ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಭಾಗಿಯಾದ ಉಷಾ ಸುನಕ್
ಶಾಸಕ ಡಾ. ಉದಯ್ ಬಿ ಗರುಡಾಚಾರ್ ನಿವಾಸದಲ್ಲಿ ಸಂಭ್ರಮ
ಕೃಷ್ಣನ ವಿವಿಧ ಲೀಲೆಗಳನ್ನು ತೋರಿಸಿ ಖುಷಿ ಪಟ್ಟ ಸುಧಾ ಮೂರ್ತಿ
ಬೆಂಗಳೂರು: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ತಾಯಿ ಉಷಾ ಸುನಕ್ ಅವರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಂಡರು.
ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಚಿಕ್ಕಪೇಟೆ ಶಾಸಕ ಡಾ. ಉದಯ್ ಬಿ ಗರುಡಾಚಾರ್ ಅವರ ಜಯನಗರದ ನಿವಾಸದಲ್ಲಿ ಕೃಷ್ಣನ ವಿವಿಧ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಉಷಾ ಸುನಕ್ ಅವರು ಕೃಷ್ಣನ ವೈಶಿಷ್ಟ್ಯಗಳನ್ನು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಉಷಾ ಸುನಕ್ ಸಾಂಪ್ರದಾಯಿಕವಾಗಿ ಕೃಷ್ಣನಿಗೆ ಪೂಜೆ ನೆರವೇರಿಸಿದರು. ಉಷಾ ಸುನಕ್ ಅವರಿಗೆ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಸುಧಾ ಮೂರ್ತಿ ಅವರು ಕೃಷ್ಣನ ವಿವಿಧ ಮೂರ್ತಿಗಳನ್ನು ತೋರಿಸಿ ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಸುಧಾ ಮೂರ್ತಿ, ಡಾ. ಉದಯ್ ಗರುಡಾಚಾರ್, ಮೇದಿನಿ ಉದಯ್ ಗರುಡಾಚಾರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ವಿ. ಮಂಜುನಾಥ್, ವಿವಿಧ ನಿವಾಸಿಗಳ ಕಲ್ಯಾಣ ಸಂಘದ ಸದಸ್ಯರು ಭಾಗವಹಿಸಿದ್ದರು.
ದೆಹಲಿಯಲ್ಲಿ ನಡೆಯುತ್ತಿರುವ G20 ಶೃಂಗ ಸಭೆ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಕುಟುಂಬ ಸಮೇತ ಭಾರತಕ್ಕೆ ಭೇಟಿ ನೀಡಿದ್ದಾರೆ. ದೆಹಲಿಗೆ ಆಗಮಿಸಿದ ಉಷಾ ಸುನಕ್ ಅವರು ಬೆಂಗಳೂರಿನ ತಮ್ಮ ಬೀಗರ ಮನೆಗೆ ಆಗಮಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ