ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕಾರ
ಕದನ ವಿರಾಮಕ್ಕೆ 145 ರಾಷ್ಟ್ರಗಳಿಂದ ಮತ ಚಲಾವಣೆ
ನಿರ್ಣಯದ ವಿರುದ್ದ 14 ರಾಷ್ಟ್ರಗಳ ಮತ ಚಲಾವಣೆ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಸ್ರೇಲ್- ಪ್ಯಾಲೆಸ್ತೀನ್ ಮಧ್ಯೆ ತಕ್ಷಣವೇ ಕದನ ವಿರಾಮ ಘೋಷಣೆಗೆ ನಿರ್ಣಯ ಕೈಗೊಳ್ಳಲಾಗಿದೆ.
ಕದನ ವಿರಾಮ ನಿರ್ಣಯದ ಪರ 145 ರಾಷ್ಟ್ರಗಳಿಂದ ಮತ ಚಲಾವಣೆ ಆಗಿದೆ. ನಿರ್ಣಯದ ವಿರುದ್ಧ 14 ರಾಷ್ಟ್ರಗಳ ಮತ ಚಲಾವಣೆ ಆಗಿವೆ. ಮತ ಚಲಾವಣೆ ವೇಳೆ 45 ರಾಷ್ಟ್ರಗಳು ಗೈರಾಗಿದ್ದವು. ಮತ್ತೊಂದೆಡೆ ಅಮೆರಿಕಾದಿಂದ ಭೂಸೇನಾ ದಾಳಿ ನಡೆಸದಂತೆ ಇಸ್ರೇಲ್ ಮೇಲೆ ಒತ್ತಡ ಇದೆ. ಗಾಜಾ ಪಟ್ಟಿಯಲ್ಲಿ ಭೂಸೇನೆಯಿಂದ ದಾಳಿ ನಡೆಸದಂತೆ ಇಸ್ರೇಲ್ ಮೇಲೆ ಒತ್ತಡ ಹೇರಲಾಗಿದೆ. ಈಗಾಗಲೇ ಎರಡು ದಿನ ಇಸ್ರೇಲ್ ಭೂ ಸೇನೆಯಿಂದ ಗಾಜಾ ಪಟ್ಟಿ ಮೇಲೆ ದಾಳಿಯಾಗಿದೆ.
ಅಕ್ಟೋಬರ್ 7 ರಂದು ಪ್ಯಾಲೆಸ್ತೀನ್ ಬೆಂಬಲಿತ ಹಮಾಸ್ ಉಗ್ರರು ಇಸ್ರೇಲ್ ಮೇಲೆ 5000 ರಾಕೆಟ್ಗಳನ್ನು ಉಡಾಯಿಸಿ ಜೀವಹಾನಿ ಉಂಟುಮಾಡಿತ್ತು. ಇದರ ಪ್ರತೀಕಾರವಾಗಿ ಇಸ್ರೇಲ್, ಹಮಾಸ್ ಉಗ್ರರು ಮತ್ತು ಪ್ಯಾಲಿಸ್ತೀನ್ ವಿರುದ್ಧ ಸಮರ ಸಾರಿದೆ. ಅಂದಿನಿಂದ ಶುರುವಾದ ಈ ಯುದ್ಧ ಇನ್ನೂ ನಿಂತಿಲ್ಲ. ಪ್ಯಾಲಿಸ್ತೀನ್ನ 7326ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 18 ಸಾವಿರಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ