ಉಮೇಶ್ ಯಾದವ್ ತಂದೆ ತಿಲಕ್ ಯಾದವ್ ನಿಧನರಾಗಿದ್ದಾರೆ
ತಿಲಕ್ ಯಾದವ್ ಅವರು ಕಲ್ಲಿದ್ದಲು ಗಣಿಯಲ್ಲಿ ಉದ್ಯೋಗಿಯಾಗಿದ್ದರು
ಉಮೇಶ್ ಯಾದವ್ ಮೂರನೇ ಟೆಸ್ಟ್ ಆಡೋದು ಡೌಟ್
ಟೀಂ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯವೂ ಮಾರ್ಚ್ 1ನೇ ತಾರೀಕಿನಿಂದ ಶುರುವಾಗಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಟೀಂ ಇಂಡಿಯಾದ ವೇಗಿ ಉಮೇಶ್ ಯಾದವ್ 3ನೇ ಟೆಸ್ಟ್ ಪಂದ್ಯ ಆಡಲಿದ್ದಾರೆ ಎನ್ನಲಾಗಿತ್ತು. ಈ ಮಧ್ಯೆ ಸ್ಟಾರ್ ಬೌಲರ್ ಉಮೇಶ್ ಯಾದವ್ ಮನೆಯಲ್ಲಿ ದುಃಖಕರ ಘಟನೆಯೊಂದು ಸಂಭವಿಸಿದೆ. ಉಮೇಶ್ ಯಾದವ್ ಅವರ ತಂದೆ ತಿಲಕ್ ಯಾದವ್ (74) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಹಲವು ವರ್ಷಗಳಿಂದ ತಿಲಕ್ ಯಾದವ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಈಗ ಚಿಕಿತ್ಸೆ ಫಲಿಸದೇ ತಿಲಕ್ ಯಾದವ್ ಅವರು ವಿಧಿವಶರಾಗಿದ್ದಾರೆ. ತಿಲಕ್ ಯಾದವ್ ಅವರು ಕಲ್ಲಿದ್ದಲು ಗಣಿಯಲ್ಲಿ ಉದ್ಯೋಗಿಯಾಗಿದ್ದರು.
ಇನ್ನು, ಈಗಾಗಲೇ ಉಮೇಶ್ ಯಾದವ್ ತಂದೆ ಅಂತಿಮ ವಿಧಿವಿಧಾನ ಮಾಡಲು ಮನೆಗೆ ತೆರಳಿದ್ದಾರೆ. ಮೊದಲೆರಡು ಟೆಸ್ಟ್ಗಳಿಗೆ ಅಲಭ್ಯರಾಗಿದ್ದ ಯಾದವ್ ಮುಂದಿನ ಮೂರು ಟೆಸ್ಟ್‌ಗಳಲ್ಲಿ ಆಡುತ್ತಿದ್ದರು ಎಂದು ವರದಿಯಾಗಿತ್ತು. ಈಗ ಉಳಿದ ಟೆಸ್ಟ್‌ಗಳಲ್ಲಿ ಉಮೇಶ್ ಯಾದವ್ ಸ್ಥಾನ ಪಡೆಯುವುದು ಡೌಟ್ ಆಗಿದೆ. ಟೀಂ ಇಂಡಿಯಾ ಪರ ಇದುವರೆಗೂ 54 ಟೆಸ್ಟ್ ಆಡಿರೋ ಉಮೇಶ್ 164 ವಿಕೆಟ್ ತೆಗೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ