ಮೂರು ತಿಂಗಳು ಕೆಲಸ ಮಾಡಿ ಬಿಟ್ಟಿದ್ದ ಮಹಿಳೆಗೆ ಪ್ರಪೋಸ್
ಜಯನಗರದಲ್ಲಿ ಅಂಗಡಿ ನಡೆಸ್ತಿರೋ ಹಿತೇಂದ್ರ ಕುಮಾರ್
ಬಿಟಿಎಂ ಲೇಔಟ್ನ ಪಾರ್ಕ್ವೊಂದರಲ್ಲಿ ನಡೀತು ಲವ್ ಅಂಡ್ ಬ್ರೇಕ್ ಅಪ್
ಬೆಂಗಳೂರು: ಇದು ಅಂಕಲ್, ಆಂಟಿ ಒನ್ ಡೇ ಲವ್ ಸ್ಟೋರಿ! ಮಹಿಳೆಗೆ ಪ್ರಪೋಸ್ ಮಾಡಿದ ಖುಷಿಯಲ್ಲಿದ್ದ ವ್ಯಕ್ತಿಗೆ ಆಘಾತ ಆಗಿದ್ದು, ಒಂದೇ ದಿನದಲ್ಲಿ ಬ್ರೇಕ್ ಅಪ್ ಆಗಿದೆ. ಸುದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಒಂದು ದಿನದ ಪ್ರೇಮದ ಕತೆ ನಡೆದಿದೆ.
ಇದನ್ನೂ ಓದಿ: ಸೀರಿಯಲ್ ಬಿಟ್ಟು ವಿದೇಶಕ್ಕೆ ಹಾರಿದ ಕಿರುತೆರೆ ನಟಿ ಮೋಕ್ಷಿತಾ ಪೈ; ಸದ್ಯದಲ್ಲೇ ಗುಡ್ನ್ಯೂಸ್ ಕೊಡ್ತಾರಾ?
ಹಿತೇಂದ್ರ ಕುಮಾರ್ ಅನ್ನೋರು ಜಯನಗರದಲ್ಲಿ ಅಂಗಡಿ ಒಂದನ್ನು ನಡೆಸುತ್ತಿದ್ದರು. ಜೂನ್ನಲ್ಲಿ ಮಹಿಳೆಯೊಬ್ಬರು ಅವರ ಅಂಗಡಿಗೆ ಕೆಲಸಕ್ಕೆ ಸೇರಿದ್ದರು. ಎರಡ್ಮೂರು ತಿಂಗಳುಗಳ ಕಾಲ ಕೆಲಸ ಮಾಡಿದ್ದ ಅವರು, ನಂತರ ಡ್ಯೂಟಿಗೆ ಬಂದಿರಲಿಲ್ಲ. ಸೆಪ್ಟೆಂಬರ್ 14 ರಂದು ಹಿತೇಂದ್ರ, ಆ ಮಹಿಳೆಗೆ ಭೇಟಿಯಾಗಲು ಆಹ್ವಾನ ನೀಡಿದ್ದ. ಅಂತೆಯೇ ಇಬ್ಬರು ಬಿಟಿಎಂ ಲೇಔಟ್ನ ಪಾರ್ಕ್ ಒಂದರಲ್ಲಿ ಭೇಟಿಯಾಗಿದ್ದರು.
ಈ ವೇಳೆ ಮಹಿಳೆಗೆ ಹಿತೇಂದ್ರ ಕುಮಾರ್, ಲವ್ ಪ್ರಪೋಸ್ ಇಟ್ಟಿದ್ದಾನೆ. ಅದಕ್ಕೆ ಮಹಿಳೆ ಕೂಡ ಒಕೆ ಎಂದಿದ್ದಾಳೆ ಎನ್ನಲಾಗಿದೆ. ಅಂದು ಇಡೀ ದಿನ ಅದೇ ಪಾರ್ಕ್ನಲ್ಲಿ ಸುತ್ತಾಡಿ ಹೋಗಿದ್ದರು. ಮರು ದಿನ ಮತ್ತೆ ಭೇಟಿ ಆಗುವಂತೆ ಹಿತೇಂದ್ರ ಕರೆದಿದ್ದ. ಆಗ ಹಿತೇಂದ್ರಗೆ ಶಾಕ್ ಒಂದು ಕಾದಿತ್ತು. ಮಹಿಳೆಯ ಸ್ನೇಹಿತ ಸಿದ್ದು ಎಂಬಾತ ಅದೇ ಪಾರ್ಕ್ಗೆ ಎಂಟ್ರಿ ನೀಡಿದ್ದ.
ಇಬ್ಬರು ಪ್ರೇಮಿಗಳನ್ನು ನೋಡಿದ ಈತ, ರೋಸಿ ಹೋಗಿದ್ದಾನೆ. ಕೋಪಕ್ಕೆ ಬುದ್ಧಿಕೊಟ್ಟ ಸಿದ್ದು, ಹಿತೇಂದ್ರನಿಗೆ ಚಾಕು ಇರಿದಿದ್ದಾನೆ. ಹಿತೇಂದ್ರನ ಹೊಟ್ಟೆ, ಬೆನ್ನು ಸೇರಿ ಹಲವೆಡೆ ಚಾಕು ಚುಚ್ಚಿ ಗಾಯಗೊಳಿಸಿದ್ದಾನೆ. ಉದ್ದೇಶ ಪೂರ್ವಕವಾಗಿ ತನ್ನನ್ನು ಕೊಲೆ ಮಾಡಲು ಯತ್ನ ಮಾಡಿದ್ದಾರೆ ಅಂತಾ ಹಿತೇಂದ್ರ ಕುಮಾರ್ ಸುದ್ದುಗುಂಟೆ ಪಾಳ್ಯ ಠಾಣೆಯಲ್ಲಿ ಪ್ರೀತಿಸ್ತಿದ್ದ ಮಹಿಳೆ ಹಾಗೂ ಆಕೆಯ ಸ್ನೇಹಿತನ ವಿರುದ್ಧ ದೂರು ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ