‘ಹಿಂದಿ ದಿವಸ್’ಗೆ ಶುಭ ಕೋರಿದ ಕೇಂದ್ರ ಸಚಿವ
‘ದೇಶದಲ್ಲಿ ಹಿಂದಿ ಪ್ರಮುಖ ಪಾತ್ರ ವಹಿಸಿದೆ’
‘ದೇಶ ಒಂದುಗೂಡಿಸುವ ಕೆಲಸ ಹಿಂದಿ ಮಾಡಿದೆ’
ಹಿಂದಿ ದಿನದ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ. ಹಿಂದಿ ಪ್ರಜಾಸತ್ತಾತ್ಮಕ ಭಾಷೆಯಾಗಿದೆ. ಹಿಂದಿ ದೇಶದಲ್ಲಿ ಏಕತೆಯ ಭಾವನೆಯನ್ನು ಸ್ಥಾಪಿಸಿದೆ ಎಂದು ಅವರು ಹೇಳಿದ್ದಾರೆ.
‘ಹಿಂದಿ ದಿವಸ್’ ಸಂದರ್ಭದಲ್ಲಿ ಎಲ್ಲರಿಗೂ ಶುಭ ಹಾರೈಸುತ್ತೇನೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಭಾಷೆಗಳ ವೈವಿಧ್ಯತೆಯನ್ನು ಏಕೀಕರಿಸುವ ಹೆಸರೇ ‘ಹಿಂದಿ’. ಸ್ವಾತಂತ್ರ್ಯ ಚಳವಳಿಯಿಂದ ಇಂದಿನವರೆಗೆ ದೇಶವನ್ನು ಕಟ್ಟುವಲ್ಲಿ ಹಿಂದಿ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿ ಹಿಂದಿ ದಿವಸ್ ಸಂದರ್ಭದಲ್ಲಿ ಅಧಿಕೃತ ಭಾಷೆ ಹಿಂದಿ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳನ್ನು ಬಲಪಡಿಸುವ ಪ್ರತಿಜ್ಞೆ ತೆಗೆದುಕೊಳ್ಳೋಣ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಹಿಂದಿ ಭಾಷೆ ಸ್ವಾತಂತ್ರ್ಯ ಚಳವಳಿಯಲ್ಲಿ ದೇಶವನ್ನು ಕಟ್ಟುವಲ್ಲಿ ಅಭೂತಪೂರ್ವ ಕೆಲಸ ಮಾಡಿದೆ. ಅನೇಕ ಭಾಷೆಗಳು ಮತ್ತು ಉಪಭಾಷೆಗಳಾಗಿ ವಿಂಗಡಿಸಲಾದ ದೇಶದಲ್ಲಿ ಏಕತೆಯ ಭಾವನೆಯನ್ನು ಹಿಂದಿ ಸ್ಥಾಪಿಸಿತು. ಸ್ವಾತಂತ್ರ್ಯ ಚಳವಳಿಯಲ್ಲಿ ಹಿಂದಿಯ ಪ್ರಮುಖ ಪಾತ್ರವನ್ನು ಪರಿಗಣಿಸಿ ಮತ್ತು ಸ್ವಾತಂತ್ರ್ಯದ ನಂತರ 14 ಸೆಪ್ಟೆಂಬರ್ 1949 ರಂದು ಹಿಂದಿಯನ್ನು ದೇಶದ ಅಧಿಕೃತ ಭಾಷೆಯಾಗಿ ಸ್ವೀಕರಿಸಲಾಯಿತು. ಭಾರತವು ವೈವಿಧ್ಯಮಯ ಭಾಷೆಗಳ ದೇಶ ಎಂದಿದ್ದಾರೆ.
हिंदी दिवस के अवसर पर मेरा संदेश… https://t.co/SVhPFu0Kra
— Amit Shah (@AmitShah) September 14, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ