newsfirstkannada.com

WATCH: ಅಳಿಯನಿಗೆ ಅದ್ಧೂರಿ ಸ್ವಾಗತ.. ಭಾರತಕ್ಕೆ ಬರುತ್ತಿದ್ದಂತೆ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಹೇಳಿದ್ದೇನು?

Share :

08-09-2023

    G-20 ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮನ

    ರಿಷಿ ಸುನಕ್, ಅಕ್ಷತಾ ಮೂರ್ತಿ ದಂಪತಿಗೆ ಅದ್ಧೂರಿ ಸ್ವಾಗತ

    ಸುನಕ್ ದಂಪತಿಗೆ ಸ್ವಾಗತ ಕೋರಿದ ಅಶ್ವಿನಿ ಕುಮಾರ್ ಚೌಬೆ

ನವದೆಹಲಿ: ಮೊದಲ ಬಾರಿಗೆ G-20 ಶೃಂಗಸಭೆಗೆ ಭಾರತ ಅಧ್ಯಕ್ಷತೆ ವಹಿಸುತ್ತಿದ್ದು ದೆಹಲಿಯು ಅರಮನೆಯಂತೆ ಸಿಂಗಾರಗೊಂಡಿದೆ. ಈಗಾಗಲೇ ವಿಶ್ವದ ಅನೇಕ ಗಣ್ಯರು ಆಗಮಿಸಿದ್ದಾಗಿದೆ. ಜೊತೆಗೆ ಇಂದು ಮಧ್ಯಾಹ್ನ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಪತ್ನಿ ಅಕ್ಷತಾ ಮೂರ್ತಿ ಜೊತೆ G-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನದ ಮೂಲಕ ಆಗಮಿಸಿದರು.

ಯು.ಕೆ ಪ್ರಧಾನಿ ರಿಷಿ ಸುನಕ್ ದಂಪತಿಯನ್ನು ಸ್ವಾಗತಿಸಿದ ಕ್ಷಣ

ಬ್ರಿಟನ್ ಪ್ರಧಾನಿ ರಿಷಿ ಸುನಕ್, ಪತ್ನಿ ಅಕ್ಷತಾ ಮೂರ್ತಿ ದೆಹಲಿಯಲ್ಲಿ ವಿಮಾನವನ್ನು ಇಳಿಯುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಆಹಾರ ಮತ್ತು ಸಾರ್ವಜನಿಕ ವಿತರಣೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಸುನಕ್ ದಂಪತಿಗಳನ್ನ ಸ್ವಾಗತಿಸಿದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಸುನಕ್ ದಂಪತಿ ಆಗಮನ ಹಿನ್ನೆಲೆಯಲ್ಲಿ ಪಂಜಾಬಿ ಡ್ಯಾನ್ಸ್​ ಅಯೋಜನೆ ಮಾಡಲಾಗಿತ್ತು. ಇದನ್ನು ನೋಡಿದ ಸುನಕ್ ಅವರು ಕೈ ಬಿಸಿ ನಮಸ್ಕರಿಸಿ ಬಳಿಕ ತೆರಳಿದರು.

ಬ್ರಿಟನ್ ಪ್ರಧಾನಿ ರಿಷಿ ಸುನಕ್​ ಅವರು G-20 ಶೃಂಗಸಭೆಯಲ್ಲಿ ಭಾಗವಹಿಸಲು ವಿಶೇಷ ವಿಮಾನದ ಮೂಲಕ ಇಂಗ್ಲೆಂಡ್​ನಿಂದ ಆಗಮಿಸುತ್ತಿದ್ದರು. ಈ ವೇಳೆ ವಿಮಾನದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಂತಸದಿಂದ ಉತ್ತರಿಸಿದ್ದಾರೆ. ಈ ಬಾರಿ G-20 ಶೃಂಗಸಭೆ ನನಗೆ ತುಂಬಾ ವಿಶೇಷವಾಗಿದ್ದು ಇದರಲ್ಲಿ ಭಾಗವಹಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಾನು ಭಾರತದ ಅಳಿಯ, ಭಾರತಕ್ಕೆ ಬರುತ್ತಿರೋದು ಸಖತ್ ಖುಷಿಯ ಸಂಗತಿ ಎಂದು ಸುನಕ್ ತಮಾಷೆ ಮಾಡಿದ್ದಾರೆ.

ಇನ್ನು ಭಾರತದ ಪ್ರತಿಷ್ಠಿತ ಕಂಪನಿಯಾದ ಇನ್ಫೋಸಿಸ್​ನ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿಯ ದಂಪತಿಯ ಮಗಳಾದ ಅಕ್ಷತಾ ಮೂರ್ತಿಯನ್ನು ಸುನಕ್ ಅವರು ವಿವಾಹವಾಗಿದ್ದಾರೆ. ಹೀಗಾಗಿ ನಾನು ಭಾರತದ ಅಳಿಯ ಎಂದು ಹೇಳಿ ಖುಷಿ ಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಅಳಿಯನಿಗೆ ಅದ್ಧೂರಿ ಸ್ವಾಗತ.. ಭಾರತಕ್ಕೆ ಬರುತ್ತಿದ್ದಂತೆ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಹೇಳಿದ್ದೇನು?

https://newsfirstlive.com/wp-content/uploads/2023/09/Rishi_Sunak_2.jpg

Load More