newsfirstkannada.com

×

‘ನಾನ್ಯಾವತ್ತೂ ಬೆಂಕಿ ಹಚ್ಚೋ ಕೆಲಸ ಮಾಡಿಲ್ಲ’- ನಾಗಮಂಗಲ ಕೇಸ್‌ಗೆ ಹೊಸ ಟ್ವಿಸ್ಟ್‌ ಕೊಟ್ಟ HDK; ಏನಂದ್ರು?

Share :

Published September 12, 2024 at 2:52pm

Update September 12, 2024 at 2:55pm

    ‘ಇಂಥಾ ಗೃಹ ಸಚಿವರು ರಾಜ್ಯದಲ್ಲಿರೋದು ದುರಾದೃಷ್ಟಕರ’

    ಕಾಂಗ್ರೆಸ್​ ನಾಯಕರು ನನಗೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ

    ನಾಗಮಂಗಲ ಗಣೇಶ ವಿಸರ್ಜನೆಯ ಗಲಭೆಗೆ ಕಾರಣ ಯಾರು?

ನವದೆಹಲಿ: ನಾಗಮಂಗಲದ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ರಾಜಕೀಯದ ತಿರುವು ಸಿಕ್ಕಿದೆ. ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡು ಕೆಂಡಾಮಂಡಲರಾಗಿದ್ದಾರೆ.

ಇದನ್ನೂ ಓದಿ: ‘ಮಂಡ್ಯದಲ್ಲಿ ಇಂತಹ ಗಲಾಟೆ ನಡೆದಿರಲಿಲ್ಲ’- ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ 

ದೆಹಲಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಹೆಚ್‌ಡಿಕೆ, ನಾಗಮಂಗಲದ ಗಲಭೆಯನ್ನು ಸಣ್ಣ ಘಟನೆ ಅಂತ ಹೇಳ್ತಾರೆ. ಪೆಟ್ರೋಲ್​ಗಳನ್ನ​ ಬಾಂಬ್​ ಎಸೆದಿದ್ದು ಸಣ್ಣ ಘಟನೆನಾ? ತಲವಾರ್​ಗಳನ್ನ ಹಿಡಿದು ಓಡಾಡಿದ್ದು ಸಣ್ಣ ಘಟನೆನಾ? ಇಂಥಾ ಗೃಹ ಸಚಿವರು ರಾಜ್ಯದಲ್ಲಿರೋದು ದುರಾದೃಷ್ಟ. ಕಾಂಗ್ರೆಸ್​ ನಾಯಕರು ನನಗೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ. ನಾನ್ಯಾವತ್ತೂ ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ ಎಂದು HDK ಕಿಡಿಕಾರಿದ್ದಾರೆ.

ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ಮತ್ತು ಚಪ್ಪಲಿ ತೂರಾಟ‌ ನಡೆದಿದೆ. ಇದು ಮಂಡ್ಯ ಜಿಲ್ಲೆಯಲ್ಲೇ ನಡೆದಿರುವ ಮೊದಲ ಪ್ರಕರಣ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದು ವರ್ಗವನ್ನು ಓಲೈಸಿದ್ದು ಈ ರೀತಿ ಘಟನೆಯಾಗಿದೆ. 30ಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಇಂತಹ ದೊಡ್ಡ ಘಟನೆಯನ್ನು ರಾಜ್ಯದ ಗೃಹ ಸಚಿವರು ಚಿಕ್ಕ ವಿಚಾರ ಅಂದಿರೋದು ಇದು ದುರದೃಷ್ಟಕರ ಎಂದಿದ್ದಾರೆ.

ಇದನ್ನೂ ಓದಿ: ಗಣೇಶ ಮೆರವಣಿಗೆಯಲ್ಲಿ ಅಹಿತಕರ ಘಟನೆ, 144 ಸೆಕ್ಷನ್ ಜಾರಿ.. ನಾಗಮಂಗಲ ಬಂದ್ 

ಎರಡು ಬಾರಿ ನಾನು ಸಿಎಂ ಆಗಿ ಕೆಲಸ ಮಾಡಿದ್ದೇನೆ. ಎಂದೂ ಸಹ ನಾನು ಬೆಂಕಿ ಹಚ್ಚೊ ಕೆಲಸ ಮಾಡಿಲ್ಲ. ಬೆಂಕಿಯನ್ನು ಆರಿಸೋ ಕೆಲಸ ನಾನು ಮಾಡಿದ್ದೇನೆ. ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಒಂದು ಪಕ್ಷದವರಲ್ಲ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನವರು ಎಲ್ಲರೂ ಆ ಮೆರವಣಿಗೆಯಲ್ಲಿದ್ರು. ಇದರಲ್ಲಿ ನಾನು ರಾಜಕೀಯ ಮಾಡುತ್ತಿಲ್ಲ. ಎಲ್ಲಾ ವರ್ಗದವರು ಪೋಲಿಸ್ ಠಾಣೆಯ ಮುಂದೆ ಧರಣಿ ಕೂತಿದ್ದಾರೆ. ಯಾರಿಗೂ ಭಯ ಭಕ್ತಿ ಇಲ್ಲ. ಅಧಿಕಾರಿಗಳ ಶಕ್ತಿಯನ್ನ ನಿಷ್ಕ್ರಿಯಗೊಳಿಸಲಾಗಿದೆ. ಇಂದು ನಾನು ದೆಹಲಿಯಿಂದ ಬೆಂಗಳೂರಿಗೆ ಹೊರಡ್ತಿದ್ದೇನೆ. ನಾಳೆ ಬೆಳಗ್ಗೆ 7 ಗಂಟೆಗೆ ನಾಗಮಂಗಲಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಹೋಗಿ ವಾಸ್ತವವನ್ನ ಅರಿಯೋ ಕೆಲಸ ಮಾಡುತ್ತೇನೆ. ನಂತರ ವಾಸ್ತವ ಅಂಶ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾನ್ಯಾವತ್ತೂ ಬೆಂಕಿ ಹಚ್ಚೋ ಕೆಲಸ ಮಾಡಿಲ್ಲ’- ನಾಗಮಂಗಲ ಕೇಸ್‌ಗೆ ಹೊಸ ಟ್ವಿಸ್ಟ್‌ ಕೊಟ್ಟ HDK; ಏನಂದ್ರು?

https://newsfirstlive.com/wp-content/uploads/2024/02/PARAMESHWARA_HDK.jpg

Load More