newsfirstkannada.com

ಟೀಂ ಇಂಡಿಯಾಗೆ ಶನಿಯಂತೇ ಕಾಡಿದ ಅಂಪೈರ್​ ರಿಚರ್ಡ್​ ಕ್ಯಾಟಲ್‌ಬರೋ.. ನೆಟ್ಟಿಗರು ಇವ್ರರನ್ನ ಸುಮ್ನೆ ಬಿಡ್ತಾರಾ?

Share :

20-11-2023

    ಅಂದು ಬೇಸರ ಮೂಡಿಸಿದ್ದ, ಇಂದು ಬೇಸರ ಮೂಡಿಸಿದ

    ರಿಚರ್ಡ್​​ ಭಾರತದ ಪಾಲಿಗೆ ದುರಾದೃಷ್ಟವೆಂದ ಕ್ರಿಕೆಟ್​ ಫ್ಯಾನ್ಸ್​ ​

    ಆನ್​ ಫೀಲ್ಡ್​ ಅಂಪೈರ್ ರಿಚರ್ಡ್ ಬಗ್ಗೆ ಹೀಗೊಂದು ಮಾತು

2023ರ ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಸೋಲಿಗೆ ಹಲವು ಕಾರಣಗಳಿದ್ದು, ಅದರಲ್ಲಿ ಅಂಪೈರ್​ ರಿಚರ್ಡ್​ ಕ್ಯಾಟಲ್‌ಬರೋ ಅವರು ಕೂಡ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಇಂಗ್ಲೆಂಡ್​ ಮೂಲದ ಈ ಅಂಪೈರ್​ ಭಾರತಕ್ಕೆ ದುರಾದೃಷ್ಟ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮಾತ್ರವಲ್ಲದೆ ಈ ಬಗ್ಗೆ ದೊಡ್ಡ ಚರ್ಚೆಯೊಂದನ್ನು ಹುಟ್ಟುಹಾಕಿದ್ದಾರೆ.

ನಿನ್ನೆ ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಂಪೈರ್​ ರಿಚರ್ಡ್​ ಕ್ಯಾಟಲ್‌ಬರೋ ಆನ್​ ಫೀಲ್ಡ್​ ಅಂಪೈರ್​ ಆಗಿ ಕಾಣಿಸಿಕೊಂಡರು. ಅದರಲ್ಲೂ ಜಸ್ಪ್ರೀತ್​ ಬೂಮ್ರಾಗೆ ವಿಕೆಟ್​ ನೀಡಲು ನಿರಾಕರಿಸಿರುವುದು ಟೀಂ ಇಂಡಿಯಾ ಫ್ಯಾನ್ಸ್​ಗೆ ಬೇಸರಕ್ಕೆ ಕಾರಣವಾಯಿತು. ಇದೇ ಕಾರಣಕ್ಕೆ ಅವರನ್ನು ನೆಟ್ಟಿಗರು ದೂರುತ್ತಿದ್ದಾರೆ.

ಮತ್ತೆ ಬೇಸರ ಮೂಡಿಸಿದ ರಿಚರ್ಡ್​!

ರಿಚರ್ಡ್ ಕ್ಯಾಟಲ್‌ಬರೋ ಬಗ್ಗೆ ಟೀಂ ಇಂಡಿಯಾ ಕ್ರಿಕೆಟ್​ ಅಭಿಮಾನಿಗಳಿಗೆ ಈ ಮೊದಲೇ ಬೇಸರವಿತ್ತು. ಯಾಕೆಂದರೆ ನ್ಯೂಜಿಲೆಂಡ್​ ವಿರುದ್ಧದ 2019ರ ವಿಶ್ವಕಪ್​, ಸೆಮಿ-ಫೈನಲ್​ ಮತ್ತು ಟಿ-20 ವಿಶ್ವಕಪ್​ (2021) ಪಂದ್ಯದಲ್ಲಿ ಆನ್​-ಫೀಲ್ಡ್​ ಅಂಪೈರ್​ ಆಗಿದ್ದರು. ಈ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋತಿತ್ತು.

ನಿನ್ನೆ ನಡೆದ ಪಂದ್ಯದಲ್ಲಿ ರಿಚರ್ಡ್​ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಸಾಕಷ್ಟು ಜನರು ಈ ಬಗ್ಗೆ ಬರೆದುಕೊಂಡಿದ್ದಾರೆ. ಅದರಲ್ಲೊಬ್ಬ ವ್ಯಕ್ತಿ ‘ಬಿಸಿಸಿಐ ಮತ್ತು ಅಮಿತ್ ಶಾ ಅವರ ಮಗ ಐಸಿಸಿ ಮತ್ತು ಕ್ರಿಕೆಟ್ ಮೇಲೆ ಎಷ್ಟು ಹಿಡಿತ ಹೊಂದಿದ್ದಾರೆ ಎಂದರೆ ಅಂತಿಮ ಪಂದ್ಯಕ್ಕೆ ಅಂಪೈರ್ ರಿಚರ್ಡ್ ಕ್ಯಾಟಲ್‌ಬರೋ ಅವರನ್ನು ಬದಲಾಯಿಸಲು ಸಹ ಅವರಿಗೆ ಸಾಧ್ಯವಾಗಲಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬ ವ್ಯಕ್ತಿ ‘ಕೆಟ್ಟ ಜನಸಂದಣಿ! ರಿಚರ್ಡ್ ಕ್ಯಾಟಲ್‌ಬರೊಗಾಗಿ ಬೊಬ್ಬೆ ಹೊಡೆಯುವುದನ್ನು ನೀವು ಕೇಳಿದ್ದೀರಾ’ ಎಂದು ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಂ ಇಂಡಿಯಾಗೆ ಶನಿಯಂತೇ ಕಾಡಿದ ಅಂಪೈರ್​ ರಿಚರ್ಡ್​ ಕ್ಯಾಟಲ್‌ಬರೋ.. ನೆಟ್ಟಿಗರು ಇವ್ರರನ್ನ ಸುಮ್ನೆ ಬಿಡ್ತಾರಾ?

https://newsfirstlive.com/wp-content/uploads/2023/11/Richard-kettleborough.jpg

Load More