newsfirstkannada.com

×

ಮೋದಿ ಸರ್ಕಾರದಿಂದ ಗುಡ್‌ನ್ಯೂಸ್.. ಅತಿ ಕಡಿಮೆ ಬಡ್ಡಿಗೆ 3 ಲಕ್ಷದವರೆಗೂ ಸಾಲ; ಯಾರಿಗೆ ಸಿಗುತ್ತೆ?

Share :

Published August 16, 2023 at 9:05pm

    ಕೇವಲ 5% ರಷ್ಟು ಬಡ್ಡಿ ಮಾತ್ರ, ಇನ್ನು ಯೋಜನೆಯಲ್ಲಿ ಏನೇನಿದೆ?

    30 ಲಕ್ಷ ಸಾಂಪ್ರದಾಯಿಕ ಕುಶಲಕರ್ಮಿಗಳಿಗಾಗಿ ಈ ಯೋಜನೆ

    ಯಾಱರಿಗೆ ಕೇಂದ್ರ ಸರ್ಕಾರ ಎಷ್ಟು ಲಕ್ಷ ಹಣ ನೀಡುತ್ತೆ ಗೊತ್ತಾ?

ಆಗಸ್ಟ್​ 15 ಸ್ವಾತಂತ್ರ್ಯೋತ್ಸವ ದಿನದಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದ ‘ಪ್ರಧಾನಮಂತ್ರಿ ವಿಶ್ವಕರ್ಮ’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ನೇಕಾರರು, ಅಕ್ಕಸಾಲಿಗರು, ಲಾಂಡ್ರಿ ಕೆಲಸಗಾರರು ಮತ್ತು ಕ್ಷೌರಿಕರು, ಕಮ್ಮಾರರು ಸೇರಿದಂತೆ 30 ಲಕ್ಷ ಸಾಂಪ್ರದಾಯಿಕ ಕುಶಲಕರ್ಮಿಗಳು ಈ ಯೋಜನೆಯ ಉಪಯೋಗ ಪಡೆಯಲಿದ್ದಾರೆ.

ಮೊದಲ ಕಂತಿನಲ್ಲಿ 1 ಲಕ್ಷ, 2ನೇ ಕಂತಿನಲ್ಲಿ 2 ಲಕ್ಷ ಸಾಲ, ಬಡ್ಡಿ.?

ಪ್ರಧಾನಿ ಮೋದಿಯವರು ನಿನ್ನೆ ಸ್ವಾತಂತ್ರ್ಯೋತ್ಸವ ಪ್ರಯುಕ್ತ ದೆಹಲಿಯ ಕೆಂಪುಕೋಟೆ ಮೇಲೆ ಧ್ಜಜಾರೋಹಣ ನೆರವೇರಿಸಿದರು. ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ವಿಶ್ವಕರ್ಮ ಯೋಜನೆಯನ್ನು ಘೋಷಣೆ ಮಾಡಿ, ಇದು ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ ಎಂದಿದ್ದರು. ಅದರಂತೆ ಇಂದು ಕೇಂದ್ರ ಸಚಿವ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿದೆ. 13,000 ಕೋಟಿ ರೂಪಾಯಿಗಳ ಈ ಯೋಜನೆಯಡಿ ಮೊದಲ ಕಂತಿನಲ್ಲಿ 1 ಲಕ್ಷ ರೂ.ಗಳನ್ನು, ನಂತರ 2ನೇ ಕಂತಿನಲ್ಲಿ 2 ಲಕ್ಷ ರೂ.ಗಳನ್ನು ಕುಶಲಕರ್ಮಿಗಳಿಗೆ ನೀಡಲಾಗುವುದು. ಇದಕ್ಕೆ ಕೇವಲ 5% ರಷ್ಟು ವಾರ್ಷಿಕ ಬಡ್ಡಿಯನ್ನು ಸರ್ಕಾರ ವಿಧಿಸುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ

ಹಿಂದುಳಿದ ಸಮುದಾಯಗಳಿಗೆ ಈ ಯೋಜನೆ..!

ಈ ಮಹತ್ವದ ಯೋಜನೆ 18 ಸಾಂಪ್ರದಾಯಿಕ ವಹಿವಾಟುಗಳನ್ನು ಒಳಗೊಂಡಿದ್ದು ನೇಕಾರರು, ಅಕ್ಕಸಾಲಿಗರು, ಕಮ್ಮಾರರು ಸೇರಿದಂತೆ ಇತರೆ ಸಮುದಾಯದ ಕುಟುಂಬಗಳನ್ನು ಸಬಲೀಕರಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ವಿಶ್ವಕರ್ಮ ಜಯಂತಿಯಂದು ಇದನ್ನು ಇನ್ನಷ್ಟು ವಿಸ್ತರಿಸಲಾಗುವುದು. ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಅದರಲ್ಲಿ ವಿಶೇಷವಾಗಿ ಒಬಿಸಿ ಸಮುದಾಯಗಳು ಇದರ ಪ್ರಯೋಜನ ಇನ್ನಷ್ಟು ಪಡೆಯಲಿದ್ದಾರೆ. ರಾಜ್ಯ ಸರ್ಕಾರದಿಂದ ಸಹಕಾರ ಇರಲಿದ್ದು ಕೇಂದ್ರ ಸರ್ಕಾರವೇ ಸಂಪೂರ್ಣ ಫಂಡ್ ನೀಡಲಿದೆ.

ಫಲಾನುಭವಿಗಳು ಈ ಯೋಜನೆಯನ್ನು ಗ್ರಾಮಗಳಲ್ಲಿ ರಿಜಿಸ್ಟರ್ ಮಾಡಿಸಿ ಪಂಚಾಯತ್​ಗಳಲ್ಲಿ ಪರಿಶೀಲನೆ ಮಾಡಿಸಬೇಕು. ಸುಮಾರು 6 ಲಕ್ಷ ಕುಟುಂಬಗಳಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಅಲ್ಲದೇ ಮುಂದಿನ 5 ವರ್ಷದಲ್ಲಿ 30 ಲಕ್ಷ ಪರಿವಾರಗಳು ಈ ಯೋಜನೆಯಡಿ ತರಬೇತಿ ಪಡೆಯಲಿವೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಸರ್ಕಾರದಿಂದ ಗುಡ್‌ನ್ಯೂಸ್.. ಅತಿ ಕಡಿಮೆ ಬಡ್ಡಿಗೆ 3 ಲಕ್ಷದವರೆಗೂ ಸಾಲ; ಯಾರಿಗೆ ಸಿಗುತ್ತೆ?

https://newsfirstlive.com/wp-content/uploads/2023/08/PM_MODI-1-1.jpg

Load More