.. ಬಿಜೆಪಿಯದ್ದು ರಾಜಕಾರಣ ಅಂತ ಕಿಡಿಕಾರಿದ್ದಾರೆ. ಉಡುಪಿ ವಿಡಿಯೋ ಪ್ರಕರಣವನ್ನ BJP ಉದ್ದೇಶಪೂರ್ವಕ ರಾಜಕೀಯಗೊಳಿಸ್ತಿದೆ. ಈ ಪ್ರಕರಣದಲ್ಲಿ ಯಾವುದೇ ವಿಡಿಯೋ ಹರಿದಾಡಿಲ್ಲ. ಹರಿದಾಡುತ್ತಿರುವ ವಿಡಿಯೋ ಕೂಡ ನಕಲಿ. ಪೊಲೀಸರು ವಿದ್ಯಾರ್ಥಿನಿಯರ ಮೊಬೈಲ್ ರಿಟ್ರೀವ್ ಮಾಡಿದ್ದಾರೆ. ಅಲ್ಲಿ ಯಾವುದೇ ವಿಡಿಯೋಗಳಿಲ್ಲ. ಮತ್ಯಾಕೆ ಈ ರಾದ್ಧಾಂತ? ಬೊಮ್ಮಾಯಿ, ಸೇರಿದಂತೆ ರಾಜ್ಯ BJP ನಾಯಕರು, ಉಡುಪಿ ಪ್ರಕರಣದಲ್ಲಿ ಇಲಿ ಹೋಗಿದನ್ನೇ ಹುಲಿ ಹೋದಂತೆ ಬಿಂಬಿಸ್ತಿದ್ದಾರೆ. ಬೊಮ್ಮಾಯಿ ಅವರಿಗೊಂದು ಪ್ರಶ್ನೆ. ಉಡುಪಿ ಕೇಸ್​​ನಲ್ಲಿ ಇಷ್ಟು ಬಟ್ಟೆ ಹರಿದುಕೊಳ್ತಿರುವ ನೀವು, ಪ್ರತೀಕ್ ಎಂಬ ತೀರ್ಥಹಳ್ಳಿ ABVP ಅಧ್ಯಕ್ಷ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಬಿಟ್ಟಾಗ ಎಲ್ಲಿದ್ದಿರೀ? ಎಂದು ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಒಟ್ಟಾರೆ, ಉಡುಪಿಯ ಈ ಘಟನೆ ಮುಂದಿನ ದಿನಗಳಲ್ಲಿ ಯಾವ ದಿಕ್ಕಿಗೆ ತಿರುಗುತ್ತೋ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಡಿಯೋ ಚಿತ್ರೀಕರಣ ವಿವಾದ ರಾಜಕೀಯ ತಿರುವು.. ಬಿಜೆಪಿ-ಕಾಂಗ್ರೆಸ್​​ ಜಟಾಪಟಿ ಮಧ್ಯೆ ನಟಿ ಖುಷ್ಬು ಎಂಟ್ರಿ.. ಮಂಗಳೂರಿಗೆ ಬಂದು ಹೇಳಿದ್ದೇನು..?

https://newsfirstlive.com/wp-content/uploads/2023/07/UDP_CASE-1.jpg

Load More