newsfirstkannada.com

‘ನೀಟ್​ ಪ್ರಶ್ನೆ ಪತ್ರಿಕೆ ಲೀಕ್​ ಆಗಿರೋದು ನಿಜ; ಮರುಪರೀಕ್ಷೆ ನಡೆಸಿ’ ಎಂದ ಸುಪ್ರೀಂಕೋರ್ಟ್​​!

Share :

Published July 8, 2024 at 4:07pm

Update July 8, 2024 at 4:09pm

    ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರೋ ನೀಟ್ ಪರೀಕ್ಷೆ ಅಕ್ರಮ

    ನೀಟ್ ಪರೀಕ್ಷೆ ಅಕ್ರಮ ಕುರಿತು ಸುಪ್ರೀಂ ಕೋರ್ಟಲ್ಲಿ ವಿಚಾರಣೆ..!

    ಸುಪ್ರೀಂ ಕೋರ್ಟಲ್ಲಿ ನೀಟ್ ಪರೀಕ್ಷೆ ಅಕ್ರಮ ಬಗ್ಗೆ ಚರ್ಚೆಯಾಗಿದ್ದೇನು?

ನವದೆಹಲಿ: ಪದವಿಪೂರ್ವ ವೈದ್ಯಕೀಯ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆ ನೀಟ್​​. ಈ ವರ್ಷ ನಡೆದ ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಇಡೀ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಕೇಸ್​​ ಸುಪ್ರೀಂ ಕೋರ್ಟ್​ನಲ್ಲಿದೆ. ನೀಟ್​​ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಈಗಾಗಲೇ ಕೇಂದ್ರ ಸರ್ಕಾರ ತನ್ನ ನಿಲುವು ಸುಪ್ರೀಂಕೋರ್ಟ್​​ಗೆ ತಿಳಿಸಿದ್ದು, ಪರೀಕ್ಷೆ ರದ್ದುಗೊಳಿಸೋ ಉದ್ದೇಶವಿಲ್ಲ ಎಂದು ಹೇಳಿದೆ. ಇದರ ಬೆನ್ನಲ್ಲೇ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​​ ಮಹತ್ವದ ಸಲಹೆ ನೀಡಿದೆ.

ನೀಟ್​​ ಪರೀಕ್ಷೆ ಅನ್ನೋದು ಬರೋಬ್ಬರಿ 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯ. ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟ. ನೀಟ್​ ಪರೀಕ್ಷೆ ರದ್ದು ಎಂಬುದು ಕೊನೆಯ ಆಯ್ಕೆಯಾಗಬೇಕು. ದೇಶದ ಪ್ರತಿಯೊಂದು ಮಧ್ಯಮ ವರ್ಗದ ಕುಟುಂಬ ನೀಟ್​​, ಜೆಇಇ ಪಾಸ್​ ಮಾಡೋ ಗುರಿ ಹೊಂದಿದೆ. ಹಾಗಾಗಿ ನೀಟ್​ ರದ್ದು ಮಾಡುವುದು ಬಹಳಷ್ಟು ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಮರು ಪರೀಕ್ಷೆಗೆ ಆದೇಶ ಮಾಡುವಾಗ ಎಚ್ಚರ ಇರಲಿ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

ಅಷ್ಟೇ ಅಲ್ಲ ಪ್ರಶ್ನೆ ಪತ್ರಿಕೆ ಲೀಕ್​​ ಯಾರು ಮಾಡಿದ್ದು ಎಂದು ಗುರುತಿಸೋದು ಹೇಗೆ? ಲೀಕ್​ ಆಗಿರೋದು ಪಕ್ಕಾ. ಆದರೆ, ಅದರ ಫಲಾನುಭವಿಗಳು ಯಾರು ಎಂದು ಹೇಗೆ ಗುರುತಿಸುವುದು. ಎಷ್ಟರ ಮಟ್ಟಿಗೆ ಲೀಕ್​ ಆಗಿದೆ ಎಂದು ಗೊತ್ತಾಗಬೇಕು. ಲೀಕ್​ ಮಾಡಿದವರನ್ನು ಪತ್ತೆ ಹಚ್ಚಲು ಸಾಧ್ಯವೇ ಆಗದಿದ್ರೆ ರೀ ಎಕ್ಸಾಮ್​​ ಮಾಡಿ ಎಂದಿದೆ ಸುಪ್ರೀಂ ಕೋರ್ಟ್​.

ಇದನ್ನೂ ಓದಿ: 40ಕ್ಕೂ ಹೆಚ್ಚು ಶಾಲಾ ಮಕ್ಕಳಿದ್ದ ಮಿನಿ ಬಸ್​ ಪಲ್ಟಿ.. ಮಕ್ಕಳ ಸ್ಥಿತಿಗತಿ ಹೇಗಿದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನೀಟ್​ ಪ್ರಶ್ನೆ ಪತ್ರಿಕೆ ಲೀಕ್​ ಆಗಿರೋದು ನಿಜ; ಮರುಪರೀಕ್ಷೆ ನಡೆಸಿ’ ಎಂದ ಸುಪ್ರೀಂಕೋರ್ಟ್​​!

https://newsfirstlive.com/wp-content/uploads/2024/05/Supreme-Court.jpg

Load More