ವಿದೇಶದಲ್ಲಿ ಗುಲಾಬಿ ಬಣ್ಣದ ಈ ಪಾರಿವಾಳ ನೋಡಿದ ಜನರು ಅಚ್ಚರಿ
ಎರಡು ದೇಶದಲ್ಲಿ ಕಾಣುತ್ತಿರುವ ಎರಡನೇ ಪಿಂಕ್ ಕಲರ್ ಪಾರಿವಾಳ
ಫೇಸ್ಬುಕ್ನಲ್ಲಿ ಪಾರಿವಾಳ ನೋಡಿದ ಮ್ಯಾಂಚೆಸ್ಟರ್ನ ಪೊಲೀಸರು
ಪಾರಿವಾಳಗಳನ್ನು ಎಲ್ಲಿಯಾದರೂ ಶುಭಕಾರ್ಯಕ್ರಮ ನಡೆಯುತ್ತಿದ್ದರೆ ಅಲ್ಲಿ ಹಾರಿ ಬಿಡುವುದು ನೋಡಿರುತ್ತೇವೆ. ಆ ಪಾರಿವಾಳಗಳು ಬಿಳಿ ಅಥವಾ ಬೂದು, ಕಂದು ಬಣ್ಣದಲ್ಲಿ ಇರುತ್ತಾವೆ. ಅಬ್ಬಾಬ್ಬ ಎಂದರೆ ಕಪ್ಪು ಬಣ್ಣದಲ್ಲಿ ನೋಡಬಹುದು. ಆದರೆ ಇಲ್ಲೊಂದು ಗುಲಾಬಿ (ಪಿಂಕ್) ಬಣ್ಣದ ಪಾರಿವಾಳವನ್ನು ನೋಡಿ ಪೊಲೀಸರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ನ ಮ್ಯಾಂಚೆಸ್ಟರ್ನ ಬರಿ ಟೌನ್ ಕಟ್ಟಡ ಒಂದರ ಮೇಲೆ ಆಹಾರವನ್ನು ಹಾಕಲಾಗಿತ್ತು. ಇದನ್ನು ತಿನ್ನಲು ಬಂದಿದ್ದ ಪಾರಿವಾಳವು ಗುಲಾಬಿ ಬಣ್ಣದಲ್ಲಿದ್ದು ಈ ಪಾರಿವಾಳ ನೋಡಿದ ಜನರು ಅಚ್ಚರಿಗೊಂಡಿದ್ದಾರೆ. ಈ ರೀತಿ ಪಿಂಕ್ ಕಲರ್ ಪಾರಿವಾಳ ಕಾಣುವುದು ಅಪರೂಪದಲ್ಲಿ ಅತೀ ಅಪರೂಪ ಎಂದೇ ಹೇಳಬಹುದು. ಅಲ್ಲದೇ ಮ್ಯಾಂಚೆಸ್ಟರ್ನ ಪೊಲೀಸರು ಕೂಡ ಈ ಗುಲಾಬಿ ಬಣ್ಣದ ಪಾರಿವಾಳವನ್ನು ಫೇಸ್ಬುಕ್ನಲ್ಲಿ ನೋಡಿ ಶಾಕ್ ಆಗಿದ್ದಾರೆ. ಕೆಲವು ಜನರು ಅದಕ್ಕೆ ಪಿಂಕ್ ಬಣ್ಣ ಬಳಿಯಲಾಗಿದೆ ಎಂದರೇ, ಇನ್ನು ಕೆಲವರು ಇಲ್ಲ ಅದರ ನಿಜವಾದ ಬಣ್ಣವೆಂದು ವಾದಿಸಿದ್ದಾರೆ.
Has anyone else seen this pink pigeon in Bury and does anyone know why it is pink?! #Bury #pinkpigeon #pigeon #pink #bird pic.twitter.com/wrx63R21TP
— Harriet Heywood (@Heywoodharriet_) September 9, 2023
ಆದರೆ ಈ ಹಿಂದೆ ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ಇದೇ ರೀತಿಯ ಗುಲಾಬಿ ಬಣ್ಣದ ಪಾರಿವಾಳ ಸಿಕ್ಕಿತ್ತು. ಅದನ್ನು ರಕ್ಷಣೆ ಮಾಡಿ ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಿದಾಗ ಅದು ಅಪೌಷ್ಠಿಕತೆಯಿಂದ ಬಳಲುತ್ತಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದರು ಎನ್ನಲಾಗಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಇದರ ಫೋಟೋ ವೈರಲ್ ಆಗಿದ್ದು ನೆಟ್ಟಿಗರು ಲೈಕ್ಸ್, ಕಾಮೆಂಟ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ