newsfirstkannada.com

Breaking: ಕುಸಿದ ನಿರ್ಮಾಣ ಹಂತದಲ್ಲಿರುವ ಸುರಂಗ ಮಾರ್ಗ; 36 ಕಾರ್ಮಿಕರು ನಾಪತ್ತೆ

Share :

12-11-2023

    ಉತ್ತರಕಾಶಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಮಾರ್ಗ

    ಸುರಂಗದ ಒಳಗೆ ಸಿಲುಕಿದ್ದ ಸುಮಾರು 36 ಕಾರ್ಮಿಕರು ನಾಪತ್ತೆ

    ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಧಿ ತಂಡದಿಂದ ಕಾರ್ಯಚರಣೆ

ಉತ್ತರಾಖಂಡ: ನಿರ್ಮಾಣ ಹಂತದಲ್ಲಿರುವ ಸುರಂಗ ಮಾರ್ಗ ಕುಸಿದು ಬಿದ್ದ ಘಟನೆ ಉತ್ತರಕಾಶಿ ಜಿಲ್ಲೆಯಲ್ಲಿ ನಡೆದಿದೆ. ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾದಿಂದ ದಾಂಡಲ್‌ಗಾಂವ್‌ಗೆ ಸಂಪರ್ಕಿಸುವ ಸುರಂಗ ಮಾರ್ಗ ಇದಾಗಿದೆ. ಇದರೊಳಗೆ 36 ಕಾರ್ಮಿಕರು ಸಿಲುಕಿದ್ದಾರೆಂದು ತಿಳಿದುಬಂದಿದೆ.

ನವಯುಗ ಕಂಪನಿಯು ನಿರ್ಮಿಸುತ್ತಿರುವ ಸುರಂಗ ಇದಾಗಿದ್ದು, 4.5 ಕಿಮೀ ಸುರಂಗ ನಿರ್ಮಾಣದ ವೇಳೆ ಘಟನೆ ಸಂಭವಿಸಿದೆ. ಯಾವುದೇ ಪ್ರಾಣಹಾನಿ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆದರೆ ಕಾರ್ಮಿಕರ ರಕ್ಷಣೆಗೆ 2-3 ದಿನಗಳು ಹಿಡಿಯಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಕಾರ್ಮಿಕರ ಬಳಿ ಸಾಕಷ್ಟು ಆಕ್ಸಿಜನ್​ ಸಿಲಿಂಡರ್​ ಇದ್ದು, ನಿರ್ಮಾಣ ಹಂತದ ಸುರಂಗದಲ್ಲಿ 50 ಮೀಟರ್ ಕುಸಿದಿದೆ ಎಂದು ಹೇಳಲಾಗುತ್ತಿದೆ.

ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ನಾಲ್ಕೂವರೆ ಕಿಲೋಮೀಟರ್ ಉದ್ದದ ಸುರಂಗದ ಮಾರ್ಗದಲ್ಲಿ 150 ಮೀಟರ್ ಉದ್ದದ ಭಾಗ ಕುಸಿದಿದೆ ಎಂದು ಉತ್ತರಕಾಶಿ ಎಸ್​ಪಿ ಅರ್ಪಣ್ ಯದುವಂಶಿ ಮಾಹಿತಿ ಹಂಚಿಕೊಂಡಿದ್ದಾರೆ.

ಸದ್ಯ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಧಿ ತಂಡಗಳು ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಕುಸಿದ ನಿರ್ಮಾಣ ಹಂತದಲ್ಲಿರುವ ಸುರಂಗ ಮಾರ್ಗ; 36 ಕಾರ್ಮಿಕರು ನಾಪತ್ತೆ

https://newsfirstlive.com/wp-content/uploads/2023/11/Tunnel.jpg

Load More